ರಾಮಗೊಂಡನಹಳ್ಳಿ ಟಿ ಜೆಡ್ ವಿಲ್ಲಾ ನಿವಾಸಿಗಳು ಸುರಿಯುತ್ತಿರುವ ಮಳೆ ಕಾರಣ ಆತಂಕದಲ್ಲಿ ದಿನದೂಡುತ್ತಿದ್ದಾರೆ! | Incessant rains and waterlogging leave residents of TZ Villa in Bengaluru’s Ramagondanahalli spend sleepless nightsಈ ಪ್ರದೇಶವೆಲ್ಲ ನಡುಗಡ್ಡೆಯಂತಾಗಿರುವುದರಿಂದ ನಿವಾಸಿಗಳು ಯಮಯಾತನೆ ಅನುಭವಿಸುತ್ತಿದ್ದಾರೆ ಮತ್ತು ಒಂದೇ ಸಮ ಸುರಿಯುತ್ತಿರುವ ಮಳೆ ನಿಲ್ಲುವ ಸೂಚನೆ ನೀಡದಿರುವುದರಿಂದ ಭೀತಿ ಹಾಗೂ ಆತಂಕದಲ್ಲಿ ರಾತ್ರಿಗಳನ್ನು ಕಳೆಯುತ್ತಿದ್ದಾರೆ.

TV9kannada Web Team


| Edited By: Arun Belly

Sep 06, 2022 | 11:32 AM
ಬೆಂಗಳೂರು:  ಅವೈಜ್ಞಾನಿಕ ಕಟ್ಟಡಗಳು, ರಾಜಾಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ಕಟ್ಟಿದ ಅಪಾರ್ಟ್ಮೆಂಟ್ ಗಳು, ಸ್ವಚ್ಛಗೊಳಿಸದ ಚರಂಡಿಗಳು, ಮಳೆನೀರು ಹರಿದ ಹೋಗಲು ಸೌಲಭ್ಯವಿಲ್ಲದ ರಸ್ತೆಗಳು-ಮೊದಲಾದವು ಬೆಂಗಳೂರು ನಾಗರಿಕರ ಬದುಕನ್ನು ದುಸ್ತರಗೊಳಿಸಿವೆ. ನಿಮಗೆ ವಿಡಿಯೋನಲ್ಲಿ ಕಾಣುತ್ತಿರುವುದು ರಾಮಗೊಂಡನಹಳ್ಳಿ (Ramagondanahalli) ಟಿ ಜೆಡ್ ವಿಲ್ಲಾ. ಈ ಪ್ರದೇಶವೆಲ್ಲ ನಡುಗಡ್ಡೆಯಂತಾಗಿರುವುದರಿಂದ (island) ನಿವಾಸಿಗಳು ಯಮಯಾತನೆ ಅನುಭವಿಸುತ್ತಿದ್ದಾರೆ ಮತ್ತು ಒಂದೇ ಸಮ ಸುರಿಯುತ್ತಿರುವ ಮಳೆ ನಿಲ್ಲುವ ಸೂಚನೆ ನೀಡದಿರುವುದರಿಂದ ಭೀತಿ ಹಾಗೂ ಆತಂಕದಲ್ಲಿ ರಾತ್ರಿಗಳನ್ನು ಕಳೆಯುತ್ತಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ (NDRF) ಸಿಬ್ಬಂದಿ ಬೋಟ್ ಗಳ ಜೊತೆಗೆ ನಿವಾಸಿಗಳ ನೆರವಿಗೆ ಧಾವಿಸಿದ್ದಾರೆ.

TV9 Kannada


Leave a Reply

Your email address will not be published.