ರಾಮ ಪಾತ್ರಧಾರಿ ಅರುಣ್​ ಗೋವಿಲ್​ಗೆ 64ನೇ ಜನ್ಮದಿನ; ‘ರಾಮಾಯಣ’ದ ಅವಕಾಶಕ್ಕೆ ನಗುವೇ ಕಾರಣ | Ramayan serial actor Arun Govil birthday: Here is how he got the chance to play Lord Rama


ರಾಮ ಪಾತ್ರಧಾರಿ ಅರುಣ್​ ಗೋವಿಲ್​ಗೆ 64ನೇ ಜನ್ಮದಿನ; ‘ರಾಮಾಯಣ’ದ ಅವಕಾಶಕ್ಕೆ ನಗುವೇ ಕಾರಣ

ಅರುಣ್ ಗೋವಿಲ್

1980ರ ದಶಕದಲ್ಲಿ ‘ರಾಮಾಯಣ’ ಧಾರಾವಾಹಿ (Ramayan Serial) ಮಾಡಿದ ಮೋಡಿ ಅಷ್ಟಿಷ್ಟಲ್ಲ. ಕಲಾವಿದರ ಅದ್ಭುತ ನಟನೆಯಿಂದಾಗಿ ಆ ಸೀರಿಯಲ್​ (Doordarshan TV Serial) ಸಿಕ್ಕಾಪಟ್ಟೆ ಫೇಮಸ್​ ಆಗಿತ್ತು. ಮೊದಲ ಲಾಕ್​ಡೌನ್​ ಸಂದರ್ಭದಲ್ಲಿ ‘ರಾಮಾಯಣ’ ಧಾರಾವಾಹಿ ಮರುಪ್ರಸಾರ ಆದಾಗಲೂ ಜನರು ಮುಗಿಬಿದ್ದು ನೋಡಿದ್ದರು. ಅಷ್ಟರಮಟ್ಟಿಗೆ ಕ್ರೇಜ್​ ಸೃಷ್ಟಿ ಮಾಡಿದ್ದ ಸೀರಿಯಲ್​ ಅದು. ಅದರಲ್ಲಿ ರಾಮನ (Lord Rama) ಪಾತ್ರ ಮಾಡಿದ ನಟ ಅರುಣ್​ ಗೋವಿಲ್​ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ಸಿಕ್ಕಿತ್ತು. ಇಂದು (ಜ.12) ಅವರು 64ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಜನ್ಮದಿನದ ಪ್ರಯುಕ್ತ ಅವರಿಗೆ ಅಭಿಮಾನಿಗಳಿಂದ ಮತ್ತು ಸ್ನೇಹಿತರಿಂದ ಶುಭಾಶಯಗಳು ಹರಿದುಬರುತ್ತಿವೆ. ಅರುಣ್​ ಗೋವಿಲ್​ (Arun Govil) ಕುರಿತ ಅನೇಕ ಘಟನೆಗಳನ್ನು ಜನರು ಮೆಲುಕು ಹಾಕುತ್ತಿದ್ದಾರೆ.

ಧಾರಾವಾಹಿಯಲ್ಲಿ ಕಲಾವಿದರು ಮಾಡುವ ಪಾತ್ರಗಳನ್ನು ಜನರು ತುಂಬ ಹತ್ತಿರದಿಂದ ಗಮನಿಸುತ್ತಾರೆ. ಕಲಾವಿದರ ನಿಜವಾದ ಹೆಸರಿಗಿಂತಲೂ ಪಾತ್ರದ ಹೆಸರಿನಿಂದಲೇ ಅವರನ್ನು ಗುರುತಿಸುತ್ತಾರೆ. ಅರುಣ್​ ಗೋವಿಲ್​ ಅವರನ್ನು ನಿಜವಾದ ರಾಮ ಎಂದೇ ಎಷ್ಟೋ ಪ್ರೇಕ್ಷಕರು ಭಾವಿಸಿದ್ದರು! ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುತ್ತಿದ್ದರು ಎಂಬುದು ನಿಜಕ್ಕೂ ಅಚ್ಚರಿ.

ಅರುಣ್​ ಗೋವಿಲ್​ ಅವರಿಗೆ ಈ ಪಾತ್ರ ಸಿಕ್ಕಿದ್ದು ಹೇಗೆ? ಅದರ ಹಿಂದೊಂದು ಇಂಟರೆಸ್ಟಿಂಗ್​ ಕಹಾನಿ ಇದೆ. ಮೊದಲ ಬಾರಿಗೆ ಅವರು ರಾಮನ ಪಾತ್ರಕ್ಕೆ ಆಡಿಷನ್​ ನೀಡಿದಾಗ ರಿಜೆಕ್ಟ್​ ಆಗಿದ್ದರು. ನಂತರ ನಿರ್ದೇಶಕ ಸೂರಜ್​ ಬರ್ಜಾತ್ಯ ಅವರು ಅರುಣ್​ ಗೋವಿಲ್​ಗೆ ಒಂದು ಸಲಹೆ ನೀಡಿದರು. ‘ಲುಕ್​ಟೆಸ್ಟ್​ ಸಮಯದಲ್ಲಿ ನಿಮ್ಮ ನಗುವನ್ನು ಸೂಕ್ತವಾಗಿ ಬಳಸಿಕೊಳ್ಳಿ’ ಎಂದು ಅವರು ನೀಡಿದ ಸಲಹೆಯನ್ನು ಅರುಣ್​ ಗೋವಿಲ್​ ಪಾಲಿಸಿದರು. ಅದರ ಪರಿಣಾಮವಾಗಿ ಅವರಿಗೆ ರಾಮನ ಪಾತ್ರ ಸಿಕ್ಕಿತು.

‘ರಾಮಾಯಣ’ ಧಾರಾವಾಹಿ ಮಾಡುವುದಕ್ಕೂ ಮುನ್ನ ಅನೇಕ ಸಿನಿಮಾ ಮತ್ತು ಸೀರಿಯಲ್​ಗಳಲ್ಲಿ ಅರುಣ್​ ಗೋವಿಲ್​ ನಟಿಸಿದ್ದರು. ಆದರೆ ಅವರಿಗೆ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ತಂದುಕೊಟ್ಟಿದ್ದು ಮಾತ್ರ ‘ರಾಮಾಯಣ’ ಸೀರಿಯಲ್​. ಈ ಧಾರಾವಾಹಿಗೆ ರಮಾನಂದ್​ ಸಾಗರ್​ ನಿರ್ದೇಶನ ಮಾಡಿದ್ದರು. ವಿಶ್ವದಲ್ಲೇ ಅತಿ ಹೆಚ್ಚು ವೀಕ್ಷಣೆ ಕಂಡ ಪೌರಾಣಿಕ ಧಾರಾವಾಹಿ ಎಂಬ ಖ್ಯಾತಿ ‘ರಾಮಾಯಣ’ಕ್ಕಿದೆ.​

ರಾಮನ ಪಾತ್ರದಿಂದ ಫೇಮಸ್​ ಆದ ಅರುಣ್​ ಗೋವಿಲ್​ ಅವರು ಜನಿಸಿದ್ದು 1958ರ ಜ.12ರಂದು. ಹಿಂದಿ, ಭೋಜ್​ಪುರಿ, ಒಡಿಯಾ, ತೆಲುಗು ಸೇರಿ ಅನೇಕ ಭಾಷೆಗಳಲ್ಲಿ ಅವರು ನಟಿಸಿದ್ದಾರೆ.

TV9 Kannada


Leave a Reply

Your email address will not be published. Required fields are marked *