ಬೆಂಗಳೂರು: ರಾಜ್ಯ ಸರ್ಕಾರ ನಾಳೆ ರಾತ್ರಿಯಿಂದ ಮೇ 12 ರವರೆಗೆ ಅನ್ವಯವಾಗುವಂತೆ ಹೊಸ ಗೈಡ್​ಲೈನ್ಸ್ ಬಿಡುಗಡೆ ಮಾಡಿದೆ.

ಗೈಡ್​ಲೈನ್ಸ್​​ನ ಮುಖ್ಯಾಂಶಗಳು ಹೀಗಿವೆ.. 

 • ಶಾಲೆ ಕಾಲೇಜುಗಳು, ಕೋಚಿಂಗ್ ಸೆಂಟರ್ ಇರಲ್ಲ.
 • ಟ್ಯಾಕ್ಸಿ ಕ್ಯಾಬ್ ಸೇವೆ ತುರ್ತು ಸಂದರ್ಭದಲ್ಲಿ ಮಾತ್ರ ಲಭ್ಯ.
 • ಹೋಟೆಲ್, ರೆಸ್ಟೋರೆಂಟ್ ಪಾರ್ಸೆಲ್​ಗಷ್ಟೇ ಅವಕಾಶ.
 • ಸಿನಿಮಾ, ಶಾಪಿಂಗ್ ಮಾಲ್, ಜಿಮ್, ಸ್ವಿಮ್ಮಿಂಗ್ ಪೂಲ್, ಕ್ಲಬ್, ಅಸೆಂಬ್ಲಿ ಹಾಲ್ ಮುಚ್ಚಿರುತ್ತವೆ.
 • ಲಿಕ್ಕರ್ ಶಾಪ್​ಗಳಿಗೆ ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಪಾರ್ಸೆಲ್​ಗೆ ಅವಕಾಶವಿದೆ.
 • ಎಲ್ಲಾ ಧಾರ್ಮಿಕ ಕೇಂದ್ರಗಳಿಗೆ ಸಾರ್ವಜನಿಕರಿಗೆ ಅವಕಾಶ ಇಲ್ಲ.
 • ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಸಮಾವೇಶಗಳನ್ನು ನಡೆಸುವಂತಿಲ್ಲ.
 • ಆರೋಗ್ಯ, ವೈದ್ಯಕೀಯ ಶಿಕ್ಷಣ, ಪೊಲೀಸ್, ಸಿವಿಲ್ ಡಿಫೆನ್ಸ್, ಸಬ್​ ರಿಜಿಸ್ಟರ್ ಆಫೀಸ್, ಎಲೆಕ್ಟ್ರಿಸಿಟಿ, ವಾಟರ್​ ಸಪ್ಲೈ ಬೋರ್ಡ್ ಕಚೇರಿಗಳು ಕಾರ್ಯ ನಿರ್ವಹಿಸುತ್ತವೆ.
 • ಎಲ್​ಪಿಜಿ, ಪಿಎನ್​ಜಿ, ಪೆಟ್ರೋಲ್, ವಿದ್ಯುತ್ ನಿಗಮ, ಪೋಸ್ಟ್ ಆಫೀಸ್ ಎಂದಿನಂತೆ ಕಾರ್ಯ ನಿರ್ವಹಿಸುತ್ತವೆ.
 • ಕೃಷಿ ಚಟುವಟಿಕೆಗಳಿಗೆ ಯಾವುದೇ ನಿರ್ಬಂಧ ಇಲ್ಲ.
 • ಕೆಎಸ್​ಆರ್​ಟಿಸಿ ಬಿಎಂಟಿಸಿ ಮೆಟ್ರೋ ಸೇವೆ ಇಲ್ಲ.
 • ಗೂಡ್ಸ್​ ವಾಹನಗಳ ಸಂಚಾರಕ್ಕೆ ಅವಕಾಶವಿದೆ.
 • ಅಂತರ್​ರಾಜ್ಯ ಮತ್ತು ಅಂತಾರಾಜ್ಯ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ತುರ್ತು ಸಂದರ್ಭದಲ್ಲಿ ಮಾತ್ರ ಅನುಮತಿ.
 • ಏರ್​ಪೋರ್ಟ್ ಬಸ್ ಮತ್ತು ಏರ್​ಪೋರ್ಟ್​​ ಟ್ಯಾಕ್ಸಿಗಳಿಗೆ ಅನುಮತಿ ಇದೆ.
 • ಆಟೋ ಮತ್ತು ಟ್ಯಾಕ್ಸಿಗಳಿಗೆ ತುರ್ತು ಸೇವೆ ನೀಡಲಷ್ಟೇ ಅವಕಾಶ.
 • ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಹಾಲ್​ ಟಿಕೆಟ್ ತೋರಿಸಿ ಪ್ರಯಾಣಿಸಬಹುದು.

The post ರಾಜ್ಯ ಸರ್ಕಾರದಿಂದ ಹೊಸ ಗೈಡ್​ಲೈನ್ಸ್ ಬಿಡುಗಡೆ.. ಏನಿರುತ್ತೆ.. ಏನಿರಲ್ಲ..? appeared first on News First Kannada.

Source: News First Kannada
Read More