ನಟಿ ಮಾಲಾಶ್ರೀ ಅವರ ಪತಿ, ನಿರ್ಮಾಪಕ ಕೋಟಿ ರಾಮು  ಅವರು ಇಂದು ಕೊರೊನಾ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ. ರಾಮು ಸಾವಿನ ಕುರಿತು ಸಂತಾಪ ವ್ಯಕ್ತಪಡಿಸಿರುವ ನಟ ಪುನೀತ್ ರಾಜ್​ಕುಮಾರ್​.. ರಾಮು ಅವರು ನನಗೋಸ್ಕರ ರಾಜಕುಮಾರ ಟೈಟಲ್​ ಬಿಟ್ಟುಕೊಟ್ಟಿದ್ರು ಎಂದು ರಾಮು ಅವರ ಜೊತೆಗಿನ ಒಡನಾಟವನ್ನ ಮೆಲುಕು ಹಾಕಿದ್ದಾರೆ. ಮಾಲಾಶ್ರೀ ಅವರಿಗೆ ಹಾಗೂ ಅವರ ಮಕ್ಕಳಿಗೆ ಈ ದುರಂತವನ್ನು ತಡೆದುಕೊಳ್ಳುವ ಶಕ್ತಿ ಕೊಡಲಿ. ಮಾಲಾಶ್ರೀ ಅವರು ನನಗೆ ನಮ್ಮ ಫ್ಯಾಮಿಗೆ ತುಂಬಾ ಕ್ಲೋಸ್ ಇದ್ದಾರೆ.

ರಾಮು ಅವರನ್ನ ಕೋಟಿ ನಿರ್ಮಾಪಕ ಅಂತಲೇ ಕರೀತಿದ್ವಿ. ಅದ್ಭುತವಾದ ಸಿನಿಮಾಗಳನ್ನು ಕನ್ನಡ ಇಂಡಸ್ಟ್ರಿಗೆ ಕೊಟ್ಟವರು. ರಾಜ್​ಕುಮಾರ ಎಂದು ಅವರ ಪ್ರೊಡಕ್ಷನ್​ಗೆ ಇದ್ದ ಟೈಟಲ್ಲನ್ನ ನನಗೋಸ್ಕರ ಬಿಟ್ಟುಕೊಟ್ಟಿದ್ರು. ಇದನ್ನೆಲ್ಲ ಮರೆಯಲಿಕ್ಕಾಗಲ್ಲ. ನಮಗೆ ನಂಬೋಕೇ ಆಗ್ತಿಲ್ಲ. ಇದರಿಂದ ನಾವೂ ಮುನ್ನೆಚ್ಚರಿಕೆ ಇಂದ ಇರಬೇಕು ಎನ್ನಿಸುತ್ತಿದೆ. ಅವರ ನಮ್ಮ ಒಡನಾಟ ತುಂಬಾ ಹಳೆಯದು. ಶಿವಣ್ಣ ಅವರ ಸಿನಿಮಾದಿಂದಲೇ ಅವರು ಪ್ರೊಡಕ್ಷನ್ ಪ್ರಾರಂಭಿಸಿದ್ರು. ಸಿನಿಮಾ ಇಂಡಸ್ಟ್ರಿ ಇಂದು ಅವರನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತದೆ. ಸುಮಾರು ತಿಂಗಳಿಂದ ಅವರನ್ನ ಭೇಟಿಯಾಗಲು ಆಗಿರ್ಲಿಲ್ಲ ಎಂದರು.

The post ರಾಮು ಅವರು ರಾಜಕುಮಾರ ಟೈಟಲ್ಲನ್ನ ನನಗೋಸ್ಕರ ಬಿಟ್ಟುಕೊಟ್ಟಿದ್ರು- ಪುನೀತ್ ರಾಜ್​ಕುಮಾರ್ appeared first on News First Kannada.

Source: News First Kannada
Read More