ರಾಯಚೂರಲ್ಲಿ ಸಚಿವ ರಾಮುಲುಗೆ ಅನ್ನದಾತರಿಂದ ಮುತ್ತಿಗೆ -ಯಾಕೆ ಗೊತ್ತಾ..?

ರಾಯಚೂರು: ಉತ್ತರ ಪ್ರದೇಶದ ಲಖೀಂಪುರದಲ್ಲಿ ನಡೆದ ರೈತರ ಸಾವಿನ ಘಟನೆ ಖಂಡಿಸಿ ರಾಯಚೂರಿನಲ್ಲಿ ಪ್ರತಿಭಟನೆ ನಡೆಸಿದ್ರು. ಸಾರಿಗೆ ಸಚಿವ ಶ್ರೀರಾಮುಲು ಅವ್ರ ಕಾರನ್ನ ತಡೆದು ಮಸ್ಕಿ ಪಟ್ಟಣದ ರೈತ ಸಂಘದವರು ಪ್ರತಿಭಟನೆ ನಡೆಸಿದ್ರು.

ಸಚಿವರ ಕಾರು ತಡೆದ ರೈತರು ಶ್ರೀರಾಮುಲು ಮತ್ತು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಘೋಷಣೆಗಳನ್ನ ಕೂಗಿದ್ರು. ರೈತರ ಮೇಲೆ ಕ್ರೂರತ್ವ ತೋರಿದ್ರು, ಈವರೆಗೂ ಯಾರೊಬ್ಬರನ್ನೂ ಬಂಧಿಸಿಲ್ಲವ್ಯಾಕೆ..? ಅನ್ನದಾತರ ಜೀವಕ್ಕೆ ಬೆಲೆ ಇಲ್ವಾ ಅಂತ ಸಚಿವರ ವಿರುದ್ಧ ಕಿಡಿಕಾರಿದ್ರು.

ಅಲ್ಲದೇ, ರೈತರ ಮೇಲೆ ಅಹಂ ತೋರಿಸುವ ಬಿಜೆಪಿ ಪಾಳಯದವ್ರು ದೇಶ ಬಿಟ್ಟು ಹೋಗಲಿ, ಶ್ರೀರಾಮುಲು ನೀವು ರಾಜ್ಯ ಬಿಟ್ಟು ತೊಗಲಿ ಅಂತ ಆಕ್ರೋಶ ಹೊರಹಾಕಿದ್ದಾರೆ ಎನ್ನಲಾಗಿದೆ.

News First Live Kannada

Leave a comment

Your email address will not be published. Required fields are marked *