ನವದೆಹಲಿ: ಹೈಕಮಾಂಡ್​ ನಾಯಕರ ಭೇಟಿಗೆ ತೆರಳಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಇಂದು ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿಯನ್ನ ಭೇಟಿಯಾದರು.

ರಾಹುಲ್​ಗೆ ವರದಿ ಒಪ್ಪಿಸಿದ ಡಿಕೆಎಸ್​
ರಾಹುಲ್ ಗಾಂಧಿ ಜೂನ್ 19 ರಂದು ತಮ್ಮ 51ನೇ ವರ್ಷದ ಹುಟ್ಟುಹಬ್ಬವನ್ನ ಆಚರಿಸಿಕೊಂಡರು. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿಗೆ ಡಿ.ಕೆ.ಶಿವಕುಮಾರ್ ಶುಭಾಶಗಳನ್ನ ತಿಳಿಸಿದರು. ಬಳಿಕ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು. ತೈಲ ಬೆಲೆ ಏರಿಕೆ ಹಿನ್ನೆಲೆ ರಾಜ್ಯಾದ್ಯಂತ ಪ್ರತಿಭಟನೆ ಮಾಡಿರೋ ಬಗ್ಗೆಯೂ ರಾಹುಲ್​ಗಾಂಧಿಯವರಿಗೆ ವರದಿಸಲ್ಲಿಸಿದ್ದಾರೆ. ಅಲ್ಲದೇ ತಾವು ಕೆಪಿಸಿಸಿ ಅಧ್ಯಕ್ಷರಾದ ದಿನದಿಂದ ಪಕ್ಷ ಸಂಘಟನೆ ಮತ್ತು ಬಿಜೆಪಿ ಸರ್ಕಾರ ಆಡಳಿತ ವೈಫಲ್ಯದ ವಿರುದ್ಧ ಏನೆಲ್ಲಾ ಹೋರಾಟ ಮಾಡಲಾಗಿದೆ ಅನ್ನೋದ್ರ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ​.

ರಾಹುಲ್ ಜೊತೆ ಏನೆಲ್ಲಾ ಚರ್ಚೆ ಮಾಡಿದೆ ಅನ್ನೋದ್ರ ಬಗ್ಗೆ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ರಾಜ್ಯದಲ್ಲಿನ ಬೆಳವಣಿಗೆ ಬಗ್ಗೆ ಚರ್ಚೆ ಮಾಡಿದೆ. ಪಕ್ಷದ ಸಂಘಟನೆ ಬಗ್ಗೆ ಸಮಾಲೋಚನೆ ಮಾಡಿದ್ದೇನೆ. ರಾಜ್ಯದಲ್ಲಿ ಸರ್ಕಾರ ವಿಫಲವಾಗಿದೆ. ಕೊವೀಡ್ ವಿಚಾರದಲ್ಲಿ ಕಾಂಗ್ರೆಸ್ ಕಾರ್ಯಗಳ ಬಗ್ಗೆ ವರದಿ ನೀಡಿದೆ. ನಾನೊಬ್ಬ ಕಾಂಗ್ರೆಸ್ ಕಾರ್ಯಕರ್ತ.

ಡಿಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷರು

ಜೊತೆಗೆ NSUI ಅಧ್ಯಕ್ಷ ಸ್ಥಾನದ ವಿಚಾರ ಬಗ್ಗೆ 5 ಹೆಸರಿನ ಪಟ್ಟಿಯೊಂದಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ, ಡಿಜೆ ಹಳ್ಳಿ-ಕೆಜೆ ಹಳ್ಳಿಯ ಗಲಾಟೆ ಮತ್ತು ಗಲಾಟೆ ನಂತರದ ಮಾಹಿತಿಯನ್ನೂ ಸಹ ನೀಡಿದ್ದಾರೆ. ರಾಜ್ಯ ಯುವ ಘಟದದ ಅಧ್ಯಕ್ಷರ ವಿಚಾರ, ಜಿಲ್ಲಾ ಅಧ್ಯಕ್ಷರು, ಪದಾಧಿಕಾರಿಗಳ ಬದಲಾವಣೆ ವಿಚಾರ, ಜಮೀರ್ ಅಹಮ್ಮದ್ ಪದೇ, ಪದೇ ಮುಂದಿನ ಸಿಎಂ ವಿಚಾರ ಪ್ರಸ್ತಾಪದ ಮಾಡ್ತಿರುವ ಬಗ್ಗೆಯೂ ರಾಹುಲ್ ಗಾಂಧಿ ಗಮನಕ್ಕೆ ಶಿವಕುಮಾರ್ ತಂದಿದ್ದಾರೆ ಅಂತಾ ಹೇಳಲಾಗಿದೆ.

The post ರಾಜ್ಯ ರಾಜಕೀಯ ಬೆಳವಣಿಗೆ ಬಗ್ಗೆ ರಾಹುಲ್​ಗೆ ವರದಿ ಒಪ್ಪಿಸಿದ DKS; ಜಮೀರ್ ವಿರುದ್ಧವೂ ದೂರು? appeared first on News First Kannada.

Source: newsfirstlive.com

Source link