ನವದೆಹಲಿ: ಆಲೋಪಥಿ ಚಿಕಿತ್ಸೆ ಹಾಗೂ ವೈದ್ಯರ ವಿರುದ್ಧ ಹೇಳಿಕೆ ನೀಡಿದ್ದ ಯೋಗ ಗುರು ರಾಮ್​ ದೇವ್​ ಬಾಬಾ ವಿರುದ್ಧ ಜೂನ್​ 1 ರಂದು ದೇಶದಾದ್ಯಂತ ಕರಾಳ ದಿನ ಆಚರಿಸಲು ಫೆಡರೇಷನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ಸ್ ಘೋಷಿಸಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ವೈದ್ಯರ ಸಂಘಟನೆ.. ಕೊರೊನಾ ವಾರಿಯರ್ಸ್​ ಮತ್ತು ಆಧುನಿಕ ಔಷಧಿಯ ಬಗ್ಗೆ ಹೇಳಿಕೆ ನೀಡಿರುವ ರಾಮ್​ ದೇವ್​ ಬಾಬಾ ಅವರ ವಿರುದ್ಧ ರೋಗಿಗಳ ಚಿಕಿತ್ಸೆಗೆ ಅಡ್ಡಿಯಾಗದಂತೆ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದೆ.

ರಾಮ್​ದೇವ್ ಬಾಬಾ ಆಲೋಪಥಿ ಚಿಕಿತ್ಸಾ ವಿಧಾನವನ್ನ ಸ್ಟುಪಿಡ್ ಸೈನ್ಸ್​ ಎಂದು ಕರೆದಿದ್ದರು ಈ ಹಿನ್ನೆಲೆ ಇಂಡಿಯಮ್ ಮೆಡಿಕಲ್ ಅಸೋಷಿಯೇನ್ಸ್ ಪ್ರಧಾನಿಗೆ ಪತ್ರ ಬರೆದು ದೇಶದ್ರೋಹದ ಕೇಸ್ ದಾಖಲಿಸುವಂತೆ ಒತ್ತಾಯಿಸಿದೆ. ಅಲ್ಲದೇ ರಾಮ್​ದೇವ್ ವಿರುದ್ಧ ಕಂಪ್ಲೇಂಟ್ ಕೂಡ ದಾಖಲಿಸಿದೆ.

The post ರಾಮ್​​ದೇವ್ ಬಾಬಾ ಹೇಳಿಕೆ ಖಂಡಿಸಿ ಜೂ. 1 ರಂದು ವೈದ್ಯರಿಂದ ‘ಕರಾಳ ದಿನ’ ಆಚರಣೆ appeared first on News First Kannada.

Source: newsfirstlive.com

Source link