ಬೆಂಗಳೂರು: ಕೆಲಸ ಕೊಡಿಸ್ತೀನಿ, ಟ್ರಾನ್ಸ್​ಫರ್ ಮಾಡಿಸಿಕೊಡ್ತೀನಿ ಎಂದು ವಂಚಿಸಿದ್ದಾರೆ ಅನ್ನೋ ಆರೋಪದ ಮೇಲೆ ಸಚಿವ ಶ್ರೀರಾಮುಲು ಅವರ ಪಿಎ ರಾಜಣ್ಣ ಅವರನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ವಿಜಯೇಂದ್ರ ದೂರು!
ರಾಜಣ್ಣ ಅವರು ಸಿಎಂ ಬಿಎಸ್​ ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರ ಹೆಸರಲ್ಲಿಯೂ ಕೂಡ ವಂಚನೆ ಮಾಡಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಖುದ್ದು ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೇ ರಾಮುಲು ಪಿಎ ವಿರುದ್ಧ ದೂರು ನೀಡಿದ್ದರು ಎನ್ನಲಾಗಿದೆ.

ಅರೆಸ್ಟ್​ ಮಾಡಲು ಹೋದಾಗ ಹೈಡ್ರಾಮಾ!
ಪಿಎ ರಾಜಣ್ಣ ಅವರನ್ನ ಬಂಧಿಸಲು ಸಿಸಿಬಿ ಅಧಿಕಾರಿಗಳು 7 ಮಿನಿಸ್ಟರ್ ಕ್ವಾಟ್ರಸ್​ಗೆ ಹೋಗಿದ್ದರು. ಈ ವೇಳೆ ಪೊಲೀಸರ ಜೊತೆ ಆರೋಪಿ ರಾಜಣ್ಣ ಕಿರಿಕ್ ಮಾಡಿದ್ದಾರೆ ಎನ್ನಲಾಗಿದೆ. ಪೊಲೀಸರಿಗೆ ಶರಣಾಗಲು ಒಪ್ಪದ ರಾಜಣ್ಣ ಜಗಳಕ್ಕೆ ಮುಂದಾಗಿದ್ದಾರಂತೆ. ಕೊನೆಗೆ ಪೊಲೀಸರು ರಾಜಣ್ಣ ಅವರನ್ನ ಬಂಧಿಸಿ ಕರೆದುಕೊಂಡು ಬಂದಿದ್ದಾರೆ ಎಂದು ತಿಳಿದುಬಂದಿದೆ.

ವಿಜಯೇಂದ್ರಗೆ ದೂರು
ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಪಿಎ ಸಚಿವರ ಹೆಸರಲ್ಲಿ ಕೋಟ್ಯಾಂತರ ರೂಪಾಯಿ ವಸೂಲಿ ಮಾಡಿರುವ ಆರೋಪ ಕೇಳಿಬಂದಿದೆ. ರಾಜಣ್ಣ ಅಲಿಯಾಸ್ ರಾಜು ವಿರುದ್ಧ ವಿಜಯೇಂದ್ರಗೆ ಹಲವು ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ವಿಜಯೇಂದ್ರ ಟೀಂ ಖುದ್ದು ಪರಿಶೀಲನೆ ಮಾಡಿತ್ತು. ಈ ವೇಳೆ ರಾಜಣ್ಣ ಅವರ ಅಸಲಿಯತ್ತು‌ ಬಯಲಾಗಿತ್ತು ಎನ್ನಲಾಗಿದೆ.

ನಂತರ ದೂರು ನೀಡಿದ ಬಳಿಕ ವಂಚನೆಗೆ ಸಂಬಂಧಿಸಿದ ಸಾಕ್ಷಿಗಳನ್ನ ಸಿಸಿಬಿ ಪೊಲೀಸರು ಕಲೆ ಹಾಕಿದ್ದರು. ಇನ್ನು ಹಲವು ವರ್ಷಗಳಿಂದ‌ ಶ್ರೀರಾಮುಲು ಹಾಗೂ ರೆಡ್ಡಿ ಕುಟುಂಬದ ಜೊತೆ ರಾಜಣ್ಣ ಗುರುತಿಸಿಕೊಂಡಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಕೆಲಸ ಕೊಡಿಸೋದಾಗಿ ವಂಚನೆ ಆರೋಪ; ಸಚಿವ ಶ್ರೀರಾಮುಲು PA ಅರೆಸ್ಟ್

The post ರಾಮುಲು PA ವಿರುದ್ಧ ಖುದ್ದು ಬಿವೈ ವಿಜಯೇಂದ್ರ ದೂರು; ರಾಜಣ್ಣರ ಮೇಲಿನ ಆರೋಪಗಳೇನು?  appeared first on News First Kannada.

Source: newsfirstlive.com

Source link