ಡಾರ್ಲಿಂಗ್ ಪ್ರಭಾಸ್ ನಟನೆಯ ‘ರಾಧೆ ಶ್ಯಾಮ್’ ಸೈಲೆಂಟ್ ಆಗಿ ಸೌಂಡ್ ಮಾಡ್ತಾನೇ ಇದೆ. ‘ರಾಧೆ ಶ್ಯಾಮ್’ ಬಳಗದಿಂದ ಬರೋ ಒಂದೊಂದೆ ಕಂಟೆಂಟ್ ಏನಾದ್ರೊಂದು ದಾಖಲೆಯ ಧಮಾಕಾ ಮಾಡಿ ಅಭಿಮಾನಿಗಳನ್ನ ಸೆಳೆಯುತ್ತಿದೆ. ಈಗ ‘ರಾಧೆ ಶ್ಯಾಮ್’ ಬಳಗದಿಂದ ಒಂದೊಳ್ಳೆ ರೊಮ್ಯಾಟಿಕ್ ಸಾಂಗ್ ಟೀಸರ್ ಹೊರಬಂದಿದ್ದು ಟಾಪ್ ಟ್ರೇಡಿಂಗ್ನಲ್ಲಿದೆ.
ಭಾರತೀಯ ಚಿತ್ರರಂಗದ ಬಾಕ್ಸಾಫೀಸ್ ಬಾಹುಬಲಿ ಡಾರ್ಲಿಂಗ್ ಪ್ರಭಾಸ್ ಬೆಂಗಳೂರಿಗೆ ಬಂದಾಗ ಒಂದು ಮಾತನ್ನ ಹೇಳಿದ್ರು.. ಆ್ಯಕ್ಷನ್ ಡ್ರಾಮಾ ಸಿನಿಮಾಗಳನ್ನ ಮಾಡಿ ಕೊಂಚ ಬೋರ್ ಆಗಿದೆ. ಒಂದೊಳ್ಳೆ ಲವ್ ಸ್ಟೋರಿ ಸಿನಿಮಾ ಮಾಡಬೇಕು ಅನ್ನೋ ಆಸೆ ಇದೆ ಅಂತ ಹೇಳಿದ್ರು. ಪ್ರಭಾಸ್ ಆಸೆ ಈಗ ರಾಧೆ ಶ್ಯಾಮ್ ಸಿನಿಮಾದ ಮೂಲಕ ಈಡೇರಿದೆ.
ರಾಧೆ ಶ್ಯಾಮ್ .. ಡಾರ್ಲಿಂಗ್ ಪ್ರಭಾಸ್ ಮತ್ತು ಪೂಜಾ ಹೆಗ್ಡೆ ನಟನೆಯ ರೊಮ್ಯಾಟಿಕ್ ಲವ್ ಡ್ರಾಮಾ.. ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಒಂದು ಲವ್ ಸ್ಟೋರಿ ಸಿನಿಮಾವನ್ನ ನೀಡಬೇಕು ಅನ್ನೋ ಗುರಿಯಿಂದ ಈ ಸಿನಿಮಾವನ್ನ ಮಾಡಲಾಗಿದೆ. ರಾಧ ಕೃಷ್ಣ ಕುಮಾರ್ ನಿರ್ದೇಶನದಲ್ಲಿ ವಂಶಿ – ಪ್ರಮೋದ್ ಜಂಟಿ ನಿರ್ಮಾಣದಲ್ಲಿ ಮೂಡಿಬಂದಿದೆ.. ಈಗ ರಾಧೆ ಶ್ಯಾಮ್ ಸಿನಿಮಾ ಬಳಗದಿಂದ ಒಂದು ರೊಮ್ಯಾಟಿಕ್ ಸಾಂಗ್ ಒಂದು ಹೊರ ಬಂದಿದೆ.. ರಾಧೆ ಶ್ಯಾಮ್ ಸಿನಿಮಾದ ಆಶಿಕ್ ಆಗಯಿ ಎಂಬುವ ಹಾಡು ಈಗ ಸಖತ್ ಸದ್ದು ಮಾಡ್ತಿದೆ.
ರೊಮ್ಯಾಟಿಕ್ ಸೀನ್ಸ್ , ಕಲರ್ಫುಲ್ ಬ್ಯಾಕ್ಗ್ರೌಂಡ್ನಿಂದ ಗಮನ ಸೇಳೆದಿರುವ ರಾಧೆ ಶ್ಯಾಮ್ ಸಿನಿಮಾ ಮುಂಬರುವ ಜನವರಿ 14ನೇ ತಾರೀಖ್ ಪ್ಯಾನ್ ಇಂಡಿಯ ಪ್ರೇಕ್ಷಕರ ಮುಂದೆ ಬಂದು ನಿಲ್ಲಲಿದ್ದು ಮತ್ತೊಮ್ಮೆ ಬಾಕ್ಸಾಫೀಸ್ನಲ್ಲಿ ಪ್ರಭಾಸ್ ಮೋಡಿ ಮಾಡ್ತಾರಾ ಕಾದು ನೋಡಬೇಕು.
ಇದನ್ನೂ ಓದಿ:ಖ್ಯಾತ ಗಾಯಕನ ಕಂಠದಲ್ಲಿ ಸದ್ಯದಲ್ಲೇ ಬಾಲಿವುಡ್ನಲ್ಲಿ ಸದ್ದು ಮಾಡಲಿವೆ ‘ರಾಧೆ ಶ್ಯಾಮ್’ ಗೀತೆಗಳು