ರಾಯಚೂರು: ಜಿಲ್ಲೆಯಲ್ಲಿ, ಕೊರೊನಾ ಮಹಾಮಾರಿಯಿಂದ ಸೃಷ್ಟಿಯಾದ ಆಮ್ಲಜನಕದ ಕೊರತೆ ಇರೋದ್ರಿಂದ, ಅಣಕು ಪ್ರದರ್ಶನ‌ ಮಾಡುವ ಮೂಲಕ ವಿನೂತನ ಪರಿಸರ ಜಾಗೃತಿ ಮೂಡಿಸಲಾಗಿದೆ

ವನಸಿರಿ ಫೌಂಡೇಶನ್, ಪರಿಸರ ಜಾಗೃತಿ ಅಭಿಯಾನವನ್ನ ಹಲವಾರು ವರ್ಷಗಳಿಂದ ಮೂಡಿಸುತ್ತಾ ಬಂದಿದೆ. ಸದ್ಯ ಇಂದು ಸಿಂಧನೂರು ನಗರದಲ್ಲಿ 500 ಸಸಿ ಉಚಿತವಾಗಿ ವಿತರಿಸಿ,‌‌ ಗಿಡ ನೆಡುವುದರಿಂದ ಆಗುವ ಅನುಕೂಲಗಳ‌ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು. ಈ ವೇಳೆ ವನಸಿರಿ‌ ಫೌಂಡೇಶನ್ ಟೀಮ್​ಗೆ, ಮಸ್ಕಿ‌ ನೂತನ ಶಾಸಕ ಬಸನಗೌಡ ತುರುವಿಹಾಳ, ಪರಮಪೂಜ್ಯ ಸೋಮನಾಥ ಶಿವಾಚಾರ್ಯ ಸ್ವಾಮಿ ಸೇರಿದಂತೆ ಅರಣ್ಯ ಇಲಾಖೆ, ದೃಶ್ಯ ದೀಪ ಕಲಾ ಸೇವಾ  ಟ್ರಸ್ಟ್ ಕೂಡ ಸಾಥ್ ನೀಡಿದೆ.

The post ರಾಯಚೂರಿನಲ್ಲಿ ಆಮ್ಲಜನಕದ ಕೊರತೆಯ ಬಗ್ಗೆ ಜಾಗೃತಿ ಮೂಡಿಸಿದ ವನಸಿರಿ ಫೌಂಡೇಶನ್ appeared first on News First Kannada.

Source: newsfirstlive.com

Source link