ರಾಯಚೂರು: ಇನ್ಮುಂದೆ ಜಿಲ್ಲೆಯಲ್ಲಿ ಲಾಕ್​ಡೌನ್​ ಕಠಿಣಗೊಳಿಸಿ, ವಾರಕ್ಕೆ ಎರಡು ದಿನ ಮಾತ್ರ ಅಗತ್ಯವಸ್ತು ಖರೀದಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ.

ರಾಯಚೂರು ಕೊರೊನಾ ಹಾಟ್ ಸ್ಪಾಟ್ ಆಗಿರೋ ಹಿನ್ನೆಲೆ, ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಡಿ.ಸಿಗೆ ಸೂಚನೆ ನೀಡಿದ್ದಾರೆ. ಅದರಂತೆ ಸದ್ಯ ವಾರಕ್ಕೆ ಮೂರು ದಿನ ಕಠಿಣ ಲಾಕ್​ಡೌನ್ ಮಾಡಲಾಗಿದೆ.

ಮೆಡಿಕಲ್, ಆಸ್ಪತ್ರೆ ಹಾಗೂ ಪೆಟ್ರೋಲ್ ಬಂಕ್​ಗೆ ಮಾತ್ರ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ. ವಾರಕ್ಕೆ ಎರಡೇ ದಿನ ತರಕಾರಿ, ದಿನಸಿ ಹಾಗೂ ಅವಶ್ಯಕ ವಸ್ತುಗಳ ಖರೀದಿಗೆ ಅವಕಾಶ ಇರಲಿದೆ. ಕೋವಿಡ್ ನಿಯಮ ಮತ್ತಷ್ಟು ಕಠಿಣಗೊಳಿಸಲು ಜಿಲ್ಲಾಡಳಿತ ತಯಾರಿ ನಡೆಸಿದೆ.

The post ರಾಯಚೂರಲ್ಲಿ ಇನ್ಮುಂದೆ ವಾರಕ್ಕೆ 2 ದಿನ ಮಾತ್ರ ಅಗತ್ಯ ವಸ್ತು ಖರೀದಿಗೆ ಅವಕಾಶ appeared first on News First Kannada.

Source: newsfirstlive.com

Source link