ರಾಮಾಚಾರಿಯ ಅತ್ತಿಗೆ ರಿಯಲ್ ಲೈಫೈನಲ್ಲಿ ಹೇಗಿದ್ದಾರೆ ಗೊತ್ತಾ?


ರಾಮಾಚಾರಿ ಸೀರಿಯಲ್​ ಸಖತ್​ ಸೌಂಡ್​ ಮಾಡುತ್ತಿದೆ. ಪ್ರತಿಯೊಂದು ಪಾತ್ರವೂ ವಿಭನ್ನವಾಗಿವೆ. ದೊಡ್ಡ ತಾರಾಬಳಗವವನ್ನ ಹೊಂದಿರುವ ರಾಮಾಚಾರಿಯ ಅದ್ಧೂರಿತನಕ್ಕೆ ವೀಕ್ಷಕರು ಫಿದಾ ಆಗಿದ್ದು, ಕಾಸ್ಟೂಮ್​ನಿಂದ ಹಿಡಿದು ಭಾಷೆ, ಲೋಕೆಶನ್​ ಎಲ್ಲವೂ ಜಸ್ಟ್​ ವಾವ್​ ಫಿಲಿಂಗ್ ಕೊಡುತ್ತಿವೆ.

ಇನ್ನೂ ಕಥಾ ನಾಯಕ ರಾಮಚಾರಿಯ ಕುಟುಂಬ ಪಕ್ಕಾ ಸಂಪ್ರಾದಯಸ್ತ ಬ್ರಾಹ್ಮಣ ಕುಟುಂಬವಾಗಿದ್ದು, ಅದೇ ರೀತಿ ಪ್ರತಿಯೊಂದು ಪಾತ್ರ ಕೂಡ ಕಣ್ಮನ ಸೆಳೆಯುತ್ತಿವೆ. ಸದ್ಯ ನಾವ್​ ಈಗ ಹೇಳೊಕೆ ಹೊರಟಿರುವುದು ರಾಮಾಚಾರಿಯ ಅತ್ತಿಗೆ ಪಾತ್ರ ಮಾಡುತ್ತಿರುವ ಸ್ನಿಗ್ಧ ಸುಂದರಿ ಅಪರ್ಣಾ ಶಾಸ್ತ್ರಿ ಬಗ್ಗೆ. ಸೀರಿಯಲ್​ನಲ್ಲಿ ನಾದಿನಿಗೆ ಭರತನಾಟ್ಯ ಕಲಿಸುವ ಗುರುವಾಗಿ, ಮೈದನ ರಾಮಾಚಾರಿಗೆ ಎರಡನೇ ತಾಯಿಯಾಗಿ ಇಡೀ ಕುಟುಂಬವನ್ನ ಸಂಬಾಳಿಸುವ ಪ್ರಬುದ್ಧ ಪಾತ್ರವನ್ನ ನಿರ್ಹಿಸುತ್ತಿರುವ ಚಲುವೆ ಪುನೀತಾ ಗೌಡ.

ಪುನೀತಾ ಮೂಲತಃ ಭರತನಾಟ್ಯ ಡ್ಯಾನ್ಸರ್​. ಭರತನಾಟ್ಯದಲ್ಲಿ ಎಂಎ ಪದವಿ ಓದುತ್ತಿದ್ದು, ಪುನೀತಾ ತುಂಬಾ ಇಷ್ಟಪಡುವ ಡ್ಯಾನ್ಸ್​ಗೆ ಸಂಬಂದಪಟ್ಟ ಪಾತ್ರವನ್ನೇ ರಾಮಾಚಾರಿಯಲ್ಲಿ ನಿರ್ವಹಿಸುತ್ತಿರುವುದು ವಿಶೇಷ. ಅಂದ್ಹಾಗೆ ಪುನೀತಾ ರಿಯಲ್​ ಲೈಫ್​ನಲ್ಲಿ ಅಪರ್ಣಾ ಪಾತ್ರಕ್ಕೆ ತದ್ವಿರುದ್ಧ. ಸಖತ್​ ಸ್ಟೈಲಿಶ್​ ಡ್ಯಾಶಿಂಗ್​ ಗರ್ಲ್​. ಆದ್ರೇ ಅವ್ರು ನಿರ್ವಹಿಸುತ್ತಿರುವ ಪಾತ್ರಕ್ಕೂ ಹಾಗೂ ಅವ್ರಿಗೂ ಇರುವ ಒಂದೇ ಒಂದು ಸಾಮ್ಯತೆ ಅಂದ್ರೇ ಡ್ಯಾನ್ಸ್.

ಪ್ರತಿಭಾವಂತೆಯಾಗಿರುವ ಪುನೀತಾಗೆ ಚಿಕ್ಕವಯಸ್ಸಿನಲ್ಲಿಯೇ ರಾಮ್​ಜೀ ಅವ್ರ ನಿರ್ಮಾಣದ ದೊಡ್ಡ ಮಟ್ಟದ ಪ್ರಾಜಕ್ಟ್​ನಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಅವ್ರು ಅಷ್ಟೇ ಅಚ್ಚುಕಟ್ಟಾಗಿ ಪಾತ್ರವನ್ನ ನಿಭಾಯಿಸುತ್ತಿದ್ದಾರೆ.  ಇನ್ನೂ ಕಲ್ಕತಾದ ಚಂದಮ ಸರಸ್ವತಿ ವಿನ್ನರ್​ ಆಗಿರುವ ಪುನೀತಾ ನಾಟ್ಯ ಮಯೂರಿ ಸೇರಿದಂತೆ ನೃತ್ಯದಲ್ಲಿ ಹಲವಾರು ಪ್ರಶಸ್ತಿಗಳನ್ನ ಮೂಡಿಗೆರಿಸಿಕೊಂಡಿದ್ದಾರೆ.

ಒಟ್ಟಿನಲ್ಲಿ ಕನ್ನಡ ಕಿರುತೆರೆಗೆ ಉದಯೋನ್ಮಖ ಪ್ರತಿಭಾವಂತ ನಟಿ ಸಿಕ್ಕಿದ್ದು, ಪುನೀತಾ ಕಲಾ ಬದುಕು ಮತ್ತಷ್ಟು ಬೆಳವಣಿಗೆ ಕಾಣಲಿ ಅನ್ನೋದು ನಮ್ಮ ಆಶಯ. ಆಲ್​ ದಿ ಬೆಸ್ಟ್​ ಪುನೀತಾ.

News First Live Kannada


Leave a Reply

Your email address will not be published.