ಬೆಂಗಳೂರು: ನಾಯಕತ್ವ ಬದಲಾವಣೆ ವಿಚಾರವಾಗಿ ಎದ್ದಿರುವ ಗುಸುಗುಸು ವಿಚಾರಗಳಳಿಗೆ ಕುರಿತಂತೆ ಪ್ರತಿಕ್ರಿಯೆ ನೀಡಿದ ಸಿಎಂ ಬಿ.ಎಸ್. ಯಡಿಯೂರಪ್ಪ.. ರಾಜ್ಯ ಸರ್ಕಾರದಲ್ಲಿ ರಾಜಕೀಯ ಗೊಂದಲವೇ ಇಲ್ಲ.. ಯಾರೋ ಒಬ್ಬಿಬ್ರು ಮಾತಾಡೋದನ್ನೇ ಹೈಲೈಟ್ ಮಾಡ್ತಿರೋದ್ರಿಂದ ಗೊಂದಲಗಳಾಗ್ತಿವೆ. ಒಟ್ಟಾಗಿ ಒಂದಾಗಿ ನಾವೆಲ್ಲಾ ಅಭಿವೃದ್ಧಿ ಕಾರ್ಯಗಳತ್ತ ಗಮನ ಕೊಡ್ತಿದ್ದೇವೆ. ಸಚಿವ ಸಂಪುಟದ ಸದಸ್ಯರೂ ಸಹ ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ. ಆ ರೀತಿ ಒಬ್ಬಿಬ್ಬರು ಇದ್ದರೆ ಕರೆದು ಮಾತಾಡಿಸಿ ಸರಿಪಡಿಸೋ ಪ್ರಯತ್ನ ಮಾಡೋಣ ಎಂದರು.

ವಿಶ್ವನಾಥ್ ಅವರ ಹೇಳಿಕೆಗಳ ಬಗ್ಗೆ ಏನೂ ಪ್ರತಿಕ್ರಿಯೆ ಕೊಡೋದಿಲ್ಲ.. ಅವರ ಮೇಲೆ ಏನು ಕ್ರಮ ಕೈಗೊಳ್ಳಬೇಕು ಎಂದು ಹೈಕಮಾಂಡ್ ತೀರ್ಮಾನ ಮಾಡುತ್ತೆ. ಕೋರ್ ಕಮಿಟಿ ಸಭೆಯಲ್ಲಿ ಏನು ಮಾತಾಡಬೇಕೆಂಬ ಅಜೆಂಡಾ ನಿಶ್ಚಯವಾಗಿಲ್ಲ ಎಂದು ಹೇಳಿದ್ರು.

ಇದನ್ನೂ ಓದಿ: ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಇರೋದನ್ನ ಒಪ್ಪಿಕೊಂಡ ಅರುಣ್ ಸಿಂಗ್​; ಆದ್ರೆ ಎಷ್ಟು ಶಾಸಕರಿಗೆ ಗೊತ್ತಾ?

ಇನ್ನು ಮುಂಗಾರು ಪ್ರಾರಂಭವಾಗಿ ರಾಜ್ಯದಲ್ಲೂ ಉತ್ತಮ ಮಳೆಯಾಗಿದೆ ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಬಿತ್ತನೆ ಬೀಜ ಹಾಗೂ ರಾಸಾಯನಿಕಗಳಿಗೆ ತೊಂದರಯಾಗದಂತೆ ಕ್ರಮ ತೆಗೆದುಕೊಳ್ಳಲಾಗಿದೆ. ಮಾನ್ಸೂನ್ ಮಳೆಯಿಂದ ಪ್ರವಾಹ ಉಂಟಾದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಮಾತುಕತೆ ನಡೆಸಿದ್ದೇನೆ. ನಾಳೆ ಮಹಾರಾಷ್ಟ್ರ ಸಚಿವರು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.. ಅವರ ಜೊತೆ ಮಾತುಕತೆ ನಡೆಸುತ್ತೇನೆ. ಆನಂತರ ಪ್ರವಾಹಕ್ಕೊಳಗಾಗಿರೋ ಜಿಲ್ಲೆಗಳ ಡಿಸಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತಾಡ್ತೇನೆ ಎಂದರು.

The post ರಾಜ್ಯ ಸರ್ಕಾರದ ರಾಜಕೀಯದಲ್ಲಿ ಗೊಂದಲವೇ ಇಲ್ಲ.. ಒಬ್ಬಿಬ್ಬರಿಂದ ಹೀಗಾಗ್ತಿದೆ ಎಂದ ಸಿಎಂ appeared first on News First Kannada.

Source: newsfirstlive.com

Source link