ಮಂಗಳೂರು: ರಾಜ್ಯ ಸರ್ಕಾರ ಉಚಿತ ಲಸಿಕೆ ನೀಡುತ್ತೇವೆಂದು ಜನರನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೆಳಗ್ಗೆ 4.30 ರಿಂದ ಸಾಲಿನಲ್ಲಿ ನಿಲ್ಲುವ 500 ಜನರಲ್ಲಿ ಕೇವಲ 150 ಜನರಿಗೆ ಟೋಕನ್ ಗಳನ್ನು ನೀಡಲಾಗುತ್ತದೆ. ಮಂಗಳೂರು ನಗರ ವ್ಯಾಪ್ತಿಯಲ್ಲಿ ಆರೋಗ್ಯ ಕೇಂದ್ರಗಳಲ್ಲಿ ಜನರನ್ನು ಸಂಕಟಕ್ಕೀಡು ಮಾಡುತ್ತಿರುವುದನ್ನು ವಿರೋಧಿಸಿ ಮಾಜಿ ಶಾಸಕ ಐವನ್ ಡಿಸೋಜರವರು ಇಂದು ಬಿಜೈ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಮ್ಮ ತಂಡದೊಂದಿಗೆ ಭೇಟಿ ನೀಡಿ ಪ್ರತಿಭಟನೆಯನ್ನು ನಡೆಸಿದರು.

ಸರ್ಕಾರ ಜನರ ಜೀವನದಲ್ಲಿ ಚೆಲ್ಲಾಟವಾಡುತ್ತಿದೆ. ಖಾಸಗಿಯಲ್ಲಿ ಲಸಿಕೆ ಸಿಗುತ್ತಿದ್ದು, ಸರ್ಕಾರದ ಆರೋಗ್ಯ ಕೇಂದ್ರಗಳಲ್ಲಿ ಮಾತ್ರ ಲಸಿಕೆಗೆ ರೇಷನ್ ರೀತಿಯಲ್ಲಿ ನೀಡುತ್ತಿರುವುದು ಖಂಡನೀಯ. ಜನರು ಲಸಿಕೆ ಇಲ್ಲದೆ ಸಾಯುತ್ತಿದ್ದರೂ ಬಿಜೆಪಿ ಮಾತ್ರ ವ್ಯಾಪಾರ ಮಾಡುತ್ತಿದೆ. ಸಂಭ್ರಮ ಆಚರಣೆ ಮಾಡುತ್ತಿದೆ. ಬಿಜೆಪಿಗೆ ಜನ ಬುದ್ಧಿ ಕಲಿಸುತ್ತಾರೆ ಜನರನ್ನು ನಿರ್ಲಕ್ಷಿಸಿದರೆ ಜನರು ಸುಮ್ಮನೆ ಇರುವುದಿಲ್ಲ. ನಮಗೆ ಜನರ ಪ್ರಾಣ ಮುಖ್ಯ ಎಂದು ಐವನ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

ಪ್ರತಿಭಟನಾ ವೇಳೆ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಕಾರ್ಪೊರೇಟರ್ ನವೀನ್ ಡಿಸೋಜ,ಮಾಜಿ ಕಾರ್ಪೊರೇಟರ್ ರಜನೀಶ್, ಪ್ರಕಾಶ್ ಸಾಲಿಯನ್, ಅಪ್ಪಿ, ಅಶೋಕ್ ಡಿ.ಕೆ, ಮಹಮ್ಮದ್ ಕುಂಜತಬೈಲ್, ಭಾಸ್ಕರ್ ರಾವ್, ರಾಜ್ಯ ಯುವ ಕಾಂಗ್ರೆಸ್ಸಿನ ಕಾರ್ಯದರ್ಶಿ ಆಶಿತ್ ಪಿರೇರಾ, ಜಿಲ್ಲಾ ಯುವ ಕಾಂಗ್ರೆಸ್ಸಿನ ಕಾರ್ಯದರ್ಶಿ ದೀಕ್ಷಿತ್ ಅತ್ತಾವರ್, ಅಲಿಸ್ತಿನ್ ಡಿ’ಕುನಾ, ಸ್ಥಳೀಯರು ಉಪಸ್ಥಿತರಿದ್ದರು.

The post ರಾಜ್ಯ ಸರ್ಕಾರ ಉಚಿತ ಲಸಿಕೆ ನೀಡಲು ವಿಫಲ-ಐವನ್ ಡಿಸೋಜಾ ನೇತೃತ್ವದಲ್ಲಿ ಪ್ರತಿಭಟನೆ appeared first on Public TV.

Source: publictv.in

Source link

Leave a Reply