ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಇರೋದನ್ನ ಒಪ್ಪಿಕೊಂಡ ಅರುಣ್ ಸಿಂಗ್​; ಆದ್ರೆ ಎಷ್ಟು ಶಾಸಕರಿಗೆ ಗೊತ್ತಾ?

ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಇರೋದನ್ನ ಒಪ್ಪಿಕೊಂಡ ಅರುಣ್ ಸಿಂಗ್​; ಆದ್ರೆ ಎಷ್ಟು ಶಾಸಕರಿಗೆ ಗೊತ್ತಾ?

ಬೆಂಗಳೂರು; ಭಾರತೀಯ ಜನತಾ ಪಕ್ಷದಲ್ಲಿ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ವಿರುದ್ಧ ಬಿನ್ನ ಮತ ಭುಗಿಲೆದ್ದಿದೆ ಮತ್ತು ಅವರನ್ನು ಕೆಳಗೆ ಇಳಿಸಬೇಕು ಅನ್ನೊ ಉದ್ದೇಶದಿಂದ ಪ್ರಯತ್ನ ನಡೆಸಲಾಗ್ತಿದೆ ಅನ್ನೋ ಗುಸು ಗುಸು ಕಳೆದ ಹಲವು ದಿನಗಳಿಂದ ಜೋರಾಗಿ ಕೇಳಿ ಬರ್ತಿದೆ. ಇದಕ್ಕೆ ತಕ್ಕಂತೆ ಕೆಲ ಶಾಸಕರು ನೀಡುತ್ತಿರುವ ಹೇಳಿಕೆಗಳು ಕೂಡ ಈ ವಾದಕ್ಕೆ ಪುಷ್ಠಿ ನೀಡುತ್ತಿದ್ದವು.

ಭಿನ್ನಮತ ಶಮನಕ್ಕೆ ಬೆಂಗಳೂರಿಗೆ ಆಗಮಿಸಿರುವ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಇಂದು ಹಲವು ಶಾಸಕರೊಂದಿಗೆ ಸಭೆ ನಡೆಸಿದ್ರು. ಎಲ್ಲರೊಂದಿಗೂ ಒನ್​-ಟು-ಒನ್​ ಮಾತನಾಡಿದ ಅರುಣ್​ ಸಿಂಗ್, ಸಭೆಯ ಬಳಿಕ ಮಹತ್ವದ ಹೇಳಿಕೆ ನೀಡಿದ್ದಾರೆ.

ನಮ್ಮ ಪಕ್ಷ ಲಕ್ಷಾಂತರ ಕಾರ್ಯಕರ್ತರ ಪಕ್ಷ. ಇಂಥ ಪಕ್ಷದಲ್ಲಿ 2 ರಿಂದ 3 ಶಾಸಕರು ವ್ಯತಿರಿಕ್ತ ಹೇಳಿಕೆ ನೀಡುತ್ತಿದ್ದಾರೆ. ಅಂಥ ಶಾಸಕರು ಬಹಿರಂಗವಾಗಿ ಕೊಡ್ತಿರೋ ಹೇಳಿಕೆಗಳಿಂದಾಗಿ ಪಕ್ಷಕ್ಕೆ ಸಾಕಷ್ಟು ಡ್ಯಾಮೇಜ್​ ಮಾಡ್ತಿದೆ. ಅಂಥ ಶಾಸಕರ ಹೇಳಿಕೆಯನ್ನು ಮತ್ತು ಅವರ ಕಾರ್ಯವೈಖರಿ ಬಗ್ಗೆ ಸಾಕ್ಷ್ಯಗಳನ್ನೂ ಸಂಗ್ರಹಿಸಿದ್ದೇವೆ. ಅಂಥವರ ವಿರುದ್ಧ ಖಂಡಿತವಾಗಿ ಕ್ರಮ ಕೈಗೊಳ್ಳುತ್ತೇವೆ ಅಂತಾ ಅರುಣ್ ಸಿಂಗ್ ಹೇಳಿದ್ರು. ಅಷ್ಟೇ ಅಲ್ಲ ನಾವು ಅಂಥವರ ವಿರುದ್ಧ ಏನು ಕ್ರಮ ಕೈಗೊಳ್ಳುತ್ತೇವೆ ಅನ್ನೋದನ್ನ ಬಹಿರಂಗ ಪಡಿಸಲ್ಲ. ಸದ್ಯ ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಅಂತಾ ಕೂಡ ಅರುಣ್ ಸಿಂಗ್ ಹೇಳಿದ್ರು. ಈ ಮೂಲಕ ನಾಯಕತ್ವ ಬದಲಾವಣೆ ಚರ್ಚೆಯನ್ನು ತಳ್ಳಿಹಾಕಿದ್ರು.

The post ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಇರೋದನ್ನ ಒಪ್ಪಿಕೊಂಡ ಅರುಣ್ ಸಿಂಗ್​; ಆದ್ರೆ ಎಷ್ಟು ಶಾಸಕರಿಗೆ ಗೊತ್ತಾ? appeared first on News First Kannada.

Source: newsfirstlive.com

Source link