ನವದೆಹಲಿ: ನ್ಯಾಷನಲ್ ಸ್ಟೂಡೆಂಟ್ ಯೂನಿಯನ್ ಆಫ್​ ಇಂಡಿಯಾ (NSUI) ಕರ್ನಾಟಕ ಘಟಕದ ಅಧ್ಯಕ್ಷರನ್ನಾಗಿ ಕೀರ್ತಿ ಗಣೇಶ್ ಅವರನ್ನು ನೇಮಕ ಮಾಡಲಾಗಿದೆ. ಈ ಸಂಬಂಧ ಅಧಿಕೃತ ಆದೇಶ ಹೊರಡಿಸಿರುವ ಆಲ್​​ ಇಂಡಿಯಾ ಕಾಂಗ್ರೆಸ್​ ಸಮಿತಿ, ತನ್ನ ಅಧಿಕೃತ ವೆಬ್​ಸೈಟ್​ನಲ್ಲೇ ಘೋಷಣೆ ಮಾಡಿದೆ.

ಎನ್​​ಎಸ್​​ಯುಐ ಕರ್ನಾಟಕ ಘಟಕದ ಅಧ್ಯಕ್ಷ ಸ್ಥಾನಕ್ಕಾಗಿ ಹಲವರು ಪೈಪೋಟಿ ನಡೆಸುತ್ತಿದ್ದರು ಎನ್ನಲಾಗಿತ್ತು. ತಿಂಗಳ ಹಿಂದೆಯಷ್ಟೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​​​ ರಾಜ್ಯ ಎನ್​​ಎಸ್​​ಯುಐ ಅಧ್ಯಕ್ಷ ಸ್ಥಾನಕ್ಕೆ ಕೀರ್ತಿ ಗಣೇಶ್​ ಮತ್ತು ಮೂರು ಕಾರ್ಯಾಧ್ಯಕ್ಷ ಸ್ಥಾನಕ್ಕೆ ಜಯೇಂದರ್ ಶಾಹಿ, ಪ್ರಜ್ವಲ್ ಹಾಗೂ ಪ್ರಖ್ಯಾತ್ ಎನ್.ಪಿ ಹೆಸರನ್ನ ಶಿಫಾರಸು ಮಾಡಿದ್ದರು.

ಒಂದು ತಿಂಗಳ ಪರಿಶೀಲನೆ ನಡೆಸಿದ ಬಳಿಕ ಎಐಸಿಸಿ ಈಗ ಅಧಿಕೃತ ಆದೇಶ ಹೊರಡಿಸಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​​​ ರವಾನಿಸಿದ್ದ ಪಟ್ಟಿ ಆಧಾರದ ಮೇರೆಗೆ ಎಐಸಿಸಿ ಈ ನಿರ್ಧಾರ ತೆಗೆದುಕೊಂಡಿದೆ. ಈ ಮೂಲಕ ಮುಂದಿನ ರಾಜ್ಯ ಎನ್​​ಎಸ್​ಯುಐ ಅಧ್ಯಕ್ಷ ಯಾರು ಎಂಬ ಚರ್ಚೆಗೆ ತೆರೆ ಎಳೆದಿದೆ.

The post ರಾಜ್ಯ NSUI ಅಧ್ಯಕ್ಷರಾಗಿ ಕೀರ್ತಿ ಗಣೇಶ್​​ ನೇಮಕ; ಎಐಸಿಸಿ ಅಧಿಕೃತ ಆದೇಶ appeared first on News First Kannada.

Source: newsfirstlive.com

Source link