ಉಡುಪಿ: ರಾಮಮಂದಿರ ನಿರ್ಮಾಣ ಕಾರ್ಯ ಮುಂದುವರೆಯುತ್ತಿದೆ. ಇದೇ ವೇಳೆ ರಾಮಮಂದಿರ ಜಾಗ ಖರೀದಿಯಲ್ಲಿ ಅವ್ಯವಹಾರದ ಆರೋಪ ಕೇಳಿಬಂದಿದೆ. ರಾಮಮಂದಿರ ಟ್ರಸ್ಟ್ ಇದನ್ನು ಗಮನಿಸಿದೆ. ಈ ಸಂಬಂಧ ಟ್ರಸ್ಟ್​​ನ ಕಾರ್ಯದರ್ಶಿಗಳು, ಖಜಾಂಜಿ ಮತ್ತು ಸದಸ್ಯರು ಮಾತುಕತೆ ನಡೆಸಿದ್ದಾರೆ ಅಂತ ರಾಮಂದಿರ ಟ್ರಸ್ಟ್ ನ ವಿಶ್ವಸ್ಥ ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀ ಹೇಳಿದ್ದಾರೆ.

ಆರೋಪದ ಕುರಿತು ಸ್ಪಷ್ಟನೆ ನೀಡಿರುವ ಅವರು, ಎಲ್ಲವನ್ನೂ ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ. ಎರಡು ದಿನಗಳಲ್ಲಿ ಎಲ್ಲವನ್ನೂ ಅವರು ಸಮಾಜದ ಮುಂದೆ ಇಡಲಿದ್ದಾರೆ. ಟ್ರಸ್ಟ್ ನಿಂದ ಯಾವುದೇ ಅವ್ಯವಹಾರವೂ ನಡೆದಿಲ್ಲ ಎಂದಿದ್ದಾರೆ.

ಈ ಬಗ್ಗೆ ಪರಿಪೂರ್ಣ ವಿವರಗಳನ್ನು‌ ಟ್ರಸ್ಟ್ ಜನರ ಮುಂದೆ ತೆರೆದಿಡಲಿದೆ ಎಂದು ಶ್ರೀಗಳು ತಿಳಿಸಿದ್ದಾರೆ.

 

The post ರಾಮಮಂದಿರ ಟ್ರಸ್ಟ್​​ನಿಂದ ಯಾವುದೇ ಅವ್ಯವಹಾರವೂ ನಡೆದಿಲ್ಲ -ಪೇಜಾವರ ಶ್ರೀ appeared first on News First Kannada.

Source: newsfirstlive.com

Source link