‘ರಾಣ’ ಚಿತ್ರದ ವಿಶೇಷ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ಸಂಯುಕ್ತಾ; ಶ್ರೇಯಸ್​ ಜತೆ ‘ಕಿರಿಕ್​ ಪಾರ್ಟಿ’ ಹುಡುಗಿ | Samyuktha Hegde to dance with Shreyas K In Rana Movie


‘ರಾಣ’ ಚಿತ್ರದ ವಿಶೇಷ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ಸಂಯುಕ್ತಾ; ಶ್ರೇಯಸ್​ ಜತೆ ‘ಕಿರಿಕ್​ ಪಾರ್ಟಿ’ ಹುಡುಗಿ

ಶ್ರೇಯಸ್​-ಸಂಯುಕ್ತಾ

‘ಕಿರಿಕ್​ ಪಾರ್ಟಿ’ ಸಿನಿಮಾದಲ್ಲಿ ನಟಿಸಿದ್ದ ಸಂಯುಕ್ತಾ ಹೆಗಡೆಗೆ ಸಾಕಷ್ಟು ಆಫರ್​ಗಳು ಬರೋಕೆ ಪ್ರಾರಂಭವಾದವು. ಆ ಸಿನಿಮಾ ಬಳಿಕ ‘ಕಾಲೇಜ್​ ಕುಮಾರ’ ಚಿತ್ರದಲ್ಲಿ ಸಂಯುಕ್ತಾ ನಟಿಸಿದ್ದರು. ಇದಾದ ನಂತರ ಅವರು ತೆಲುಗು ಹಾಗೂ ತಮಿಳು ಚಿತ್ರರಂಗಕ್ಕೂ ಕಾಲಿಟ್ಟರು. ಈಗ ಕೆಲ ಸಿನಿಮಾಗಳ ಶೂಟಿಂಗ್​ನಲ್ಲಿ ಸಂಯುಕ್ತಾ ಬ್ಯುಸಿ ಇದ್ದಾರೆ. ಈಗ ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್​ ಅಭಿನಯದ ‘ರಾಣ’ ಚಿತ್ರದಲ್ಲಿ ವಿಶೇಷ ಹಾಡಿಗೆ ಸಂಯುಕ್ತಾ ಹೆಜ್ಜೆ ಹಾಕಲಿದ್ದಾರೆ. ಈ ವಿಚಾರವನ್ನು ಚಿತ್ರತಂಡ ಅಧಿಕೃತ ಮಾಡಿದೆ.  

ಗುಜ್ಜಲ್ ಪುರುಶೋತ್ತಮ್ ನಿರ್ಮಾಣ ಮಾಡುತ್ತಿರುವ ಹಾಗೂ ನಂದ ಕಿಶೋರ್ ನಿರ್ದೇಶನದ ‘ರಾಣ’ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಕೆಲ ತಿಂಗಳ ಹಿಂದೆ ಶ್ರೇಯಸ್​ ಅವರು ಶಿವರಾಜ್​ಕುಮಾರ್​ ಅವರಿಂದ ಲಾಂಗ್​ ಹಿಡಿಯುವ ತರಬೇತಿ ಪಡೆದುಕೊಂಡಿದ್ದರು. ಈ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಈಗ ‘ರಾಣ’ ಚಿತ್ರದ ವಿಶೇಷ ಹಾಡೊಂದರಲ್ಲಿ ಸಂಯುಕ್ತಾ ಡಾನ್ಸ್​ ಮಾಡಲಿದ್ದಾರೆ.

ಕಂಠೀರವ ಸ್ಟುಡಿಯೋದಲ್ಲಿ ಕಲಾ ನಿರ್ದೇಶಕ ಶಿವು ನಿರ್ಮಿಸಿರುವ ಭವ್ಯವಾದ ಸೆಟ್​​​ನಲ್ಲಿ ಈ ಹಾಡಿನ ಚಿತ್ರೀಕರಣ ನಡೆಯಲಿದೆ.  ಶಿವು ಭೇರ್ಗಿ ಈ ಹಾಡನ್ನು ಬರೆದಿದ್ದು, ಚಂದನ್ ಶೆಟ್ಟಿ ಸಂಗೀತ ನೀಡಿದ್ದಾರೆ. ನಂದಕಿಶೋರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಶ್ರೇಯಸ್​​ಗೆ ನಾಯಕಿಯರಾಗಿ‌ ರೀಷ್ಮಾ ನಾಣಯ್ಯ ಹಾಗೂ ರಜನಿ ಭಾರದ್ವಾಜ್ ನಟಿಸುತ್ತಿದ್ದಾರೆ. ಶೇಖರ್ ಚಂದ್ರು ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ವಿಶ್ವ, ಶಿವು ಕಲಾ ನಿರ್ದೇಶನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನವಿರುವ ‘ರಾಣ’ ಚಿತ್ರಕ್ಕೆ ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿದ್ದಾರೆ‌. ಈ ವಿಶೇಷ ಹಾಡು ಹೇಗೆ ಮೂಡಿ ಬರಲಿದೆ ಎನ್ನುವ ಕುತೂಹಲ ಚಿತ್ರತಂಡಕ್ಕೆ ಮೂಡಿದೆ.

ಆಗಸ್ಟ್​ ತಿಂಗಳಲ್ಲಿ ಚಿತ್ರತಂಡ ಶಿವರಾಜ್​ಕುಮಾರ್​ ಅವರನ್ನು ಭೇಟಿ ಮಾಡಿತ್ತು. ಈ ವೇಳೆ ಮಾತನಾಡಿದ್ದ ಶಿವಣ್ಣ ‘ಪಾತ್ರ ಎಂದು ಬಂದಾಗ ಎಲ್ಲ ರೀತಿಯ ಕ್ಯಾರೆಕ್ಟರ್​ಗಳನ್ನೂ ಮಾಡಬೇಕು. ನನಗಿಂತ ಉತ್ತಮವಾಗಿ ಮಚ್ಚು ಹಿಡಿಯವವರು ಇದ್ದಾರೆ. ಪ್ರತಿ ಪಾತ್ರಕ್ಕೂ ಒಂದು ಆ್ಯಟಿಟ್ಯೂಡ್​ ಇರುತ್ತದೆ. ಅದು ತುಂಬಾನೇ ಮುಖ್ಯ. ನಾನು ಮಚ್ಚು ಹಿಡಿದೆ, ಅದಕ್ಕೆ ಸಿನಿಮಾ ಹಿಟ್​ ಆಯಿತು ಎಂದು ಹೇಳೋಕಾಗಲ್ಲ. ನಾನು ಸಿನಿಮಾದಲ್ಲಿ ಮಚ್ಚು ಹಿಡಿದು ನಟಿಸ್ತೀನಿ ನಿಜ. ಆದರೆ, ಅದನ್ನು ಹೇಳಿಕೊಡಿ ಎಂದರೆ ಅದು ಸ್ವಲ್ಪ ಕಷ್ಟದ ಕೆಲಸ’ ಎಂದಿದ್ದರು.

ಇದನ್ನೂ ಓದಿ: ಪುನೀತ್ ನಿಧನದ ಬಗ್ಗೆ ರಶ್ಮಿಕಾ ಮಂದಣ್ಣ ಕೊಟ್ಟ ರಿಯಾಕ್ಷನ್​ ಏನು? ಇಲ್ಲಿದೆ ವಿಡಿಯೋ

ಅನುಷ್ಕಾ ಶರ್ಮಾಗೆ ಮೈಸೂರು ಜೋಡಿಯಿಂದ ಕನ್ನಡದಲ್ಲೇ ಮದುವೆ ಕರೆಯೋಲೆ; ಸಂತಸ ಪಟ್ಟ ನಟಿ

TV9 Kannada


Leave a Reply

Your email address will not be published. Required fields are marked *