ರಾಮನಗರ-ಚನ್ನಪಟ್ಟಣ ನಗರಸಭೆಗೆ ಇಂದು ಚುನಾವಣೆ ನಡೆಯುತ್ತಿದೆ. ರಾಮನಗರದ 31 ವಾರ್ಡ್ ಹಾಗೂ ಚನ್ನಪಟ್ಟಣದ 31 ವಾರ್ಡ್​ಗಳಿಗೆ ಮತದಾನ ಆರಂಭವಾಗಿದೆ. ಮತದಾರರು ವಿರಳವಾಗಿ ಮತಗಟ್ಟೆಗಳಿಗೆ ಬರುತ್ತಿದ್ದಾರೆ.

ಚುನಾವಣಾಧಿಕಾರಿಗಳು ಕೋವಿಡ್ ತಡೆಗೆ ಹೆಚ್ಚು ಒತ್ತು ಕೊಟ್ಟಿದ್ದು ಪೋಲಿಂಗ್ ಬೂತ್​ಗಳಲ್ಲಿ ಕೋವಿಡ್ ನಿಯಮಗಳ ಪಾಲಿಸಲಾಗ್ತಿದೆ. ಮತದಾರರಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗ್ತಿದ್ದು, ಸ್ಯಾನಿಟೈಸರ್ ಹಾಗೂ ಮಾಸ್ಕ್ ವಿತರಣೆ ಮಾಡಲಾಗ್ತಿದೆ.

ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆ ವರೆಗೆ ಮತದಾನಕ್ಕೆ ಅವಕಾಶ ನಡಲಾಗಿದೆ. ಕೊರೊನಾ ಸೋಂಕಿತರಿಗೆ ಸಂಜೆ 4 ರಿಂದ5 ಗಂಟೆಗೆ ಮತದಾನ ಮಾಡಲು ವ್ಯವಸ್ಥೆ ಮಾಡಲಾಗಿದೆ.

The post ರಾಮನಗರ-ಚನ್ನಪಟ್ಟಣ ನಗರಸಭೆಗೆ ಮತದಾನ, ಕೋವಿಡ್ ನಿಯಮ ಪಾಲನೆಗೆ ಒತ್ತು appeared first on News First Kannada.

Source: News First Kannada
Read More