ಸ್ಯಾಂಡಲ್ವುಡ್ನಲ್ಲಿ ಇದೇ ತಿಂಗಳ 31 ನೇ ತಾರೀಖು ಕೋಟಿ ನಿರ್ಮಾಪಕ ರಾಮು ನಿರ್ಮಾಣದ ಅರ್ಜುನ್ ಗೌಡ ಸಿನಿಮಾ ಗ್ರ್ಯಾಂಡ್ ರಿಲೀಸ್ ಆಗುತ್ತಿದೆ. ಈ ಸಂದರ್ಭದಲ್ಲಿ ಅರ್ಜುನ್ ಗೌಡ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಅನ್ನು ನಗರದ ಖಾಸಗಿ ಹೋಟೆಲ್ನಲ್ಲಿ ಆಯೋಜಿಸಲಾಗಿತ್ತು.
ಇದೇ ಸಂದರ್ಭದಲ್ಲಿ ಮಾತನಾಡಿದ ಕ್ರೇಜಿ ಸ್ಟಾರ್ ರವಿ ಚಂದ್ರನ್, ರಾಮು ನಾನು ಮೊದಲು ಸಿನಿಮಾ ಮಾಡಬೇಕು ಅಂದುಕೊಂಡಿದ್ದು ಶಕುನಿ ಸಿನಿಮಾವನ್ನ. ಶಕುನಿ ಸಿನಿಮಾ ಸುಮಾರು 40% ಕಂಪ್ಲೀಟ್ ಆಗಿತ್ತು. ಆದರೆ ಒಂದು ದಿನ ಮನೆಗೆ ಬಂದ ರಾಮು ಸರ್ ಶಕುನಿ ಸಿನಿಮಾದಲ್ಲಿ ನಿಮ್ಮ ಗೆಟಪ್ ಚೆನ್ನಾಗಿಲ್ಲ ಅಂದ್ರು. ಆಗ ನಾನು ಸಿನಿಮಾ ಅರ್ಧ ಕಂಪ್ಲೀಟ್ ಆಗಿದೆ. ಈಗ ಚೆನ್ನಾಗಿಲ್ಲ ಅಂದ್ರೆ ಹೇಗೆ? ಅಂದೆ. ಅದಕ್ಕೆ ರಾಮು ಇಲ್ಲ ಸಾರ್ ಶಕುನಿ ಸಿನಿಮಾ ಬೇಡ ಅಂದ್ರು.
ಆಗ ನಾನು ಸರಿ ಶಕುನಿ ಸಿನಿಮಾ ಬೇಡ. ನಿನಗೆ ಇಷ್ಟ ಆಗುವಂತೆ ಒಂದು ಸಿನಿಮಾ ಮಾಡ್ತೀನಿ ಅಂತ ಹೇಳಿ ಮಾಡಿದ ಸಿನಿಮಾನೇ ಮಲ್ಲ. ಆ ಸಿನಿಮಾ ಸೂಪರ್ ಹಿಟ್ ಆಯ್ತು. ನಾನು ಶಿವಣ್ಣ, ದೇವರಾಜ್ ಉಪೇಂದ್ರ, ಗಣೇಶ್, ಪ್ರಜ್ವಲ್ ಎಲ್ಲರೂ ರಾಮು ಬ್ಯಾನರ್ನಲ್ಲಿ ಸಿನಿಮಾ ಮಾಡಿದ್ದೀವಿ ಅಂತ ರಾಮು ಬಗೆಗಿನ ನೆನಪನ್ನು ಮೆಲುಕು ಹಾಕಿದ್ದಾರೆ.
ಮಾಲಾಶ್ರೀ ಅವರ ಬಗ್ಗೆ ಮಾತನಾಡಿದ ರವಿಚಂದ್ರನ್, ನನಗೋಸ್ಕರ ಮಾಲಾಶ್ರೀ ರಾಮಾಚಾರಿ ಸಿನಿಮಾ ಮಾಡೋಕೆ ಒಪ್ಪಿಗೆ ನೀಡಿದ್ದರು. 18 ದಿನ ಹಗಲು ರಾತ್ರಿ ಸಿನಿಮಾ ಮಾಡಿ ಕಂಪ್ಲೀಟ್ ಮಾಡಿಕೊಟ್ಟರು. ರಾಮಾಚಾರಿ ಮಾಡೋ ಟೈಮ್ನಲ್ಲಿ ಮಾಲಾಶ್ರೀ ತುಂಬಾ ಬ್ಯುಸಿ ನಟಿ. ಆ ಸಿನಿಮಾ ಗೆದ್ದಾಗ ಸಾಕಷ್ಟು ಜನರ ಜೀವ ಮತ್ತು ಜೀವನ ಕಾಪಾಡಿದ್ರು ಅಂತ ಸಹಾಯದ ಋಣ ತೀರಿಸೋ ಅವಕಾಶ ಸಿಕ್ಕಿದ್ದು ಮಲ್ಲ ಸಿನಿಮಾದ ಮೂಲಕ. ನಾವು ಮಲ್ಲ-2 ಮಾಡೋಣಾ.? ನಾನು ನೀವು ಮಾಡೋಣಾ ಅಥವಾ ನಾನು ನಿಮ್ಮ ಮಗಳು ಮಾಡೋಣಾ? ಬೇಡ ನನ್ನ ಮಗ ನಿಮ್ಮ ಮಗಳು ಮಾಡಲಿ ಬಿಡಿ ಎಂದು ಮಾಲಾಶ್ರೀ ಅವರ ಮೊಗದಲ್ಲಿ ಮಂದಹಾಸ ಮೂಡಿಸಿದ್ದಾರೆ ರವಿ ಮಾಮ.