ರಾಮನಗರ: ಜಿಲ್ಲೆಯ ಜಿಲ್ಲಾಸ್ಪತ್ರೆಗೆ ನಿಖಿಲ್ ಕುಮಾರಸ್ವಾಮಿ ಆ್ಯಂಬುಲೆನ್ಸ್ ಕೊಡುಗೆ ನೀಡುವ ಮೂಲಕ ಜಿಲ್ಲೆಯಲ್ಲಿ ಮೂರನೇ ತಲೆಮಾರಿನ ರಾಜಕಾರಣಕ್ಕೆ ಮುನ್ನುಡಿ ಬರೆದಿದ್ದಾರಾ ಎಂಬ ಚರ್ಚೆಯೊಂದು ರಾಜಕೀಯ ಪಡಸಾಲೆಯನ್ನೇರಿದೆ.

ಇತ್ತೀಚೆಗೆ ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್​ ಒಂದರಲ್ಲಿ ತಹಶೀಲ್ದಾರ್ ಮಾತನಾಡುತ್ತಾ.. ಆ್ಯಂಬುಲೆನ್ಸ್​ಗೆ ಬೇಡಿಕೆ ಇಟ್ಟಿದ್ದರು. ಈ ಬೇಡಿಕೆಯನ್ನ ಇದೀಗ ನಿಖಿಲ್ ಕುಮಾರಸ್ವಾಮಿ ಈಡೇರಿಸಿದ್ದಾರೆ.

ಇದಷ್ಟೇ ಅಲ್ಲದೇ ರಾಮನಗರ ಜಿಲ್ಲೆಯ ಬಗ್ಗೆ ನಿಖಿಲ್ ಕುಮಾರಸ್ವಾಮಿಯವರಿಗೆ ವಿಶೇಷ ಪ್ರೀತಿಯಿದ್ದು ಪ್ರತೀಬಾರಿಯೂ ರಾಮನಗರ ಕ್ಷೇತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿರುತ್ತಾರೆ. ತಮ್ಮ ಕುಟುಂಬಕ್ಕೆ ರಾಮನಗರ ನೀಡಿದ ರಾಜಕೀಯ ಅಬ್ಯುದಯ, ತಾತ ದೇವೇಗೌಡ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಸಿಎಂ ಗಾದಿಗೇರಿದ್ದು. ನಂತರ ತಂದೆ ಕೂಡ ಮೊದಲ ಬಾರಿ ರಾಮನಗರದಿಂದ ಸ್ಪರ್ಧಿಸಿ ಗೆದ್ದ ಬಳಿಕ ಸಿಎಂ ಆಗಿದ್ದು ಹೀಗೆ ಹಲವು ಬಾರಿ ನಿಖಿಲ್ ರಾಮನಗರ ಕ್ಷೇತ್ರವನ್ನ ಉಲ್ಲೇಖಿಸುತ್ತಿರುತ್ತಾರೆ.

May be an image of 4 people, people standing and outdoors

ಸದ್ಯ ತಾಯಿ ಅನಿತಾ ಕುಮಾರಸ್ವಾಮಿ ಕೂಡ ರಾಮನಗರ ಕ್ಷೇತ್ರವನ್ನ ಪ್ರತಿನಿಧಿಸುತ್ತಿದ್ದಾರೆ. ಆದ್ರೆ 2023 ರ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ನಿಖಿಲ್ ಸ್ಪರ್ಧಿಸಲಿದ್ದಾರಾ ಎಂಬ ಚರ್ಚೆ ಇದೀಗ ಮುನ್ನೆಲೆಗೆ ಬಂದಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸುವ ಮೂಲಕ ರಾಜಕೀಯ ರಂಗಕ್ಕೆ ಎಂಟ್ರಿ ಕೊಟ್ಟಿರುವ ಜಾಗ್ವಾರ್, ರಾಮನಗರದಿಂದ ಸ್ಪರ್ಧಿಸಿದ್ರೆ 3ನೇ ತಲೆಮಾರಿನ ರಾಜಕೀಯ ಕ್ಷೇತ್ರದಲ್ಲಿ ಜೊತೆಗೆ ಒಂದೇ ಕುಟುಂಬದ ನಾಲ್ವರು ಒಂದೇ ಕ್ಷೇತ್ರದಲ್ಲಿ ಸ್ಪರ್ಧಿಸಿದಂತಾಗುತ್ತದೆ.

ಹಾಗಾದ್ರೆ ನಿಖಿಲ್ ಗೆ ಸಿಗಲಿದೆಯಾ ‘ರಾಮ’ನ ಆಶೀರ್ವಾದ? 2023ರ ಸಾರ್ವತ್ರಿಕ ಚುನಾವಣೆಗೆ ರಾಮನಗರ ಕ್ಷೇತ್ರದಿಂದ ಜೆಡಿಎಸ್ ಯುವರಾಜ ಸ್ಪರ್ಧಿಸ್ತಾರಾ..? ಅದಕ್ಕಾಗಿಯೇ ಆ್ಯಂಬುಲೆನ್ಸ್ ಕೊಡುಗೆ ನೀಡಿ, ಕ್ಷೇತ್ರದಲ್ಲಿ ಕುಟುಂಬದ ರಾಜಕೀಯ ನಂಟು ಹೆಚ್ಚಿಸಿಕೊಳ್ಳಲು ನಿಖಿಲ್ ತಯಾರಿ ನಡೆಸ್ತಿದ್ದಾರಾ ಎಂಬ ಚರ್ಚೆ ಶುರುವಾಗಿದೆ.

The post ರಾಮನಗರದಲ್ಲಿ 3ನೇ ತಲೆಮಾರಿನ ರಾಜಕೀಯಕ್ಕೆ ಮುನ್ನುಡಿ ಬರೆದ್ರಾ ನಿಖಿಲ್ ಕುಮಾರಸ್ವಾಮಿ..? appeared first on News First Kannada.

Source: newsfirstlive.com

Source link