ರಾಮನಗರದಲ್ಲಿ ಪಾದಯಾತ್ರೆಯ ಜನಜಂಗುಳಿ ನಿಯಂತ್ರಿಸುವುದು ತಪ್ಪಿದರೂ ಟ್ರಾಫಿಕ್ ನಿಯಂತ್ರಣಕ್ಕೆ ತರುವುದು ಮಾತ್ರ ಪೊಲೀಸರಿಗೆ ತಪ್ಪಲಿಲ್ಲ | Though padayatre did not take in place on Thursday police had to deal with traffic


ಪೊಲೀಸರದ್ದು ಥ್ಯಾಂಕ್ ಲೆಸ್ ಜಾಬ್ ಅಂತ ನಾವು ಆಗಾಗ ಹೇಳುತ್ತಿರುತ್ತೇವೆ. ಅವರು ಮಾಡುವ ಕೆಲಸಕ್ಕೆ ಬೆಲೆ ಕಟ್ಟಲಾಗದು. ಹಗಲು ರಾತ್ರಿ ಕೆಲಸ ಮಾಡುವ ಇಲಾಖೆಗಳಲ್ಲಿ ಪೊಲೀಸ್ ಇಲಾಖೆಯೂ ಒಂದು. ಊರು-ಪಟ್ಟಣ-ನಗರಗಳನ್ನು ಕಾಯುವ ಜೊತೆಗೆ ಚುನಾವಣೆ, ಉತ್ಸವ, ಮುಷ್ಕರ, ಬಂದ್, ಜಾತ್ರೆ ಮತ್ತು ಪಾದಯಾತ್ರೆ ಮೊದಲಾದವುಗಳು ನಡೆವಾಗ ಬಂದೋಬಸ್ತ್ ಗೆ ಇವರು ಹೋಗಬೇಕು. ಇಲ್ಲಿ ರಾಮನಗರದಲ್ಲಿ ಆಗುತ್ತಿರುವುದು ಅದೇ. ಕಾಂಗ್ರೆಸ್ ಹಮ್ಮಿಕೊಂಡಿದ್ದ ಪಾದಯಾತ್ರೆಯ ಐದನೇ ದಿನ ಇಲ್ಲಿಂದಲೇ ಆರಂಭವಾಗಿತ್ತು. ಅದು ಇಲ್ಲೇ ಸ್ಥಗಿತಗೊಂಡಿದ್ದು ಬೇರೆ ವಿಷಯ. ಆದರೆ, ಗುರುವಾರವೂ ಪಾದಯಾತ್ರೆ ನಡೆದಿದ್ದರೆ, ನಿಮಗೆ ಈ ವಿಡಿಯೋನಲ್ಲಿ ಕಾಣುತ್ತಿರುವ ಪೊಲೀಸರು ಸಹ ಕಾಂಗ್ರೆಸ್ ನಾಯಕರ ಮತ್ತು ಕಾರ್ಯಕರ್ತರ ಜೊತೆ ಗಾವುದ ದೂರ ನಡೆಯಬೇಕಾಗುತಿತ್ತು.

ಹಾಗಾಗಲಿಲ್ಲ ಅನ್ನೋದೇನೋ ನಿಜವೇ, ಆದರೆ ರಾಮನಗರದಲ್ಲಿ ಜನ ಸೇರಿಬಿಟ್ಟಿದ್ದರಲ್ಲ, ಅದರಲ್ಲೂ ವಿಶೇಷವಾಗಿ ಜಿಲ್ಲಾ ಕಾಂಗ್ರೆಸ್ ಕಚೇರಿಯ ಮುಂದೆ ಜನ ಜಾತ್ರೆಯಂತೆ ನೆರೆದಿದ್ದರಿಂದ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಜನರನ್ನು ರಸ್ತೆಗಳ ಪಕ್ಕಕ್ಕೆ ಸರಿಸಿ ವಾಹನಗಳಿಗೆ ದಾರಿ ಮಾಡಿಕೊಡಬೇಕಿತ್ತು.

ರಾಜಕಾರಣಿಗಳ ಪಾದಯಾತ್ರೆಯಲ್ಲಿ ಪಾಲ್ಗೊಂಡವರ ಜೊತೆ ವ್ಯವಹರಿಸುವುದು ಸಹ ಕಷ್ಟವೇ. ನಾಯಕರ ಜೊತೆ ಇರುವ ಪುಡಿನಾಯಕರು ಸಹ ದೊಡ್ಡ ದೊಡ್ಡ ನಾಯಕರಂತೆ ವರ್ತಿಸುತ್ತಿರುತ್ತಾರೆ. ಸ್ವಲ್ಪ ಸೈಡಿಗೆ ಹೋಗಿ ಸರ್, ಅಂತ ಪೊಲೀಸರು ಹೇಳಿದರೆ ಹುಬ್ಬೇರಿಸುತ್ತಾರೆ, ತೋಳೇರಿಸುತ್ತಾರೆ!

ಅದಕ್ಕೆ ನಾವು ಹೇಳಿದ್ದು ಪೊಲೀಸರು ಮಾಡೋದು ಥ್ಯಾಂಕ್ ಲೆಸ್ ಜಾಬ್!

TV9 Kannada


Leave a Reply

Your email address will not be published. Required fields are marked *