ಬೆಂಗಳೂರು: ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ರಾಜ್ಯ ಬಿಜೆಪಿ ಇಂದು ಕೋರ್​ ಕಮಿಟಿ ಸಭೆ ನಡೆಸಿತು. ಮುಂದಿನ ಎರಡ್ಮೂರು ದಿನಗಳಲ್ಲಿ ಪಕ್ಷದ ವಿರುದ್ಧ, ಸರ್ಕಾರದ ವಿರುದ್ಧ ಹೇಳಿಕೆ ನೀಡಿದವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲು ಈ ಸಭೆಯಲ್ಲಿ ನಿರ್ಧರಿಸಲಾಗಿದೆ. ಅಲ್ಲದೇ ಸಿಎಂ ವಿರುದ್ಧ ಯಾರೆಲ್ಲಾ ಮುಖಂಡರು ಹೇಳಿಕೆ ನೀಡಿದ್ದಾರೋ ಅವರೆಲ್ಲರ ವಿರುದ್ಧವೂ ನಿರ್ದಾಕ್ಷಿಣ್ಯವಾದ ಕ್ರಮಕ್ಕೆ ನಿರ್ಣಯ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಇನ್ನು ಸಭೆ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಅಶೋಕ್​.. ಇಂದಿನ ಸಭೆಯಲ್ಲಿ ನಾಯಕತ್ವದ ಬದಲಾವಣೆ ಬಗ್ಗೆ ಚರ್ಚೆ ಆಗಿಲ್ಲ. ಯಾವುದೇ ಕಾರಣಕ್ಕೂ ಯಡಿಯೂರಪ್ಪ ಅವರ ಬದಲಾವಣೆ ಇಲ್ಲ. ಬಿಎಸ್​ವೈ ನೇತೃತ್ವದಲ್ಲಿ ಮುಂದಿನ ಚುನಾವಣೆ ನಡೆಯಲಿದೆ ಎಂದು ಅರುಣ್ ಸಿಂಗ್ ಹೇಳಲು ತಿಳಿಸಿದ್ದಾರೆ ಎಂದರು.

Image

ಎಷ್ಟೇ ದೊಡ್ಡ ನಾಯಕಾರಾಗಿದ್ದರೂ ಸರಿ
ಪಕ್ಷ ವಿರೋಧಿ‌ ಹೇಳಿಕೆ ನೀಡಿದ್ರೆ ಕಠಿಣ ಕ್ರಮ. ಯಾರೆಲ್ಲ ಸರ್ಕಾರದ ವಿರುದ್ಧ ಮಾತನಾಡಿದ್ದಾರೋ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ತೀರ್ಮಾನ ಆಗಿದೆ. ಇನ್ಮುಂದೆ ಸರ್ಕಾರ ಮತ್ತು ಪಕ್ಷ ವಿರೋಧಿ ಮಾತನಾಡಿದ್ರೆ ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ತೇವೆ. ಎಷ್ಟೇ ದೊಡ್ಡ ಲೀಡರ್ ಆದರೂ ಸರಿ ಕ್ರಮ ಖಂಡಿತ ಎಂದರು.

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲಿಗೆ ಹೋದವ್ರಿಗೆ ಸನ್ಮಾನ

ಇನ್ನು ಇಂದಿನ ಸಭೆಯಲ್ಲಿ ಕರ್ನಾಟಕದಲ್ಲಿ ಸರ್ಕಾರದ ಇಮೇಜ್ ಜಾಸ್ತಿ ಮಾಡೋದು. ಪಕ್ಷ ಮತ್ತು ಸರ್ಕಾರ ಒಟ್ಟಿಗೆ ಕೆಲಸ ಮಾಡಿ ಇಮೇಜ್ ಹೆಚ್ಚಿಸುವ ಬಗ್ಗೆ ಚರ್ಚೆಯಾಗಿದೆ. ತುರ್ತು ಪರಿಸ್ಥಿತಿ ಜಾರಿ ಮಾಡುವ ಮೂಲಕ ಕಾಂಗ್ರೆಸ್ ದೇಶದಲ್ಲಿ ದ್ರೋಹ ಎಸಗಿದೆ. ಆ ಹಿನ್ನೆಲೆಯಲ್ಲಿ ಜೂನ್ 25 ರಂದು ಕರಾಳ ದಿನಾಚರಣೆ ಆಚರಿಸಲು ನಿರ್ಧಾರ ಮಾಡಲಾಗಿದೆ. ಅಂದು ಜೈಲುವಾಸ ಅನುಭವಿಸಿದ್ದವರಿಗೆ ಸನ್ಮಾನ ಮಾಡಲು ತೀರ್ಮಾನ ಮಾಡಲಾಗಿದೆ. ಜೂನ್ 21ರಂದು ಯೋಗ ದಿನ. ಕೊರೊನಾ ನಿಯಮ ಪಾಲಿಸಿ ಯೋಗ ದಿನಾಚರಣೆ ಮಾಡ್ತೀವಿ ಎಂದರು.

The post ರಾಜ್ಯ ಬಿಜೆಪಿಗೆ ಯಡಿಯೂರಪ್ಪರೇ ಕಿಂಗ್; ಕಟ್ಟಪ್ಪಣೆ ಮಾಡಿ ಹೋದ ದೆಹಲಿ ಲೀಡರ್ appeared first on News First Kannada.

Source: newsfirstlive.com

Source link