‘ರಾಧೆ ಶ್ಯಾಮ್​’ ಚಿತ್ರದ ಕಥೆ ಲೀಕ್​; ಪ್ರಭಾಸ್​-ಪೂಜಾ ಹೆಗ್ಡೆ ಸಿನಿಮಾದ ಈ ಹಾಡಿನಲ್ಲಿ ಅಡಗಿದೆ ಸ್ಟೋರಿ | Prabhas Pooja Hegde starrer Radhe Shyam story revealed with Raathale lyrical video


‘ರಾಧೆ ಶ್ಯಾಮ್​’ ಚಿತ್ರದ ಕಥೆ ಲೀಕ್​; ಪ್ರಭಾಸ್​-ಪೂಜಾ ಹೆಗ್ಡೆ ಸಿನಿಮಾದ ಈ ಹಾಡಿನಲ್ಲಿ ಅಡಗಿದೆ ಸ್ಟೋರಿ

ಪೂಜಾ ಹೆಗ್ಡೆ, ಪ್ರಭಾಸ್

ನಟ ಪ್ರಭಾಸ್​ (Prabhas) ಅವರಿಗೆ ‘ಬಾಹುಬಲಿ’ ಚಿತ್ರದ ಬಳಿಕ ಹೊಸದೊಂದು ಇಮೇಜ್​ ಸಿಕ್ಕಿತು. ಆದರೆ ಈಗ ರಿಲೀಸ್​ ಆಗಲು ಸಿದ್ಧವಾಗಿರುವ ‘ರಾಧೆ ಶ್ಯಾಮ್​’ ಸಿನಿಮಾ (Radhe Shyam Movie) ಮೂಲಕ ಆ ಇಮೇಜ್​ನಿಂದ ಹೊರಬರಲು ಅವರು ನಿರ್ಧರಿಸಿದಂತಿದೆ. ಈಗಾಗಲೇ ಬಿಡುಗಡೆ ಆಗಿರುವ ಟೀಸರ್​, ಪೋಸ್ಟರ್​ಗಳಲ್ಲಿ ಪ್ರಭಾಸ್​ ಅವರು ಲವರ್​ ಬಾಯ್​ ಆಗಿ ಕಾಣಿಸಿಕೊಂಡಿದ್ದಾರೆ. ಇಡೀ ಸಿನಿಮಾ ತುಂಬ ಡಿಫರೆಂಟ್​ ಆಗಿ ಮೂಡಿಬಂದಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಈ ಎಲ್ಲ ಕಾರಣಗಳಿಂದಾಗಿ ‘ರಾಧೆ ಶ್ಯಾಮ್​’ ಚಿತ್ರದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಈ ಚಿತ್ರದ ಕಥೆ ಏನು ಎಂಬ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಈ ಕುರಿತಾಗಿ ಚಿತ್ರದ ಗೀತರಚನೆಕಾರ ಕೃಷ್ಣ ಕಾಂತ್​ ಕೆಲವು ಸುಳಿವುಗಳನ್ನು ಬಿಟ್ಟುಕೊಟ್ಟಿದ್ದಾರೆ. ಆ ಮೂಲಕ ಅವರು ‘ರಾಧೆ ಶ್ಯಾಮ್​’ ಕಥೆ ಲೀಕ್​ ಮಾಡಿದ್ದಾರೆ ಎನ್ನಲಾಗುತ್ತಿದೆ.

ಈ ಬಹುನಿರೀಕ್ಷಿತ ಸಿನಿಮಾದ ಕಥೆಯ ಬಗ್ಗೆ ಜನರು ಹಲವು ರೀತಿಯಲ್ಲಿ ಊಹೆ ಮಾಡಿದ್ದಾರೆ. ಅವುಗಳ ಬಗ್ಗೆಯೂ ಕೃಷ್ಣ ಕಾಂತ್​ ಮಾತನಾಡಿದ್ದಾರೆ. ‘1970ರ ಸಮಯದಲ್ಲಿ ಯುರೋಪ್​ನಲ್ಲಿ ನಡೆಯುವ ಒಂದು ಲವ್​ ಸ್ಟೋರಿ ‘ರಾಧೆ ಶ್ಯಾಮ್​’ ಚಿತ್ರದಲ್ಲಿದ್ದು, ಈ ಸಿನಿಮಾದ ಕಥೆ ಪುನರ್ಜನ್ಮ ಮತ್ತು ಟೈಮ್​ ಟ್ರಾವೆಲಿಂಗ್​ಗೆ ಸಂಬಂಧಿಸಿದೆ ಅಂತ ಕೆಲವರು ಊಹಿಸಿದ್ದಾರೆ. ಇಡೀ ಸಿನಿಮಾ ಒಂದು ರೈಲಿನ ಪಯಣದಲ್ಲಿ ನಡೆಯುತ್ತದೆ ಎಂದು ಕೂಡ ಬಹುತೇಕರು ಊಹೆ ಮಾಡಿದ್ದಾರೆ. ಆ ಬಗ್ಗೆ ನಾನು ಮಾತನಾಡುವುದಿಲ್ಲ. ಸಸ್ಪೆನ್ಸ್​ ಹಾಗೆಯೇ ಇರಲಿ’ ಎಂದು ಹೇಳಿರುವ ಕೃಷ್ಣ ಕಾಂತ್​ ಅವರು ಬೇರೆ ಸುಳಿವು ಬಿಟ್ಟುಕೊಟ್ಟಿದ್ದಾರೆ.

ಕೆಲವೇ ದಿನಗಳ ಹಿಂದೆ ಈ ಚಿತ್ರದ ‘ಯೇ ರಾತಾಲೇ..’ ಹಾಡಿನ ಲಿರಿಕಲ್​ ವಿಡಿಯೋ ಬಿಡುಗಡೆ ಆಗಿದೆ. ಅದರಲ್ಲಿ ಕಾರ್ಟೂನ್​ ರೀತಿಯಲ್ಲಿ ಕೆಲವು ದೃಶ್ಯಗಳನ್ನು ವಿವರಿಸಲಾಗಿದೆ. ಈ ಚಿತ್ರದ ಮಾಂಟೇಜ್​ ದೃಶ್ಯಗಳಲ್ಲಿ ಇಡೀ ಸಿನಿಮಾದ ಕಥೆ ಅಡಗಿದೆ ಎಂದು ಕೃಷ್ಣ ಕಾಂತ್​ ಹೇಳಿದ್ದಾರೆ. ಅದರ ಆಧಾರದ ಮೇಲೆ ಪ್ರೇಕ್ಷಕರು ಕಥೆಯ ಎಳೆ ಏನೆಂಬುದನ್ನು ಊಹಿಸುತ್ತಿದ್ದಾರೆ.

ಈ ಚಿತ್ರಕ್ಕೆ ರಾಧಾಕೃಷ್ಣ ಕುಮಾರ್​ ಅವರು ನಿರ್ದೇಶನ ಮಾಡಿದ್ದಾರೆ. ಜ.14ರಂದು ಈ ಸಿನಿಮಾ ಬಿಡುಗಡೆ ಆಗುತ್ತಿದೆ. ತೆಲುಗು ಮಾತ್ರವಲ್ಲದೇ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ‘ರಾಧೆ ಶ್ಯಾಮ್​’ ತೆರೆಕಾಣಲಿದೆ.

ಇದನ್ನೂ ಓದಿ:

Pooja Hegde: ಬೀಚ್​​​ನಲ್ಲಿ ಹಾಟ್ ಅವತಾರ ತಾಳಿದ ಪೂಜಾ ಹೆಗ್ಡೆ; ಇಲ್ಲಿವೆ ಫೋಟೋಗಳು

ಪ್ರಭಾಸ್​ ಹುಟ್ಟುಹಬ್ಬದ ದಿನವೇ ಫ್ಯಾನ್ಸ್​ಗೆ ಬೇಸರ ಮೂಡಿಸಿದ ಪ್ರಶಾಂತ್​ ನೀಲ್​; ‘ಸಲಾರ್’​ ಟೀಮ್​ ಎಡವಿದ್ದೆಲ್ಲಿ?

TV9 Kannada


Leave a Reply

Your email address will not be published. Required fields are marked *