ರಾಮನವಮಿ ನಿಮಿತ್ತ ಜಂಜಾಟ ಮರೆತು ಡಿಜೆ ಸದ್ದಿಗೆ ಭರ್ಜರಿ ಸ್ಟೆಪ್ ಹಾಕಿದ ಕೇದ್ರ ಸಚಿವ ಪ್ರಹ್ಲಾದ ಜೋಶಿ | Sake of Ramanavami Union Minister Prahlada Joshi, who has forgotten the frenzy, has taken a big step towards DJ


ರಾಮನವಮಿ ನಿಮಿತ್ತ ಜಂಜಾಟ ಮರೆತು ಡಿಜೆ ಸದ್ದಿಗೆ ಭರ್ಜರಿ ಸ್ಟೆಪ್ ಹಾಕಿದ ಕೇದ್ರ ಸಚಿವ ಪ್ರಹ್ಲಾದ ಜೋಶಿ

ಕೇದ್ರ ಸಚಿವ ಪ್ರಹ್ಲಾದ ಜೋಶಿ ಭರ್ಜರಿ ಸ್ಟೆಪ್

ಹುಬ್ಬಳ್ಳಿ: ರಾಮನವಮಿ (Ramanavami) ನಿಮಿತ್ತ ನಗರದ ಬಾನಿ ಓಣಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇದ್ರ ಸಚಿವ ಪ್ರಹ್ಲಾದ ಜೋಶಿ ಭರ್ಜರಿ ಸ್ಟೆಪ್ ಹಾಕಿದ್ದಾರೆ. ಡಿಜೆ ಸದ್ದಿಗೆ ಜಂಜಾಟ ಮರೆತು ಶ್ರೀರಾಮ ನಾಮಕ್ಕೆ ಮಾರು ಹೋಗಿದ್ದಾರೆ. ಶ್ರೀರಾಮನ ಮೆರವಣಿಗೆಯಲ್ಲಿ ಬಿಜೆಪಿ, ಹಿಂದೂಪರ ಸಂಘಟನೆ ಕಾರ್ಯಕರ್ತರು ಭಾಗಿ ಆಗಿದ್ದರು. ಅದೇ ರೀತಿಯಾಗಿ ಭಟ್ಕಳದ ಚನ್ನಪಟ್ಟಣ ಶ್ರೀ ಹನುಮಂತ ದೇವರ ರಥೋತ್ಸವ ನಿಮಿತ್ತ ಡಿಜೆ ಸಾಂಗ್ಸ್​ಗೆ ಭಟ್ಕಳ ಶಾಸಕ ಸುನೀಲ್ ನಾಯ್ಕ ಸಕತ್ ಸ್ಟೇಪ್ಸ ಹಾಕಿದ್ದಾರೆ. ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಹನುಮಂತನ ಬ್ರಹ್ಮರಥೋತ್ಸವ ನಡೆದಿದ್ದು, ದೇವಾಲಯದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ರಥೋತ್ಸವ ಮೆರವಣಿಗೆ ಮಾಡಲಾಯಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು

ವಿವಿಧೆಡೆ ಶ್ರೀರಾಮ ಶೋಭಾಯಾತ್ರೆ

ಬೆಳಗಾವಿ: ರಾಮ ನವವಿ ಅಂಗವಾಗಿ ನಿಪ್ಪಾಣಿ ಪಟ್ಟಣದಲ್ಲಿ ರಾಮಸೇನಾ ಹಿಂದೂಸ್ಥಾನ ಸಮಿತಿಯಿಂದ 15 ಅಡಿ ಎತ್ತರದ ರಾಮ, ಹನುಮಂತನ ಮೂರ್ತಿ ಮೆರವಣಿಗೆ ಮಾಡಲಾಗಿದೆ. ಶೋಭಾಯಾತ್ರೆಯಲ್ಲಿ ವಿವಿಧ ಕಲಾ ತಂಡಗಳು ಭಾಗಿಯಾಗಿವೆ.

ಚಿಕ್ಕಬಳ್ಳಾಪುರ: ಶ್ರೀರಾಮ ನವಮಿ ಅಂಗವಾಗಿ ಗೌರಿಬಿದನೂರಿನ ನದಿಗಡ್ಡೆ ಆಂಜನೇಸ್ವಾಮಿ ದೇವಸ್ಥಾನದಿಂದ ಬೆಂಗಳೂರು ವೃತ್ತದವರೆಗೆ ವಿಹೆಚ್​ಪಿ, ಬಜರಂಗದಳ ಕಾರ್ಯಕರ್ತರಿಂದ ಶೋಭಾಯಾತ್ರೆ ನಡೆಸಲಾಗಿದೆ. ಭಗವಾಧ್ವಜ ಹಿಡಿದು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಕುಣಿದು ಕುಪ್ಪಳಿಸಿದ್ದಾರೆ.

TV9 Kannada


Leave a Reply

Your email address will not be published.