ರಾತ್ರಿ ಸುರಿದ ಮಳೆಗೆ ಯಲಹಂಕಕ್ಕೆ ಜಲದಿಗ್ಬಂಧನ.. ಕೇಂದ್ರೀಯ ವಿಹಾರ‌ ಅಪಾರ್ಟ್ಮೆಂಟ್ ನುಗ್ಗಿದ ನೀರು


ಬೆಂಗಳೂರು: ನಿನ್ನೆ ಸಂಜೆ ಸುರಿದ ಭಾರೀ ಮಳೆಗೆ ಸಿಲಿಕಾನ್ ಸಿಟಿ ತತ್ತರಿಸಿ ಹೋಗಿದೆ. ಪೀಣ್ಯ, 8ನೇ ಮೈಲಿ, ವಿದ್ಯಾರಣ್ಯಪುರಣ, ಯಲಹಂಕದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.

ಭಾರೀ ಮಳೆಗೆ ಮತ್ತೊಮ್ಮೆ ಯಲಹಂಕ ಕೆರೆ ಕೊಡಿ ಹರಿದಿದ್ದು, ಮತ್ತೆ ಕೋಗಿಲು ಕ್ರಾಸ್ ಬಳಿಯಿರುವ ಕೇಂದ್ರೀಯ ವಿಹಾರ‌ ಅಪಾರ್ಟ್ಮೆಂಟ್​​ಗೆ ನೀರು ನುಗ್ಗಿದೆ. 605 ಮನೆಗಳಿರೋ ಅಪಾರ್ಟ್ಮೆಂಟ್ ನಲ್ಲಿ 3 ಅಡಿ ನೀರು ತುಂಬಿಕೊಂಡಿದ್ದು, ಸ್ಥಳೀಯ ನಿವಾಸಿಗಳು ಪರದಾಟ ನಡೆಸಿದ್ದಾರೆ.

ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಶಾಸಕ ಎಸ್.ಆರ್.ವಿಶ್ವನಾಥ್, ಕಳೆದ 3 ದಿನಗಳ ಹಿಂದೆ ಮಳೆಯಾಗಿತ್ತು. ಆಗ ತಾತ್ಕಾಲಿಕ ಕ್ರಮ ವಹಿಸಲಾಗಿತ್ತು. ಪರಿಣಾಮ ಒಂದು ದಿನದಲ್ಲೇ ನೀರು ಕ್ಲಿಯರ್ ಆಗಿತ್ತು. ನಿನ್ನೆ ರಾತ್ರಿ 138 ಮಿಮಿ ಮಳೆಯಾಗಿದೆ. ಇಷ್ಟು ಮಳೆಯಾಗುತ್ತೆ‌ ಅಂತ ನಿರೀಕ್ಷೆ ಇರಲಿಲ್ಲ. ರಾತ್ರಿ 2 ಗಂಟೆಯವರೆಗೂ ಪರಿಶೀಲನೆ ನಡೆಸಿದ್ದೇವೆ. 44 ಕಿಮೀ ಚದರ ವ್ಯಾಪ್ತಿ ಇರೋ ಯಲಹಂಕ ಕೆರೆ, ವೆಂಕಟಾಲದಿಂದ ಹರಿಯುತ್ತಿರುವ ನೀರು ಇಲ್ಲಿಗೆ ಬಂದಿದೆ. ಒಳಹರಿವು ಹೊರ ಹರಿವು ಅಜಗಜಾಂತರ ಆಗಿದೆ.

ಸದ್ಯದ ಪರಿಸ್ಥಿತಿ ಕುರಿತು ಡಿಸಿ, ಬಿಬಿಎಂಪಿ ಆಯುಕ್ತ ಮಾಹಿತಿ ನೀಡಿದ್ದೇವೆ. ಎನ್‌ಡಿಆರ್‌ಎಫ್ ಬೋಟ್ ತರೆಸಲಾಗ್ತಿದೆ. ನಿವಾಸಿಗಳಿಗೆ ಕುಡಿಯುವ ನೀರು, ಆಹಾರ ಸಾಮಾಗ್ರಿ‌ ಕೊಡುತ್ತೇವೆ. ಟ್ರಾಕ್ಟರ್ ಹಾಗು ಆ್ಯಂಬುಲೆನ್ಸ್ ಬಳಸಿ ಹೊರಹೋಗಲು ವ್ಯವಸ್ಥ ಮಾಡದ್ದು, 33 ಅಡಿ ದೊಡ್ಡ ಡ್ರೈನ್ ಮಾಡಲು ಚಿಂತನೆ ನಡೆಸಿದ್ದೇವೆ. 130 ಕೋಟಿ ವೆಚ್ಚದ ಪ್ರಾಜೆಕ್ಟ್ ಇದಾಗಿರುತ್ತೆ.. ಹೆದ್ದಾರಿ ಆದನಂತರ 3 ಡ್ರೈನ್ 8 ಅಡಿ ಇತ್ತು, ಇಲ್ಲಿ ಪಾಸ್ ಆಗುತ್ತಿತ್ತು, ಅದನ್ನು ಮುಚ್ಚಿಬಿಡಲಾಗಿತ್ತು ಎಂದು ತಿಳಿಸಿದರು.

News First Live Kannada


Leave a Reply

Your email address will not be published. Required fields are marked *