ರಾಯಚೂರಿನಲ್ಲಿ ಕ್ರೂಸರ್ ಪಲ್ಟಿ! ಮಹಿಳೆ ಸಾವು, 7 ಜನರಿಗೆ ಗಾಯ | Woman death and 7 injured in Cruiser accident at Raichur


ರಾಯಚೂರಿನಲ್ಲಿ ಕ್ರೂಸರ್ ಪಲ್ಟಿ! ಮಹಿಳೆ ಸಾವು, 7 ಜನರಿಗೆ ಗಾಯ

ಕ್ರೂಸರ್ ಪಲ್ಟಿಯಾಗಿ ಮಹಿಳೆ ಮೃತಪಟ್ಟಿದ್ದಾರೆ

ರಾಯಚೂರು: ಕ್ರೂಸರ್ ಪಲ್ಟಿಯಾಗಿ ಮಹಿಳೆ ಸಾವನ್ನಪ್ಪಿದ್ದು, 7 ಜನರಿಗೆ ಗಾಯವಾಗಿರುವ ಘಟನೆ ಜಿಲ್ಲೆಯ ಮಾನ್ವಿ ತಾಲೂಕಿನ ಬೊಮ್ಮನಾಳ ಕ್ರಾಸ್ ಬಳಿ ಸಂಭವಿಸಿದೆ. ಕೂಲಿ ಕಾರ್ಮಿಕರಿದ್ದ ಕ್ರೂಸರ್ ಪಲ್ಟಿ ಹೊಡೆದು ಲಕ್ಷ್ಮೀದೇವಿ (50) ಮೃತಪಟ್ಟಿದ್ದಾರೆ. ಮಲ್ಲಪ್ಪ, ಈರಮ್ಮ(35), ಸತ್ತಮ್ಮ (30), ಯಲ್ಲಮ್ಮ (45), ನಿಂಗಮ್ಮ (45), ಗಂಗಮ್ಮ(50), ಗಂಗಮ್ಮ (40) ತೀವ್ರಗಾಯಗೊಂಡಿದ್ದಾರೆ. ಗಾಯಗೊಂಡ 7 ಜನರಿಗೆ ಮಾನ್ವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮೃತರು ಹಾಗೂ ಗಾಯಾಳುಗಳು ಸಿಂಧನೂರು ತಾಲೂಕಿನ ಗಿಣಿವಾರ ಗ್ರಾಮದವರು. ಗಾಯಾಳುಗಳಿಗೆ ರಾಯಚೂರು ರೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹತ್ತಿ ಬಿಡಿಸಲು ಕೂಲಿ ಕೆಸಲಕ್ಕೆ ಬರುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

ಚಾಕುವಿನಿಂದ ಇರಿದು ವ್ಯಕ್ತಿ ಕೊಲೆ
ಬೀದರ್​ನಲ್ಲಿ ಚಾಕುವಿನಿಂದ ಇರಿದು ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆಗೈದಿದ್ದಾರೆ. ಬೀದರ್ ನಗರದ ಹಳೆ ಸ್ವಪ್ನ ಚಿತ್ರಮಂದಿರದ ಪಕ್ಕದಲ್ಲಿ ಶವ ಪತ್ತೆಯಾಗಿದ್ದು, ಬೇರೆ ಎಲ್ಲೋ ಕೊಲೆ ಮಾಡಿ ಇಲ್ಲಿ ತಂದು ಹಾಕಿರುವ ಶಂಕೆ ವ್ಯಕ್ತವಾಗಿದೆ. ಮುಲ್ತಾನಿ ಕಾಲೋನಿಯ ಅಜ್ಜು ಸನ್ ಆಫ್ ಶಿರಾಜ್ (32) ಕೊಲೆಯಾದ ದುರ್ದೈವಿ. ಅಜ್ಜು ತಳ್ಳುವ ಗಾಡಿಯಲ್ಲಿ ಹಣ್ಣು ವ್ಯಾಪಾರ ಮಾಡಿಕೊಂಡಿದ್ದ. ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಇದನ್ನು ಓದಿ

ಬೆಂಗಳೂರಿನಲ್ಲಿ ಪರಾರಿಯಾಗಲು ಯತ್ನಿಸುತ್ತಿದ್ದ ಕೊಲೆ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್!

20 ವರ್ಷಗಳಲ್ಲಿ 1,888 ಕಸ್ಟಡಿ ಸಾವು; ಇದರಲ್ಲಿ ಶಿಕ್ಷೆ ಆಗಿದ್ದು ಕೇವಲ 26 ಪೊಲೀಸರಿಗೆ

TV9 Kannada


Leave a Reply

Your email address will not be published. Required fields are marked *