ರಾಜ್ಯ ಪೊಲೀಸ್ ಇಲಾಖೆಯಲ್ಲಿ ಅಗ್ನಿವೀರರಿಗೆ ಹೆಚ್ಚಿನ ಮೀಸಲಾತಿ ನೀಡುವ ಬಗ್ಗೆ ಚಿಂತನೆ ನಡೆದಿದೆ: ಆರಗ ಜ್ಞಾನೆಂದ್ರ | Thinking of making more reservations for Agniveers in the state police department said Arnaga Gnanendra


ರಾಜ್ಯ ಪೊಲೀಸ್ ಇಲಾಖೆಯಲ್ಲಿ ಅಗ್ನಿವೀರರಿಗೆ ಹೆಚ್ಚಿನ ಮೀಸಲಾತಿ ನೀಡುವ ಬಗ್ಗೆ ಚಿಂತನೆ ನಡೆದಿದೆ: ಆರಗ ಜ್ಞಾನೆಂದ್ರ

ಗೃಹ ಸಚಿವ ಆರಗ ಜ್ಞಾನೇಂದ್ರ

ರಾಜ್ಯ ಸರ್ಕಾರದ ಪೊಲೀಸ್ ನೇಮಕಾತಿಯಲ್ಲೂ ಅಗ್ನಿವೀರರಿಗೆ ಹೆಚ್ಚಿನ ಮೀಸಲಾತಿ ಕೊಡುವ ಬಗ್ಗೆ ಯೋಚಿಸಲಾಗಿದೆ ಎಂದು ಗೃಹಸಚಿವ ಆರಗ ಜ್ಞಾನೆಂದ್ರ ಅವರು ಹೇಳಿದ್ದಾರೆ.

ಹಾಸನ: ನಮ್ಮ ರಾಜ್ಯ ಸರ್ಕಾರದ ಪೊಲೀಸ್ ನೇಮಕಾತಿಯಲ್ಲೂ ಅಗ್ನಿವೀರರಿಗೆ ಹೆಚ್ಚಿನ ಮೀಸಲಾತಿ ಕೊಡುವ ಬಗ್ಗೆ ಯೋಚಿಸಲಾಗಿದೆ ಎಂದು ಗೃಹಸಚಿವ ಆರಗ ಜ್ಞಾನೆಂದ್ರ (Araga Jnanendra) ಅವರು ಹೇಳಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಶೇ.10 ಮತ್ತು ಅಗ್ನಿಶಾಮಕದಲ್ಲಿ ಶೇ.50 ರಷ್ಟು ಮೀಸಲಾತಿ ಬಗ್ಗೆ ಯೋಚಿಸಲಾಗಿದೆ ಎಂದು ಹೇಳದ್ದಾರೆ. ಪ್ರತಿವರ್ಷ 45 ಸಾವಿರ ದೇಶ ಪ್ರೀತಿಸುವ ಜನರು ಸೇನೆಗೆ ಸೇರುತ್ತಿದ್ದಾರೆ. ಇದು ಬಹಳ ಒಳ್ಳೆಯದು. ಬೇರೆ ಬೇರೆ ದೇಶದಲ್ಲಿ ಹುಟ್ಟಿದ ಗಂಡು ಹೆಣ್ಣು ಎಲ್ಲರೂ ಸೇನೆಗೆ ಸೇವೆ ಮಾಡಬೇಕು ಎಂಬ ನಿಯಮ ಇದೆ. ನಮ್ಮಲ್ಲಿ ಅಂತ ವ್ಯವಸ್ಥೆ ಇರಲಿಲ್ಲ, ಈಗ ಬಂದಿದೆ. ನಮ್ಮ ಕಾಲದಲ್ಲಿ ಆಗಲಿಲ್ಲವಲ್ಲಾ ಎಂದು ಹತಾಶೆಯಿಂದ ಯೋಜನೆಯನ್ನು ಕಾಂಗ್ರೆಸ್ ಟೀಕೆ ಮಾಡುತ್ತಿದೆ ಎಂದು ಹೇಳಿದರು.

TV9 Kannada


Leave a Reply

Your email address will not be published.