ಬೆಂಗಳೂರು: ಕೊರೊನಾದಿಂದ ಜನ ಸಾಮಾನ್ಯರು ಪರದಾಡುತ್ತಿರುವ ಸಂಕಷ್ಟ ಅಷ್ಟಿಷ್ಟಲ್ಲ. ಇದನ್ನ ಮನಗಂಡ ಸ್ಟಾಫ್​ ನರ್ಸ್​ ಒಬ್ಬರು, ರಾತ್ರಿ ವೇಳೆ ಆಸ್ಪತ್ರೆಯಲ್ಲಿ ದಾದಿಯಾಗಿ ಕಾರ್ಯನಿರ್ವಹಿಸಿ, ಹಗಲು ಚಿತಾಗಾರಕ್ಕೆ ಬಂದೋರಿಗೆ ಉಚಿತವಾಗಿ ಆಹಾರ ವಿತರಿಸಿ ಮಾನವೀಯತೆ ಮೆರೆಯುತ್ತಿದ್ದಾರೆ.

ಎಂ.ಎಸ್.ರಾಮಯ್ಯ ಆಸ್ಪತ್ರೆಯ ಸ್ಟಾಫ್ ನರ್ಸ್ ಪ್ರಿಸ್ಕಾ ಚಿತಾಗಾರದ ಮುಂದೆ ಉಚಿತವಾಗಿ ಆಹಾರ ವಿತರಣೆ ಮಾಡುತ್ತಿದ್ದಾರೆ. ಪ್ರತಿದಿನ ನಗರದ ಚಿತಾಗಾರಗಳ ಮುಂದೆ 100 ಮಂದಿಗೆ ಆಹಾರ ವಿತರಣೆ ಮಾಡುತ್ತಿದ್ದಾರೆ. ಮನೆಯಲ್ಲಿ ತಾವೇ ಸ್ವತಃ ಆಹಾರ ತಯಾರಿಸಿ ಅದನ್ನ ಪ್ಯಾಕೇಟ್​ನಲ್ಲಿ ತುಂಬಿಕೊಂಡು ಬಂದು ನೀಡುತ್ತಿದ್ದಾರೆ.

ಇನ್ನು ಪ್ರಿಸ್ಕಾ ಅವರು ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ನೈಟ್ ಶಿಫ್ಟ್​​ನಲ್ಲಿ ಕೆಲಸ ಮಾಡ್ತಿದ್ದಾರೆ. ಡೇ ಟೈಮಲ್ಲಿ ಚಿತಾಗಾರ ಬಳಿ ಅಂತ್ಯಸಂಸ್ಕಾರಕ್ಕೆ ಬರುವ ಕುಟುಂಬಸ್ಥರಿಗೆ ಆಹಾರ ವಿತರಣೆಯನ್ನ ಮಾಡುತ್ತಿದ್ದಾರೆ. ದೊಡ್ಡ ಬೊಮ್ಮಸಂದ್ರದ ತಮ್ಮ ನಿವಾಸದಿಂದ ಬೈಕ್​ನಲ್ಲಿ ಆಹಾರ ತಂದು ವಿತರಿಸುತ್ತಿದ್ದಾರೆ.

The post ರಾತ್ರಿ ದಾದಿಯಾಗಿ ಸೇವೆ; ಹಗಲು ಚಿತಾಗಾರಕ್ಕೆ ಬಂದೋರಿಗೆ ಉಚಿತ ಆಹಾರ ವಿತರಣೆ appeared first on News First Kannada.

Source: newsfirstlive.com

Source link