ಕೊಪ್ಪಳ: ಮನುಷ್ಯನ ಮುಖದಂತಿರುವ ವಿಶೇಷ ಮೀನು ಒಂದು ಜಿಲ್ಲೆಯ ವಿರುಪಾಪುರ ಗಡ್ಡೆಯ ನದಿ ಪಾತ್ರದಲ್ಲಿ ಪತ್ತೆಯಾಗಿದೆ. ವಿಚಿತ್ರ ಮೀನನ್ನ ನೋಡಿದ ಜನರು ಅಚ್ಚರಿಗೆ ಒಳಗಾಗಿದ್ದಾರೆ.
ಹಂಪಿ ಮತ್ತು ವಿರುಪಾಪುರ ಗಡ್ಡೆ ಮಧ್ಯೆ ಹರಿಯುವ ನದಿಯಲ್ಲಿ ಈ ಮೀನು ಪತ್ತೆಯಾಗಿದೆ. ಮೀನಿನ ಬಾಯಿಯಲ್ಲಿ ಮನುಷ್ಯನಂತೆ ಹಲ್ಲುಗಳು ಕಂಡು ಬಂದಿವೆ. ರಫಿ ಎನ್ನುವ ವ್ಯಕ್ತಿ ಮೀನು ಹಿಡಿಯುವಾಗ ಗಾಳಕ್ಕೆ ಸಿಕ್ಕಿದೆ.
ಅಲ್ಲಿನ ಮೀನುಗಾರರು ಈ ರೀತಿಯ ಮೀನನ್ನ ನಾವು ಇದೇ ಮೊದಲ ಬಾರಿಗೆ ನೋಡಿದ್ದೇವೆ. ಈ ಹಿಂದೆ ಎಲ್ಲಿಯೂ ನಮಗೆ ಸಿಕ್ಕಿರಲಿಲ್ಲ. ಗಾಳಕ್ಕೆ ಸಿಕ್ಕಿರುವ ಮೀನನ್ನ ನೋಡಿ ನನಗೆ ಆಶ್ಚರ್ಯ ಆಯಿತು. ನಂತರ ಅದನ್ನ ಮನೆಗೆ ತರಲು ಮನಸ್ಸು ಆಗಲಿಲ್ಲ. ಹೀಗಾಗಿ ಮತ್ತೆ ನದಿಗೆ ಬಿಟ್ಟಿರುವುದಾಗಿ ಮೀನುಗಾರ ರಫಿ ತಿಳಿಸಿದ್ದಾರೆ.
The post ರಾಜ್ಯ ಸರ್ಕಾರದ ವಿರುದ್ಧ ಕೆಂಡ ಕಾರಿದ ಅಂಜಲಿ ನಿಂಬಾಳ್ಕರ್; ಡಿ.12ಕ್ಕೆ ಬೃಹತ್ ಪಾದಯಾತ್ರೆ..! appeared first on News First Kannada.