– ಜನರ ಓಡಾಟಕ್ಕಿಲ್ಲ ಬ್ರೇಕ್

ರಾಯಚೂರು: ಜಿಲ್ಲೆಯಲ್ಲಿ ಮೇ 23ರ ಮಧ್ಯಾಹ್ನ 2 ರಿಂದ ಮೇ 26 ರ ವರೆಗೆ ಸಂಪೂರ್ಣ ಲಾಕ್‍ಡೌನ್ ಹೇರಿದ್ದರೂ ಜನರ ಓಡಾಟ ಮಾತ್ರ ನಿರಂತರವಾಗಿ ನಡೆದಿದೆ.

ನಿರ್ಬಂಧದ ನಡುವೆಯೇ ಬೆಳಗ್ಗೆಯಿಂದ ತರಕಾರಿ, ಹಣ್ಣು, ಹೂ ವ್ಯಾಪಾರ ಜೋರಾಗಿ ನಡೆದಿದ್ದು, ವಾಹನಗಳ ಓಡಾಟಕ್ಕೂ ತಡೆಯಾಗಿಲ್ಲ. ಪ್ರತಿ ದಿನ 500ಕ್ಕೂ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗುತ್ತಿದ್ದು ಸೋಂಕಿತರ ಸಾವಿನ ಸಂಖ್ಯೆ ಸಹ ಹೆಚ್ಚಾಗುತ್ತಿವೆ. ಸಂಪೂರ್ಣ ಲಾಕ್‍ಡೌನ್ ಹೇರಿರುವ ಜಿಲ್ಲಾಡಳಿತದ ಆದೇಶಕ್ಕೂ ಜಿಲ್ಲೆಯಲ್ಲಿ ಬೆಲೆ ಇಲ್ಲದಂತಾಗಿದೆ.

ಪೊಲೀಸರು ನಗರದ ವಿವಿಧೆಡೆ ವಾಹನಗಳ ತಪಾಸಣೆ ನಿರಂತರವಾಗಿ ನಡೆಸಿದ್ದಾರೆ. ತಪಾಸಣೆ ವೇಳೆ ಪ್ರತಿಯೊಬ್ಬರೂ ಆಸ್ಪತ್ರೆ ನೆಪ ಹೇಳಿಕೊಂಡು ಓಡಾಟ ನಡೆಸಿದ್ದಾರೆ. ನಗರದ ಅಂಬೇಡ್ಕರ್ ವೃತ್ತದಲ್ಲಿ ನೂರಾರು ವಾಹನಗಳ ಓಡಾಟ ನಡೆಯುತ್ತಿದ್ದು ಸ್ವತಃ ಹೆಚ್ಚುವರಿ ಎಸ್ ಪಿ ಶ್ರೀಹರಿಬಾಬು ವಾಹನಗಳ ತಪಾಸಣೆ ನಡೆಸಿದ್ದಾರೆ. ಪೊಲೀಸರ ಮಾತಿಗೂ ಸಹ ಕೇರ್ ಮಾಡದೇ ಜನ ಓಡಾಡುತ್ತಿದ್ದಾರೆ. ಪ್ರತಿಯೊಬ್ಬರನ್ನೂ ವಿಚಾರಣೆ ಮಾಡಿ ಪೊಲೀಸರೇ ಸುಸ್ತಾಗಿದ್ದಾರೆ. ಎಷ್ಟೇ ವಾಹನಗಳನ್ನ ಹಿಡಿದರೂ ಪ್ರತಿಯೊಬ್ಬರೂ ಒಂದೊಂದು ಐಡಿ ಕಾರ್ಡ್ ತೋರಿಸಿಕೊಂಡು ಓಡಾಟ ನಡೆಸಿದ್ದಾರೆ.

The post ರಾಯಚೂರಿನಲ್ಲಿ ಹೆಸರಿಗೆ ಮಾತ್ರ ಸಂಪೂರ್ಣ ಲಾಕ್‍ಡೌನ್ appeared first on Public TV.

Source: publictv.in

Source link