ಬೆಂಗಳೂರು: ಸರ್ಕಾರ ಬಡವರಿಗೆ ಆರ್ಥಿಕ ಪ್ಯಾಕೇಜ್ ಕೊಡಲೇಬೇಕು. ಈ ಕಾಯಿಲೆ ಸರ್ಕಾರ ಕೊಟ್ಟಿದ್ದು, ಹಾಗಾಗಿ ಆರ್ಥಿಕ ಪ್ಯಾಕೇಜ್​ ಕೊಡಲೇಬೇಕು ಅಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.

ಸದಾಶಿವನಗರದಲ್ಲಿ ಮಾತನಾಡಿದ ಡಿಕೆಎಸ್.. ಹಳ್ಳಿಗಳಲ್ಲೂ ಕೊರೊನಾ ಬರಲು ಸರ್ಕಾರವೇ ಕಾರಣ.  ಹಳ್ಳಿಗಳಲ್ಲಿ ಕೃಷಿ ಮಾಡ್ತಿದ್ದವರಿಗೂ ಕೊರೊನಾ ಬಂದಿದೆ. ಹೊಲದಲ್ಲಿ ಕೆಲಸ ಮಾಡ್ತಿದ್ದವರು ಸಾಯುತ್ತಿದ್ದಾರೆ ಅಂತ ಬೇಸರ ವ್ಯಕ್ತಪಡಿಸಿದ್ರು.

ಬೆಳಗ್ಗೆ ನನ್ನ ತೀರ ಆತ್ಮಿಯರು ಸಾವನ್ನಪ್ಪಿದ್ದಾರೆ. ಕೊರೊನಾ ಗೆದ್ದ ಮೇಲೂ ಸಾವು ಸಂಭವಿಸುತ್ತಿದೆ. ಈ ಬಗ್ಗೆ ಸಿಎಂ ಮತ್ತು ಪಿಎಂಗೆ ಪತ್ರ ಬರೆಯುತ್ತೇನೆ. ಯಾಕಂದ್ರೆ ಕೊರೊನಾ ಬಂದು ಹೋದ ಬಳಿಕ ಎಲ್ಲರೂ ಎಚ್ಚರಿಕೆಯಿಂದ ಇರಬೇಕು. ಕಳೆದ ವರ್ಷ ಘೋಷಿಸಿದ ಪ್ಯಾಕೇಜ್ ಯಾರಿಗೂ ತಲುಪಿಲ್ಲ. ನೇಯ್ಗೆ, ಮಡಿವಾಳ ಸೇರಿದಂತೆ ಯಾರಿಗೂ ಸಿಕ್ಕಿಲ್ಲ. ಅಂಕಿಅಂಶಗಳ ಬಿಡುಗಡೆ ಮಾಡಿ ಎಂದು ಹಲವು ಬಾರಿ ಹೇಳಿದ್ವಿ. ಆದ್ರೆ ಬಿಡುಗಡೆ ಮಾಡಲಿಲ್ಲ ಎಂದು ಕಿಡಿಕಾರಿದರು.

ಬರೀ ಟೆಂಡರ್​ ಕಮಿಷನ್​ ಕೆಲಸ ಅಷ್ಟೇ 
ವ್ಯಾಕ್ಸಿನ್​ಗಾಗಿ ಗ್ಲೋಬಲ್ ಟೆಂಡರ್ ಕರೆದಿದ್ದಾರೆ. ಟೆಂಡರ್ ಪಡಿಯೋದು ಕಮಿಷನ್ ಪಡೆಯಲಷ್ಟೇ. ಟೆಂಡರ್​ಗಳೆಲ್ಲಾ ಬರುವುದು ಕೇಂದ್ರ ಸರ್ಕಾರದ ಅಡಿಯಲ್ಲಿ. ರಾಂಚಿ ಮತ್ತು ಉತ್ತರ ಪ್ರದೇಶದಿಂದ ಬೆಂಗಳೂರು ಆಸ್ಪತ್ರೆಗೆ ಬರ್ತಿದ್ದಾರೆ. ಇಂತಹ ವ್ಯವಸ್ಥೆ ನಮ್ಮ ಸರ್ಕಾರ ಬಳಸಿಕೊಳ್ತಿಲ್ಲ ಅನ್ನೋದೇ ಬೇಸರ. ಕಾಂಗ್ರೆಸ್ ಇಂದ ಪಂಚ ಪರಿಹಾರ ಕಾರ್ಯಕ್ರಮ ಮಾಡ್ತಿದ್ದೇವೆ. ಮುಂದಿನ ದಿನಗಳಲ್ಲಿ ಇದರ ಬಗ್ಗೆ ಮಾಹಿತಿ ಕೊಡ್ತೀನಿ ಅಂತಲೂ ಹೇಳಿದ್ರು.

ದೇಶದಲ್ಲಿ ಗೊಬ್ಬರದ ಬೆಲೆ ಗಗನಕ್ಕೆ ಹೋಗ್ತಿದೆ. ಸದಾನಂದ ಗೌಡರಿಗೆ ಮನವಿ ಮಾಡ್ತೀನಿ, ಗೊಬ್ಬರ ಕಾರ್ಖಾನೆಗಳು ಯಾವುದೇ ಕಾರಣಕ್ಕೂ ಮುಚ್ಚಬಾರದು. ಹೂ-ಮಾರಾಟಗಾರರು ಮತ್ತು ಉತ್ಪಾದಕರಿಗೆ ಪರಿಹಾರ ಕೊಡಿ. ಪಿಎಂ, ಡಿಸಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮಾಡ್ತಿದ್ದಾರೆ. ಆದರೆ ಅಲ್ಲಿ ಮಿನಿಸ್ಟರ್ ಇದ್ದಾರೆ. ಇವರು ಪ್ರಚಾರಕ್ಕೆ ಕೆಲಸ ಮಾಡ್ತಿದ್ದಾರೆ. ಯಾರು ಜನರಿಗಾಗಿ ಕೆಲಸ ಮಾಡ್ತಿಲ್ಲ. ರಾಜ್ಯದ ಬಿಜೆಪಿ ಸರ್ಕಾರದ ಮೇಲೆ ನಂಬಿಕೆ ಇಲ್ಲದೇ ಪಿಎಂ, ಡಿಸಿಗಳ ಜತೆ ಸಭೆ ಮಾಡ್ತಿದ್ದಾರೆ ಅಂತ ಸರ್ಕಾರದ ವಿರುದ್ಧ ಕಿಡಿಕಾರದ್ರು ಡಿಕೆ ಶಿವಕುಮಾರ್.

The post ‘ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ದೇ ಪ್ರಧಾನಿ ಇಂದು ಡಿಸಿಗಳ ಜೊತೆ ಸಭೆ ಮಾಡಿದ್ರು’ appeared first on News First Kannada.

Source: newsfirstlive.com

Source link