ಪ್ರಭಾಸ್ ಅಭಿಮಾನಿಗಳು ಅವರ ಮುಂಬರುವ ಸಿನಿಮಾ “ರಾಧೆ ಶ್ಯಾಮ್ ” ಚಿತ್ರತಂಡದ ಮೇಲೆ ಕೋಪಿಸಿಕೊಂಡಿದ್ದಾರೆ. ಹೌದು “ರಾಧೆ ಶ್ಯಾಮ್ ” ಪ್ರಭಾಸ್ ನಟನೆಯ ಬಹುನಿರೀಕ್ಷಿತ ಪ್ಯಾನ್ ಇಂಡಿಯನ್ ಮೂವಿ. ನಿರ್ದೇಶಕ ರಾಧಾ ಕೃಷ್ಣ ಕುಮಾರ್ ಕಲ್ಪನೆಯಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಯುವಿ ಕ್ರೆಯೆಷನ್ಸ್ ಬಂಡವಾಳ ಹೂಡಿದೆ.
ಇನ್ನು “ರಾಧೆ ಶ್ಯಾಮ್ ” ಚಿತ್ರತಂಡ ಇಂದು ಸಂಜೆ 5 ಗಂಟೆ ಚಿತ್ರದ ಮೊದಲ ಲಿರಿಕರ್ ಹಾಡನ್ನು ಬಿಡುಗಡೆ ಮಾಡುವುದಾಗಿ ಹೇಳಿತ್ತು. ಆದ್ರೆ ತಾಂತ್ರಿಕ ಸಮಸ್ಯೆಯಿಂದ ಚಿತ್ರದ ಹಾಡು ಇನ್ನೂ ಕೂಡ ರಿಲೀಸ್ ಆಗದೆ ಇರುವುದರಿಂದ ಪ್ರಭಾಸ್ ಫ್ಯಾನ್ಸ್ ಚಿತ್ರತಂಡದ ವಿರುದ್ಧ ಗರಂ ಆಗಿದ್ದಾರೆ.
“ರಾಧೆ ಶ್ಯಾಮ್” ಚಿತ್ರತಂಡದ ಬಗ್ಗೆ ಪ್ರಭಾಸ್ ಫ್ಯಾನ್ಸ್ ಕೋಪಗೊಂಡಿರಿವುದು ಇದೇ ಮೊದಲ ಬಾರಿಯನ್ನಲ್ಲ ಈ ಹಿಂದೆ ಕೂಡ ಸಾಕಷ್ಟು ಬಾರಿ ಚಿತ್ರತಂಡ “ರಾಧೆ ಶ್ಯಾಮ್” ಚಿತ್ರದ ಪ್ರಚಾರವನ್ನು ಮಾಡುತ್ತಿಲ್ಲವೆಂದು ಪ್ರಭಾಸ್ ಅಭಿಮಾನಿಗಳು ಚಿತ್ರತಂಡದ ಮೇಲೆ ಗರಂ ಆಗಿದ್ದರು. ಮೊನ್ನೆಯಷ್ಟೇ ಪ್ರಭಾಸ್ ಅಭಿಮಾನಿಯೊಬ್ಬ “ರಾಧೆ ಶ್ಯಾಮ್” ಚಿತ್ರತಂಡ ಚಿತ್ರದ ಅಪ್ಡೇಟ್ಸ್ ಕೊಡದೇ ಹೊದರೆ ತಾನು ಸೂಸೈಡ್ ಮಾಡಿಕೊಳ್ಳುವುದಾಗಿ ಡೆತ್ನೋಟ್ ಕೂಡ ಬರೆದಿದ್ದ.
ಇದನ್ನೂ ಓದಿ: ರಾಧೆ ಶ್ಯಾಮನಾಗಿ ಪ್ರಭಾಸ್ ಎಂಟ್ರಿ; ಫ್ಯಾನ್ಸ್ ಫುಲ್ ಕ್ರೇಜಿ