ರಾಮನಗರ: ಬಸ್​ನಲ್ಲಿ ನೇತಾಡುತ್ತ ಪ್ರಯಾಣ ಮಾಡಿದ ಮಕ್ಕಳು; ವಿಡಿಯೋ ಇಲ್ಲಿದೆ | Lack of bus Facility in Ramanagar and students are struggling


ಶಾಲೆ, ಕಾಲೇಜುಗಳು ಆರಂಭವಾಗುತ್ತಿದ್ದಂತೆ ವಿದ್ಯಾರ್ಥಿಗಳಿಗೆ ಒಂದು ದೊಡ್ಡ ಸಮಸ್ಯೆ ಎದುರಾಗಿದೆ. ಗ್ರಾಮೀಣ ಭಾಗದ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಸಿಟಿಗೆ ಬರಬೇಕು. ಆದರೆ ಊರಿಗೆ ಒಂದೊಂದೆ ಬಸ್ ಇರುವ ಕಾರಣ ಅದೇ ಬಸ್​ನಲ್ಲಿ ಎಲ್ಲರೂ ಬರಬೇಕು. ಇಲ್ಲದಿದ್ದರೆ ನಡೆದುಕೊಂಡೆ ಹೋಗಬೇಕು. ಆದರೆ ಕಾಲೇಜು, ಶಾಲೆಗಳಿಗೆ ತಡವಾಗುತ್ತೆ ಅಂತ ಮಕ್ಕಳು ಜೀವದ ಹಂಗು ತೊರೆದು ಬಸ್​ನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಚನ್ನಪಟ್ಟಣದಿಂದ ರಾಮನಗರಕ್ಕೆ ಪ್ರಯಾಣಿಸುತ್ತಿದ್ದಾರೆ. ಬಸ್ ಬಾಗಿಲ ತುದಿ ನಿಂತು ಪ್ರಯಾಣ ಮಾಡುತ್ತಿದ್ದಾರೆ. ಸ್ವಲ್ಪ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಬಸ್ ಕೊರತೆಯಿಂದ ಅನಿವಾರ್ಯವಾಗಿ ಮಕ್ಕಳು ಬಸ್​ನಲ್ಲಿ ನೇತಾಡುತ್ತ ಹೋಗಬೇಕು. ಪ್ರತಿನಿತ್ಯ ವಿದ್ಯಾರ್ಥಿಗಳು ಜೋತು ಬಿದ್ದು ಪ್ರಯಾಣ ನಡೆಸಿದ್ದರು, ಅಧಿಕಾರಿಗಳು ಮಾತ್ರ ಇದರ ಗಮನಕೊಡುತ್ತಿಲ್ಲ. ವಿದ್ಯಾರ್ಥಿಗಳ ಪರದಾಟ ಸದ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ.

TV9 Kannada


Leave a Reply

Your email address will not be published. Required fields are marked *