ರಾಮನಗರದಲ್ಲಿ ದಿಢೀರ್​ ಪ್ರತ್ಯಕ್ಷಗೊಂಡ ಚಿರತೆ.. ಆತಂಕದಲ್ಲಿ ಸ್ಥಳೀಯರು

ರಾಮನಗರದಲ್ಲಿ ದಿಢೀರ್​ ಪ್ರತ್ಯಕ್ಷಗೊಂಡ ಚಿರತೆ.. ಆತಂಕದಲ್ಲಿ ಸ್ಥಳೀಯರು

ರಾಮನಗರ: ನಗರದಲ್ಲಿ ಚಿರತೆಯೊಂದು ದಿಢೀರ್​ನೆ ಪ್ರತ್ಯಕ್ಷಗೊಂಡಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಚನ್ನಪಟ್ಟಣದ ಮಂಡಿ ಪೇಟೆಯ ಸೇಂಟ್ ಮೈಖೆಲ್ ಶಾಲೆ ಪಕ್ಕದಲ್ಲಿನ ನಿರ್ಜನ ಪ್ರದೇಶದಲ್ಲಿ ಚಿರತೆ ಕಂಡು ಬಂದಿದೆ.

ಹಾಡು ಹಗಲೇ ಚಿರತೆ ಕಾಣಿಸಿ ಕೊಂಡಿದ್ದರಿಂದ ಸ್ಥಳೀಯರಲ್ಲಿ ಭೀತಿ ಉಂಟಾಗಿದೆ.  ಕಳೆದ ಮೂರು ದಿನಗಳಿಂದ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಇಂದು ಬೆಳಿಗ್ಗೆ ಮತ್ತೆ ಕಾಣಿಸಿಕೊಂಡಿದೆ ಎನ್ನಲಾಗ್ತಿದೆ. ನಿರ್ಜನ ಪ್ರದೇಶದ ಪೊದೆಯಲ್ಲಿ ಚಿರತೆ ಅವಿತಿರುವ ಶಂಕೆ ವ್ಯಕ್ತ ಪಡಿಸಿದ ಸ್ಥಳಿಯರು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಅರವಳಿಕೆ ತಜ್ಞರು ಸ್ಥಳಕ್ಕೆ ಆಗಮಿಸಿದ್ದು ಚಿರತೆಗೆ ಅರವಳಿಕೆ ಮದ್ದಿನ ಗುಂಡು ಹಾರಿಸಿ ಚಿರತೆ ಹಿಡಿಯಲು ಮುಂದಾಗಿದ್ದಾರೆ. ಈ ಸಮಯದಲ್ಲಿ ಬಲೆಗೆ ಬಿದ್ದ ಚಿರತೆ ಮತ್ತೆ ತಪ್ಪಿಸಿಕೊಂಡು ಪರಾರಿಯಾಗಿದ್ದು  ಅಧಿಕಾರಗಳು ಸ್ಥಳದಲ್ಲೇ ಬೀಡು ಬಿಟ್ಟು ಚಿರತೆಗಾಗಿ ಬಲೆ ಬೀಸಿದ್ದಾರೆ.

The post ರಾಮನಗರದಲ್ಲಿ ದಿಢೀರ್​ ಪ್ರತ್ಯಕ್ಷಗೊಂಡ ಚಿರತೆ.. ಆತಂಕದಲ್ಲಿ ಸ್ಥಳೀಯರು appeared first on News First Kannada.

Source: newsfirstlive.com

Source link