ಕೊರೊನಾದಿಂದಾಗಿ ನಿರ್ಮಾಪಕ ಕೋಟಿ ರಾಮು ಇಂದು ರಾಮಯ್ಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಹಿನ್ನೆಲೆ ಸಂತಾಪ ವ್ಯಕ್ತಪಡಿಸಿರುವ ನಟ ದರ್ಶನ್.. ರಾಮು ಕನ್ನಡ ಚಿತ್ರರಂಗದ ಹೆಮ್ಮೆಯ ನಿರ್ಮಾಪಕರಲ್ಲೊಬರು ಎಂದಿದ್ದಾರೆ.

ಈ ಕುರಿತು ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿರುವ ದರ್ಶನ್.. ಕನ್ನಡ ಚಿತ್ರರಂಗದ ಹೆಮ್ಮೆಯ ನಿರ್ಮಾಪಕರಲ್ಲೊಬ್ಬರು – ಕೋಟಿ ರಾಮು ರವರು ಇಂದು ನಮ್ಮನ್ನು ಅಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ತಡೆದುಕೊಳ್ಳುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ.. ದಯಮಾಡಿ ಮನೆಯಲ್ಲಿರಿ. ಎಲ್ಲಾ ಸುರಕ್ಷತೆಯ ಕ್ರಮಗಳನ್ನು ಪಾಲಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

 

The post ರಾಮುಗೆ ಸಂತಾಪ ಸೂಚಿಸಿ “ದಯಮಾಡಿ ಮನೆಯಲ್ಲಿರಿ” ಅಂತಾ ಮನವಿ ಮಾಡಿದ್ರು ದರ್ಶನ್ appeared first on News First Kannada.

Source: News First Kannada
Read More