ಶ್ರೀಲಂಕಾ ಪ್ರವಾಸಕ್ಕೆ ಆಯ್ಕೆಯಾಗೋದ್ರ ಜೊತೆಗೆ ಟೀಮ್ ಇಂಡಿಯಾಕ್ಕೆ ಕಮ್​​ಬ್ಯಾಕ್ ಮಾಡಿರೋ ಪೃಥ್ವಿ ಶಾ, ತಂಡದಲ್ಲಿ ಸ್ಥಾನ ಗಿಟ್ಟಿಸಿರುವ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ಪೃಥ್ವಿ, ತನ್ನನ್ನು ತಂಡದಿಂದ ಹೊರಗಿಟ್ಟಿದ್ದಕ್ಕೆ ಪರೋಕ್ಷವಾಗಿ ಬೇಸರ ಹೊರ ಹಾಕಿದ್ದಾರೆ.

ಜಿಮ್​ನಲ್ಲಿ ಕಸರತ್ತು ನಡೆಸ್ತಿರೋ ಫೋಟೋ ಹಾಕಿರುವ ಪೃಥ್ವಿ, ಯಶಸ್ಸು ಅನ್ನೋದು ರಾತ್ರೋರಾತ್ರಿ ಸಿಗೋದಿಲ್ಲ ಎಂದು ಬರೆದುಕೊಂಡಿದ್ದಾರೆ. ಕಳೆದ ವರ್ಷ ಆಸ್ಟ್ರೇಲಿಯಾ ಪ್ರವಾಸದಲ್ಲಿ ಫೆಲ್ಯೂರ್​​ ಆಗಿದ್ದ ಪೃಥ್ವಿ, ವಿಜಯ್​ ಹಜಾರೆಯಲ್ಲಿ ಅಬ್ಬರಿಸಿದ್ರೂ ತವರಿನಲ್ಲಿ ನಡೆದ ಇಂಗ್ಲೆಂಡ್​ ಸರಣಿಯಿಂದ ಕೈ ಬಿಡಲಾಗಿತ್ತು. ಇತ್ತ ಐಪಿಎಲ್​​ನಲ್ಲಿ ಅದ್ಭುತ ಪರ್ಫಾಮೆನ್ಸ್​ ನೀಡಿದ್ರೂ ವಿಶ್ವ ಟೆಸ್ಟ್​ ಚಾಂಪಿಯನ್​ ಮತ್ತು ಇಂಗ್ಲೆಂಡ್​ ಎದುರಿನ ಸರಣಿಗೆ ಚಾನ್ಸ್​ ನೀಡಲಿಲ್ಲ.

 

View this post on Instagram

 

A post shared by PRITHVI SHAW (@prithvishaw)

The post ‘ರಾತ್ರೋರಾತ್ರಿ ಯಾರೂ ಯಶಸ್ಸು ಕಾಣೋಕೆ ಸಾಧ್ಯವಿಲ್ಲ’ ಎಂದ ಪೃಥ್ವಿ ಮುಖದ ಮೇಲೆ ಯಾಕಿಷ್ಟು ಕೋಪ? appeared first on News First Kannada.

Source: newsfirstlive.com

Source link