ರಾಮನಗರ: 13 ವರ್ಷಗಳ ನಂತರ ಚನ್ನಪಟ್ಟಣ ನಗರಸಭೆ ಜೆಡಿಎಸ್ ತೆಕ್ಕೆಗೆ | JDS embraces Channapatna Municipality after 13 years in Ramanagara


ರಾಮನಗರ: 13 ವರ್ಷಗಳ ನಂತರ ಚನ್ನಪಟ್ಟಣ ನಗರಸಭೆ ಜೆಡಿಎಸ್ ತೆಕ್ಕೆಗೆ

ಅವಿರೋಧವಾಗಿ ಅಯ್ಕೆಯಾದ ಜೆಡಿಎಸ್

ರಾಮನಗರ: 13 ವರ್ಷಗಳ ನಂತರ ಚನ್ನಪಟ್ಟಣ ನಗರಸಭೆ ಜೆಡಿಎಸ್​ನ ಅಧಿಕಾರದ ತೆಕ್ಕೆಗೆ ಬಂದಿದೆ. ಚನ್ನಪಟ್ಟಣ ನಗರಸಭೆ ಅಧ್ಯಕ್ಷರಾಗಿ 26ನೇ ವಾರ್ಡ್​ನ ಜೆಡಿಎಸ್ ಸದಸ್ಯ ಪ್ರಶಾಂತ್ ಆಯ್ಕೆಯಾಗಿದ್ದಾರೆ. ಇನ್ನು ಉಪಾಧ್ಯಕ್ಷರಾಗಿ 19 ನೇ ವಾರ್ಡ್​ನ ಜೆಡಿಎಸ್ ಸದಸ್ಯೆ ಹಸೀನ ಫರ್ಹಿನ್ ಆಯ್ಕೆಯಾಗಿದ್ದಾರೆ. ಒಟ್ಟು 31 ಸ್ಥಾನಗಳಲ್ಲಿ‌ ಜೆಡಿಎಸ್ 16 ಸ್ಥಾನ, ಬಿಜೆಪಿ 7, ಕಾಂಗ್ರೆಸ್ 7 ಹಾಗೂ ಒಬ್ಬ ಪಕ್ಷೇತರ ಸದಸ್ಯ ಮತಗಳನ್ನು ಪಡೆದುಕೊಂಡಿದ್ದಾರೆ.

ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಜೆಡಿಎಸ್ ಸರಳ ಬಹುಮತ ಪಡೆದಿತ್ತು. ಬಿಜೆಪಿ ಹಾಗೂ ಕಾಂಗ್ರೆಸ್​ನಿಂದ ಯಾರು ನಾಮಪತ್ರ ಸಲ್ಲಿಸಿದ ಹಿನ್ನೆಲೆ ಅವಿರೋಧವಾಗಿ ಜೆಡಿಎಸ್ ಆಯ್ಕೆಯಾಗಿದೆ. ಜೆಡಿಎಸ್ ತೆಕ್ಕೆಗೆ ಚನ್ನಪಟ್ಟಣ ನಗರಸಭೆ ಬಂದ ಹಿನ್ನೆಲೆ ಪಟಾಕಿ ಸಿಡಿಸಿ ಕಾರ್ಯಕರ್ತರು ಸಂಭ್ರಮಿಸಿದ್ದಾರೆ.

ಇದನ್ನೂ ಓದಿ:
ಅಹಿಂದ ನಾಯಕನೆಂದು ಅಧಿಕಾರಕ್ಕೆ ಬಂದಮೇಲೆ ದಲಿತರ ಪರ ಕೆಲಸ ಮಾಡುವುದು ಕರ್ತವ್ಯ: ಬಿಜೆಪಿ ಟ್ವೀಟ್

ಹಾನಗಲ್, ಸಿಂದಗಿ ಉಪಚುನಾವಣೆ ಅಂತಿಮ ಫಲಿತಾಂಶ: ಯಾರಿಗೆ ಎಷ್ಟು ಅಂತರದ ಗೆಲುವು? ಇಲ್ಲಿದೆ ವಿವರ

 

TV9 Kannada


Leave a Reply

Your email address will not be published. Required fields are marked *