ರಾಜ್ಯದ ಎಲ್ಲ ಮತದಾರರು ತಮ್ಮ ಮತದಾನ ಗುರುತಿನ ಚೀಟಿ ಸಂಖ್ಯೆಗೆ ಕೂಡಲೇ ಆಧಾರ್ ನಂಬರ್ನ್ನು ಲಿಂಕ್ ಮಾಡಿಕೊಳ್ಳಬೇಕೆಂದು ಚುನಾವಣಾ ಆಯೋಗ ಸೂಚಿಸಿದೆ ಎಂದು ಕಂದಾಯ ಇಲಾಖೆ ಸುತ್ತೋಲೆ ಹೊರಡಿಸಿದೆ.

ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯದ ಎಲ್ಲ ಮತದಾರರು (Voters) ತಮ್ಮ ಮತದಾನ ಗುರುತಿನ ಚೀಟಿ ಸಂಖ್ಯೆಗೆ ಕೂಡಲೇ ಆಧಾರ್ (Aadhar) ನಂಬರ್ನ್ನು ಲಿಂಕ್ ಮಾಡಿಕೊಳ್ಳಬೇಕೆಂದು ಚುನಾವಣಾ ಆಯೋಗ ಸೂಚಿಸಿದೆ ಕಂದಾಯ ಇಲಾಖೆ ಸುತ್ತೋಲೆ ಹೊರಡಿಸಿದೆ. “ಕರ್ನಾಟಕ ರಾಜ್ಯ ಚುನಾವಣಾ ಆಯೋಗವು (Election Commission) ರಾಜ್ಯದ ಎಲ್ಲಾ ಮತದಾರರ ಗುರುತಿನ ಚೀಟಿ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಲು ನಿರ್ಧರಿಸಿದ್ದು, ಎಲ್ಲಾ ಮತದಾರರು ತಮ್ಮ ಹಾಗೂ ತಮ್ಮ ಕುಟುಂಬದ ಎಲ್ಲಾ ಸದಸ್ಯರ ಮತ್ತು ನಿಮ್ಮ ಸ್ನೇಹಿತರ ಮತದಾರರ ಗುರುತಿನ ಚೀಟಿ ಸಂಖ್ಯೆಗೆ ಕೂಡಲೇ ಆಧಾರ್ ನಂಬರನ್ನು ಲಿಂಕ್ ಮಾಡಿಕೊಳ್ಳಲು ಕೋರಿದೆ“ ಎಂದು, ಕಂದಾಯ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ.
ಆಧಾರ್ ಲಿಂಕ್ ಮಾಡಿಕೊಳ್ಳುವ ವಿಧಾನ
- ಫ್ಲೇಸ್ಟೋರ್ (Play Store)ಗೆ ಹೋಗಿ voter Helpline App ನ್ನು Download ಮಾಡಿ
- Download ಮಾಡಿಕೊಂಡ ಮೇಲೆ App ನ್ನು Install ಮಾಡಿ
- Electrol Authentication form-6B ನ್ನು Select ಮಾಡಿ
- Moblie Number ನ್ನು ಹಾಕಿ
- ನಿಮ್ಮ ಆಧಾರ್ ನಂಬರ್ನ್ನು ಹಾಕಿ
- Proceed ನ್ನು ಒತ್ತಿ
- Successfully ಅಂತ ಒಂದು Reference ಬರುವುದನ್ನು ಖಚಿತ ಪಡಿಸಿಕೊಳ್ಳಿ
ಅಥವಾ ನಿಮ್ಮ ಹತ್ತಿರದ ಮತಗಟ್ಟೆಯ BLO ಹತ್ತಿರ ನಿಮ್ಮ ಆಧಾರ್ ಸಂಖ್ಯೆಯನ್ನು ನೀಡಿ ಲಿಂಕ್ ಮಾಡಿಕೊಳ್ಳಬಹುದಾಗಿದೆ.