ರಾಜ್​ ಕಪ್​: ನಿರ್ದೇಶಕ ತರುಣ್​ ಸುಧೀರ್​ ತಂಡದ ಲೋಗೋದಲ್ಲಿರುವ 4 ಸಿಂಹಗಳು ಯಾರು? | Raj Cup: Director Tharun Sudhir talks about his team DS Max Lions logoತರುಣ್​ ಸುಧೀರ್​ ಅವರು ತಮ್ಮ ತಂಡದ ಬಗ್ಗೆ ವಿವರಿಸಿದರು. ಲೋಗೋದಲ್ಲಿರುವ ಸಿಂಹಗಳ ಬಗ್ಗೆಯೂ ಅವರು ತಿಳಿಸಿದರು.

TV9kannada Web Team


| Edited By: Madan Kumar

Jun 02, 2022 | 2:19 PM
ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳೆಲ್ಲರೂ ಕ್ರೀಡೆಯ ಸಲುವಾಗಿ ಒಂದಾಗಿದ್ದಾರೆ. ‘ರಾಜ್​ ಕಪ್​’ (Raj Cup) ಟೂರ್ನಿಯಲ್ಲಿ ಸ್ಯಾಂಡಲ್​ವುಡ್​ ಕಲಾವಿದರು ಹಣಾಹಣಿ ನಡೆಸಲಿದ್ದಾರೆ. ವಿವಿಧ ನಟರನ್ನು ಒಳಗೊಂಡ 8 ಟೀಮ್​ಗಳ ಹೆಸರನ್ನು ಅನೌನ್​ ಮಾಡಲಾಗಿದೆ. ಆ ತಂಡಗಳ ಲೋಗೋ ಮತ್ತು ಜರ್ಸಿ ಕೂಡ ಬಿಡುಗಡೆ ಆಗಿವೆ. ಈ ಸಮಾರಂಭ ಅದ್ದೂರಿಯಾಗಿ ನಡೆದಿದೆ. ನಿರೂಪಕ ನಿರಂಜನ್​ ಕೇಳಿದ ಪ್ರಶ್ನೆಗಳಿಗೆ ನಿರ್ದೇಶಕ ತರುಣ್​ ಸುಧೀರ್​ (Tharun Sudhir) ಅವರು ಉತ್ತರ ನೀಡಿದ್ದಾರೆ. ವೇದಿಕೆಯಲ್ಲಿ ಅವರಿಗೆ ನಟ ಶರಣ್​ (Sharan) ಕೂಡ ಜೊತೆಯಾಗಿದ್ದಾರೆ. ಈ ವೇಳೆ ತರುಣ್​ ಸುಧೀರ್​ ಅವರು ತಮ್ಮ ತಂಡದ ಬಗ್ಗೆ ವಿವರಿಸಿದರು. ಲೋಗೋದಲ್ಲಿ ಕಾಣುವ ಮೂರು ಸಿಂಹಗಳ ಅರ್ಥ ಏನು? ಕಾಣದೇ ಇರುವ ಇನ್ನೊಂದು ಸಿಂಹ ಯಾವುದು ಎಂಬುದನ್ನು ಕೂಡ ಅವರು ತಿಳಿಸಿದ್ದಾರೆ. ರಾಜ್​ ಕಪ್​ ಟೂರ್ನಿಯಲ್ಲಿ ಡಿಎಸ್​ ಮ್ಯಾಕ್ಸ್​ ಲಯನ್ಸ್​ ತಂಡವನ್ನು ಅವರು ಮುನ್ನಡೆಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

TV9 Kannada


Leave a Reply

Your email address will not be published. Required fields are marked *