‘ಒಂದು ಮೊಟ್ಟೆಯ ಕಥೆ’ ಸಿನಿಮಾದ ಮೂಲಕ ಕನ್ನಡ ಸಿನಿ ಜಗತ್ತಿಗೆ ಪರಿಚಿತವಾದ ಕರಾವಳಿ ಪ್ರತಿಭೆ ರಾಜ್ ಬಿ ಶೆಟ್ಟಿ. ಹೀರೋನೂ ಹೌದು, ಅತ್ಯುತಮ ನಿರ್ದೇಶಕರು ಹೌದು. ಸದ್ಯ ರಾಜ್ ಬಿ ಶೆಟ್ಟಿ ‘777 ಚಾರ್ಲಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಜೊತೆಗೆ ‘ಗರುಡ ಗಮನ ವೃಷಭ ವಾಹನ’ ಸಿನಿಮಾದಲ್ಲಿ ನಟಿಸಿ ನಿರ್ದೇಶಿಸಿದ್ದಾರೆ. ಇಂತಿಪ್ಪ ಶೆಟ್ರಿಗೆ ನಿನ್ನೆ ಹುಟ್ಟು ಹಬ್ಬ.

ರಾಜ್ ಬಿ ಶೆಟ್ಟಿಯವರ ಬರ್ತ್​ಡೇಗೆ ‘777 ಚಾರ್ಲಿ’ ತಂಡ ಉಡುಗೊರೆಯೊಂದನ್ನ ನೀಡಿದೆ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆ ಮತ್ತು ನಿರ್ಮಾಣದ ‘777 ಚಾರ್ಲಿ’ ಸಿನಿಮಾದಲ್ಲಿ ಡಾಕ್ಟರ್ ಪಾತ್ರವನ್ನ ಮಾಡಿರುವ ರಾಜ್ ಬಿ ಶೆಟ್ಟಿ ಹೇಗೆ ಡಬ್ಬಿಂಗ್ ಮಾಡಿದ್ದಾರೆ? ತನ್ನ ಪಾತ್ರಕ್ಕೆ ತಾವೇ ಹಿನ್ನೆಲೆ ಧ್ವನಿಯಾಗುವಾಗ ಹೇಗೆಲ್ಲ ಸೈಕಲ್ ಹೊಡೆದಿದ್ದಾರೆ.. ಅನ್ನೋ ವಿಡಿಯೋವನ್ನ ಪರಮ್​ವಾ ಸ್ಟುಡಿಯೋದವರು ಉಡುಗೊರೆ ರೂಪದಲ್ಲಿ ಹೊರ ಬಿಟ್ಟಿದ್ದಾರೆ.

‘777 ಚಾರ್ಲಿ’ ಸಿನಿಮಾ ಭಿನ್ನ ವಿಭಿನ್ನ ಕಂಟೆಂಟ್​​ಗಳಿಂದ ಈಗಾಗಲೇ ನಿರೀಕ್ಷೆ ಮೂಡಿಸಿದೆ. ಹೀರೋ ಹೀರೋಯಿನ್​​ಗಳ ಬರ್ತ್​ಡೇಗೆ ಉಡುಗೊರೆ ರೂಪದಲ್ಲಿ ಪೋಸ್ಟರ್​​ಗಳು ಟೀಸರ್​ಗಳನ್ನ ಹೊರ ಬಿಟ್ರೆ ಪೋಷಕ ಪಾತ್ರಧಾರಿಯ ಬರ್ತ್​​ಡೆಗೂ ಟೀಸರ್​ ಒಂದನ್ನ 777 ಚಾರ್ಲಿ ಟೀಮ್ ಹೊರ ಬಿಟ್ಟಿರೋದು ನಿಜಕ್ಕೂ ಮೆಚ್ಚುವ ಸಂಗತಿ.

The post ರಾಜ್ ಬಿ. ಶೆಟ್ಟಿ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆ ಕೊಟ್ಟ ‘777 ಚಾರ್ಲಿ’ ಟೀಂ appeared first on News First Kannada.

Source: newsfirstlive.com

Source link