ರಾತ್ರೋರಾತ್ರಿ ಫೇಮಸ್​ ಆಗಿದ್ದ ‘ಬಾಬಾ ಕಾ ಢಾಬಾ’ ಮಾಲೀಕ ಆತ್ಮಹತ್ಯೆಗೆ ಯತ್ನ

ರಾತ್ರೋರಾತ್ರಿ ಫೇಮಸ್​ ಆಗಿದ್ದ ‘ಬಾಬಾ ಕಾ ಢಾಬಾ’ ಮಾಲೀಕ ಆತ್ಮಹತ್ಯೆಗೆ ಯತ್ನ

ನವದೆಹಲಿ: ಕೊರೊನಾದ ಮೊದಲ ಅಲೆಯಲ್ಲಿ ವ್ಯಾಪಾರವಿಲ್ಲದೇ ಸೋಶಿಯಲ್ ಮೀಡಿಯಾ ಸಹಾಯದಿಂದ ರಾತ್ರೋರಾತ್ರಿ ಖ್ಯಾತಿಗಳಿಸಿದ್ದ ‘ಬಾಬಾ ಕಾ ಢಾಬಾ’ ಖ್ಯಾತಿಯ ಮಾಲೀಕ ಕಾಂತ ಪ್ರಸಾದ್​ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ದೆಹಲಿಯ ಮಲ್ವಿಯಾ ನಗರದ ನಿವಾಸಿಯಾಗಿರುವ ಇವರನ್ನ ಸದ್ಯ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ದೆಹಲಿ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಕಾಂತ ಪ್ರಸಾದ್ ನಿನ್ನೆ ರಾತ್ರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ರಾತ್ರಿ 11.15 ರ ಸುಮಾರಿಗೆ ದೆಹಲಿ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. 81 ವರ್ಷದ ಕಾಂತ ಪ್ರಸಾದ್ ಮದ್ಯ ಹಾಗೂ ನಿದ್ರೆ ಗುಳಿಗೆಗಳನ್ನ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ.

ನನ್ನ ಅಪ್ಪ ನಿದ್ರೆ ಗುಳಿಗೆ ಮತ್ತು ಮದ್ಯವನ್ನ ತೆಗೆದುಕೊಂಡಿದ್ದಾರೆ ಅಂತಾ ಅವರ ಕಾಂತ ಪ್ರಸಾದ್​ ಪುತ್ರ ಪೊಲೀಸ್ ತನಿಖೆ ವೇಳೆ ಬಾಯ್ಬಿಟ್ಟಿದ್ದಾನೆ. ಮಲ್ವಿಯಾ ನಗರದಲ್ಲಿ ಚಿಕ್ಕದಾದ ಡಾಬಾ ಇಟ್ಟುಕೊಂಡಿದ್ದ ಇವರು, ಕೊರೊನಾದ ಮೊದಲನೇ ಅಲೆಯಲ್ಲಿ ವ್ಯಾಪಾರ ಇಲ್ಲದೇ ಇವರ ಬದುಕು ತತ್ತರಗೊಂಡಿತ್ತು. ಇದನ್ನ ಗಮನಿಸಿದ ಯೂಟ್ಯೂಬರ್ ಗೌರವ್ ವಾಸಮ್ ಅನ್ನೋರು, ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅವರ ಸಂಕಷ್ಟದ ಬಗ್ಗೆ ವಿಡಿಯೋ ಹರಿಬಿಟ್ಟಿದ್ದರು.

ಈ ವಿಡಿಯೋ ನೋಡಿದ ಸೆಲೆಬ್ರಿಟಿಗಳು ಮಿಡಿದಿದ್ದರು, ಕಾಂತ ಪ್ರಸಾದ್​ ನೆರವಿಗೆ ಬರುವಂತೆ ಮನವಿ ಮಾಡಿಕೊಂಡಿದ್ದರು. ಪರಿಣಾಮ ಕಾಂತ ಪ್ರಸಾದ್ ಹಾಗೂ ಆತನ ಪತ್ನಿ ರಾತ್ರೋರಾತ್ರಿ ತುಂಬಾ ಫೇಮಸ್​ ಆಗಿದ್ದರು. ಜೊತೆಗೆ ಅವರ ಢಾಬಾದಲ್ಲಿ ಊಟ ಮಾಡಲು ಜನ ಸಾಗರವೇ ಹರಿದುಬಂದಿತ್ತು. ಇತ್ತೀಚೆಗೆ ಮತ್ತೆ ಜನ ಹೋಟೆಲ್​​ಗೆ ಯಾರೂ ಬರುತ್ತಿಲ್ಲ ಅನ್ನೋ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು.

ಇದನ್ನೂ ಓದಿ: ದೇಣಿಗೆ ಸಂಗ್ರಹಿಸಿ ವಂಚನೆ ಆರೋಪ: ಬಾಬಾ ಕಾ ಢಾಬಾ ವೃದ್ಧನಿಂದ ಯೂಟ್ಯೂಬರ್ ವಿರುದ್ಧ ದೂರು

ಇದನ್ನೂ ಓದಿ: ‘ಬಾಬಾ ಕಾ ಢಾಬಾ’ ಬದುಕು ಬದಲಾಯ್ತು; ಈಗ ಹೇಗಿದೆ 80 ವರ್ಷದ ಈ ವೃದ್ಧನ ಜೀವನ?!

ಇದನ್ನೂ ಓದಿ: ಬಾಬಾ ಕಾ ಢಾಬಾ ಬಳಿಕ ಆಗ್ರಾದ ವಡಾವಾಲಾ ವೃದ್ಧನ ನೆರವಿಗೆ ನಿಂತ ನೆಟ್ಟಿಗರು

ಇದನ್ನೂ ಓದಿ: ಹೊಸ ರೆಸ್ಟೋರೆಂಟ್​ ಆರಂಭಿಸಿದ ಬಾಬಾ ಕಾ ಡಾಭಾ ದಂಪತಿ

ಇದನ್ನೂ ಓದಿ: ಗ್ರಾಹಕರಿಲ್ಲವೆಂದು ಕಣ್ಣೀರಿಟ್ಟ ವೃದ್ಧ ದಂಪತಿ ಹೋಟೆಲ್ ಮುಂದೆ ಜನಸಾಗರ.. ಇದು ಟ್ವಿಟರ್ ಕಮಾಲ್

The post ರಾತ್ರೋರಾತ್ರಿ ಫೇಮಸ್​ ಆಗಿದ್ದ ‘ಬಾಬಾ ಕಾ ಢಾಬಾ’ ಮಾಲೀಕ ಆತ್ಮಹತ್ಯೆಗೆ ಯತ್ನ appeared first on News First Kannada.

Source: newsfirstlive.com

Source link