ರಾಮನಗರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ! ವಿದ್ಯಾರ್ಥಿನಿ ಸಾವು | Student has died after a driver lost control of a car in Ramanagar


ರಾಮನಗರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ! ವಿದ್ಯಾರ್ಥಿನಿ ಸಾವು

ಪಲ್ಟಿಯಾದ ಕಾರು

ರಾಮನಗರ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ವಿದ್ಯಾರ್ಥಿನಿ ಮೃತಪಟ್ಟಿದ್ದಾರೆ. ಮಾಗಡಿ ತಾಲೂಕಿನ ಜೋಡುಕಟ್ಟೆ ಬಳಿ ಅಪಘಾತದಲ್ಲಿ 19 ವರ್ಷದ ಆಕಾಂಕ್ಷ ಗುಪ್ತ ಎಂಬುವವರು ಸಾವನ್ನಪ್ಪಿದ್ದಾರೆ. ವಿದ್ಯಾರ್ಥಿನಿ ಆಕಾಂಕ್ಷ ಗುಪ್ತ ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಐದನೇ ಸೆಮಿಸ್ಟರ್ ವ್ಯಾಸಂಗ ಮಾಡುತ್ತಿದ್ದರು. ಸ್ನೇಹಿತರ ಜತೆ ಸಾವನದುರ್ಗ ಬೆಟ್ಟಕ್ಕೆ ತೆರಳುವ ವೇಳೆ ಈ ಘಟನೆ ನಡೆದಿದೆ. ಕಾರಿನಲ್ಲಿದ್ದ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಂತಿದ್ದ ವಾಹನಕ್ಕೆ ಬೈಕ್ ಡಿಕ್ಕಿ; ಸವಾರ ಸಾವು
ರಸ್ತೆಬದಿ ನಿಂತಿದ್ದ ವಾಹನಕ್ಕೆ ಬೈಕ್ ಡಿಕ್ಕಿ ಹೊಡೆದು ಸವಾರ ದುರ್ಮರಣ ಹೊಂದಿದ್ದಾರೆ. ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಆಲಗೂಡು ಸವಾರ ಸತೀಶ್(34) ಸಾವನ್ನಪ್ಪಿದ್ದು, ಹಿಂಬದಿ ಬೈಕ್ ಸವಾರ ರಘುಗೆ ಗಂಭೀರ ಗಾಯಗಳಾಗಿವೆ. ಗಾಯಾಳು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಟಿ.ನರಸೀಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ತಿ. ನರಸೀಪುರ ಪೊಲೀಸ್ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಮರ ಬಿದ್ದು ಬೈಕ್ ಸವಾರ ದುರ್ಮರಣ
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ನಲ್ಲಿ ಚಲಿಸುತ್ತಿದ್ದ ಬೈಕ್ ಮೇಲೆ ಮರ ಬಿದ್ದು ಸವಾರ ಸಾವನ್ನಪ್ಪಿದ್ದಾರೆ. 24 ವರ್ಷದ ಬೈಕ್ ಸವಾರ ನವೀನ್ ಎಂಬಾತ ಮೃತಪಟ್ಟಿದ್ದಾರೆ. ಮೃತ ನವೀನ್ ರಾಮನಗರ ಜಿಲ್ಲೆಯ ಚನ್ನಪಟ್ಟಣದ ನಿವಾಸಿ. ಸ್ನೇಹಿತರೊಂದಿಗೆ ರಾಮನಗರದಿಂದ ಧರ್ಮಸ್ಥಳಕ್ಕೆ ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿದೆ.

ಇದನ್ನೂ ಓದಿ

ಚಿಕ್ಕಬಳ್ಳಾಪುರದಲ್ಲಿ ಜೇಬುಗಳ್ಳನ ಕೈ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿಸಿದ ರೈತರು!

Viral Video: ಯುವತಿ ಚರಂಡಿ ಬಳಿ ನಿಂತು ಸ್ಟಂಟ್ ಮಾಡೋಕೆ ಹೋಗಿ ಆಗಿದ್ದೇ ಬೇರೆ! ಏನಾಯ್ತು ಅನ್ನೋದನ್ನಾ ವಿಡಿಯೊದಲ್ಲೇ ನೋಡಿ

TV9 Kannada


Leave a Reply

Your email address will not be published. Required fields are marked *