ಬೆಂಗಳೂರು: ಮುಖ್ಯ ಮಂತ್ರಿಗಳು ಏನು ಬೇಕಾದರೂ ಕ್ರಮ ಕೈಗೊಳ್ಳಲಿ, ನಮ್ಮ ಅಭ್ಯಂತರ ಇಲ್ಲ. ರಾಜ್ಯದ ಹಿತ ಕಾಪಾಡುವಲ್ಲಿ ಸರ್ಕಾರ ವಿಫಲವಾಗಿದೆ.. ಆದರೆ ಅವರು ಒಪ್ಪಿಕೊಳ್ಳುತ್ತಿಲ್ಲ. ಆದರೆ ರಾಜ್ಯದ ಜನತೆಗೆ ಆರ್ಥಿಕ ಪ್ಯಾಕೇಜ್​​ ಘೋಷಣೆ ಮಾಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಒತ್ತಾಯ ಮಾಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಎಸ್​​.. ರಾಜ್ಯ ಸರ್ಕಾರ ನೀಡುತ್ತಿರುವ ಕೊರೊನಾ ಸಂಖ್ಯೆಯಲ್ಲೂ ತಪ್ಪಿದೆ. ಆದರೆ ಈ ಬಗ್ಗೆ ಈಗ ತರ್ಕ ಮಾಡಲು ಹೋಗಲ್ಲ. ಇವತ್ತಿನ ಘೋಷಣೆ, ಆರೋಗ್ಯ ಕಾಪಾಡಲು ಏನು ಬೇಕಾದರೂ ಮಾಡಲಿ. ಆದರೆ ಉದ್ಯೋಗ ಕಳೆದುಕೊಂಡ ಹಾಗೂ ಉದ್ಯೋಗ ನೀಡುವವರಿಗೆ ಆರ್ಥಿಕ ಪ್ಯಾಕೇಜ್​​ ಘೋಷಣೆ ಮಾಡಬೇಕು ಎಂದರು.

ಸಿಎಂ ಅವರು ಲಾಕ್​ಡೌನ್​ ಎಂಬ ಪದವನ್ನು ಬಿಟ್ಟು ಎಲ್ಲವನ್ನೂ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಆದ್ದರಿಂದ ರೈತರಿಗೆ ಬರಗಾಲದ ಸಂದರ್ಭದಲ್ಲಿ ತೆರಿಗೆ ಮನ್ನಾ ಮಾಡುವಂತೆ, ಬ್ಯಾಂಕ್​ ಹಾಗೂ ಫೈನ್ಸಾಸ್​​ಗಳನ್ನು ಬಡ್ಡಿ, ಟ್ಯಾಕ್ಸ್ ಮನ್ನಾ ಮಾಡಲಿ. ಲಾಕ್​ಡೌನ್​​ನಿಂದ ಸಂಕಷ್ಟಕ್ಕೆ ಒಳಗಾಗಿರುವ ಎಲ್ಲರ ಖಾತೆಗೂ ನೇರವಾಗಿ ಹಣ ಹಾಕಲಿ ಎಂದರು. ಇದೇ ವೇಳೆ ಉಚಿತ ಲಸಿಕೆ ವಿತರಣೆಯ ಸರ್ಕಾರದ ಘೋಷಣೆಗೆ ಸ್ವಾಗತ ಕೋರಿದರು.

The post ರಾಜ್ಯ ಸರ್ಕಾರ ಎಲ್ಲರ ಖಾತೆಗೂ ನೇರವಾಗಿ ಹಣ ಹಾಕಲಿ- ಡಿಕೆಎಸ್​ appeared first on News First Kannada.

Source: News First Kannada
Read More