ಬಾಗಲಕೋಟೆ: ರಾಜ್ಯದ ಹಲವು ಜಿಲ್ಲೆಗಳಲ್ಲಿ ನಿನ್ನೆಯಿಂದ ಮಳೆಯಾಗ್ತಿದೆ. ಬಾಗಲಕೋಟೆಯಲ್ಲಿ ಮಳೆಯಿಂದ ಕೆಲವೆಡೆ ಹಾನಿ ಉಂಟಾಗಿದೆ.

ಜಿಲ್ಲೆಯ ಇಳಕಲ್ ತಾಲೂಕಿನ ಹಿರೇಓತಗೇರಿ ಗ್ರಾಮದಲ್ಲಿ ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ರಸ್ತೆ ಕೊಚ್ಚಿ ಹೋಗಿದೆ. . ಇಳಕಲ್ ನಿಂದ ಹಿರೇಓತಗೇರಿ ಮಾರ್ಗವಾಗಿ ಕಂದಗಲ್ ತಲುಪುವ ರಸ್ತೆ  ಇದಾಗಿದೆ.

ಇನ್ನು ಕರಡಿ-ಇಳಕಲ್ ರಸ್ತೆ ಮಧ್ಯೆ ಹೆಚ್ಚಿನ ನೀರು ಹರಿದು ಬಂದ ಹಿನ್ನೆಲೆ ಕರಡಿ ಗ್ರಾಮದಲ್ಲಿ ರಸ್ತೆ ಸಂಚಾರಕ್ಕೆ ತೊಂದರೆ ಎದುರಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಕರಡಿ ಗ್ರಾಮದಿಂದ ಬೂದಿಹಾಳ, ತಾರಿಹಾಳ,ಜಂ ಬಲದಿನ್ನಿ, ತುಂಬ ಹಾಗೂ ಇಳಕಲ್ ನಗರಕ್ಕೆ ತೆರಳಲು  ನೀರು ಹರಿಯುತ್ತಿರುವ ರಸ್ತೆಯಲ್ಲೇ ಸಂಚರಿಸಬೇಕಾದ ಸ್ಥಿತಿ ಎದುರಾಗಿದೆ.

The post ರಾತ್ರಿ ಸುರಿದ ಧಾರಾಕಾರ ಮಳೆಗೆ ಕೊಚ್ಚಿ ಹೋದ ರಸ್ತೆ appeared first on News First Kannada.

Source: newsfirstlive.com

Source link