ನವದೆಹಲಿ: ರಾಮ ಮಂದಿರ ನಿರ್ಮಾಣದ ಪ್ರದೇಶದಲ್ಲಿ 2 ಕೋಟಿ ರೂಪಾಯಿ ಮೌಲ್ಯದ ಜಮೀನನ್ನು 18.5 ಕೋಟಿ ರೂಪಾಯಿಗೆ ಖರೀದಿ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೇ, ಉತ್ತರ ಪ್ರದೇಶದ ಸ್ವಾಮಿ ಪರಮಹಂಸ ಅವರು ಕಾಂಗ್ರೆಸ್​ ಹಾಗೂ ಆಮ್​​ ಆದ್ಮಿ ಪಾರ್ಟಿ ವಿರುದ್ಧ ಗಂಭೀರ ಆರೋಪವನ್ನು ಮಾಡಿದ್ದಾರೆ.

ರಾಮಮಂದಿರ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿರುವ ರಾಮಜನ್ಮ ಭೂಮಿ ಟ್ರಸ್ಟ್ ಹಾಗೂ ಬಿಜೆಪಿ ವಿರುದ್ಧ ಕ್ಯಾಂಪೇನ್ ಮಾಡಿದರೆ 100 ಕೋಟ ರೂಪಾಯಿ ಹಣ ನೀಡುವುದಾಗಿ ಆಫರ್​ ನೀಡಿದ್ದರು ಎಂದು ಸ್ವಾಮಿ ಪರಮಹಂಸ ಅವರು ಆರೋಪಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿರುವ ಸ್ವಾಮಿ ಪರಮಹಂಸ ಅವರು, ಬಿಜೆಪಿ, ಸಂಘ ಹಾಗೂ ಟ್ರಸ್ಟ್​​ನಲ್ಲಿ ನಿಮಗೆ ಯಾವುದೇ ಗೌರವ ಲಭಿಸಿಲ್ಲ. ನೀವು ಆಮ್​​ ಆದ್ಮಿ ಪಾರ್ಟಿ ಹಾಗೂ ಕಾಂಗ್ರೆಸ್​​ಗೆ ಬೆಂಬಲ ನೀಡಿದರೆ ಅರವಿಂದ ಕೇಜ್ರಿವಾಲ್​ ಹಾಗೂ ಸೋನಿಯಾ ಗಾಂಧಿ ಅವರು ತಲಾ 50 ಕೋಟಿ ರೂಪಾಯಿ ನೀಡುತ್ತಾರೆ. ಬಿಜೆಪಿ ಹಾಗೂ ರಾಮಮಂದಿರ ನಿರ್ಮಾಣ ಟ್ರಸ್​​ ವಿರುದ್ಧ ಕ್ಯಾಂಪೇನ್ ಮಾಡಲು ಕೇಳಿದ್ದರು ಎಂದು ಹೇಳಿದ್ದಾರೆ.

ಆದರೆ ಸ್ವಾಮಿ ಪರಮಹಂಸ ಅವರು ಇದುವರೆಗೂ ಈ ಬಗ್ಗೆ ಯಾವುದೇ ದೂರು ದಾಖಲಿಸಿಲ್ಲ. ಅಲ್ಲದೇ ತಮಗೆ ಯಾರು ಆಫಸ್​ ನೀಡಿದ್ದಾರೆ ಎಂಬುವುದನ್ನು ಸ್ಪಷ್ಟಪಡಿಸಿಲ್ಲ. ಆಪ್ ಹಾಗೂ ಕಾಂಗ್ರೆಸ್ ಪಕ್ಷದವು ಎಂದು ಹೇಳಿಕೊಂಡು ಬಂದಿದ್ದರು ಎಂದಷ್ಟೇ ತಿಳಿಸಿದ್ದು, ಈ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

The post ರಾಮ ಮಂದಿರ ಭೂಮಿ ಅಕ್ರಮ ಕೇಸ್; ₹100 ಕೋಟಿ ಲಂಚದ ಆಮಿಷ ಒಡ್ಡಿದ್ದವಾ ಕಾಂಗ್ರೆಸ್​​, ಆಪ್? appeared first on News First Kannada.

Source: newsfirstlive.com

Source link