ರಾಯಚೂರು: ಅಕಾಲಿಕ ಮಳೆಯಿಂದ ಬೆಳೆ ನಾಶ; ರೈತ ಆತ್ಮಹತ್ಯೆಗೆ ಶರಣು | Farmer commits suicide in Raichur due to Crop Loss Crime News Karnataka News


ರಾಯಚೂರು: ಅಕಾಲಿಕ ಮಳೆಯಿಂದ ಬೆಳೆ ನಾಶ; ರೈತ ಆತ್ಮಹತ್ಯೆಗೆ ಶರಣು

ಸಾಂದರ್ಭಿಕ ಚಿತ್ರ

ರಾಯಚೂರು: ಅಕಾಲಿಕ ಮಳೆಯಿಂದ ಬೆಳೆ ನಾಶವಾಗಿದ್ದಕ್ಕೆ ರೈತ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ರೌಂಡಗುಂದಾದಲ್ಲಿ ನಡೆದಿದೆ. ವಿಷ ಸೇವಿಸಿ ರಂಗಣ್ಣ (30) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲ ಮಾಡಿ 5 ಎಕರೆಯಲ್ಲಿ ಬೆಳೆದಿದ್ದ ಭತ್ತ ನಾಶವಾಗಿತ್ತು. ಈ ಕಾರಣದಿಂದ ಮನನೊಂದು ರೈತ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಿಂಧನೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ನೆಲಮಂಗಲ: ಜೀವನದಲ್ಲಿ ಜಿಗುಪ್ಸೆಯಿಂದ ವ್ಯಕ್ತಿ ನೇಣಿಗೆ ಶರಣು
ಜೀವನದಲ್ಲಿ ಜಿಗುಪ್ಸೆಯಿಂದ ವ್ಯಕ್ತಿ ನೇಣಿಗೆ ಶರಣಾದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಸುಭಾಷ್ ನಗರದ ತಿಮ್ಮಶೆಟ್ಟಪ್ಪ ಲೇಔಟ್​ನಲ್ಲಿ ನಡೆದಿದೆ. ತಿಮ್ಮಶೆಟ್ಟಪ್ಪ ಲೇಔಟ್‌ನ ನಾರಾಯಣ (51) ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೆಲಮಂಗಲ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ತುಮಕೂರು: ಮಾರ್ಕೋನಹಳ್ಳಿ ಡ್ಯಾಂನಲ್ಲಿ ಯುವತಿಯರಿಬ್ಬರು ನೀರುಪಾಲು
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಜಲಾಶಯ ಮಾರ್ಕೋನಹಳ್ಳಿ ಡ್ಯಾಂನಲ್ಲಿ ಯುವತಿಯರಿಬ್ಬರು ನೀರುಪಾಲು ಆದ ಘಟನೆ ಸಂಭವಿಸಿದೆ. ನೀರಿಗೆ ಇಳಿದಿದ್ದ ಪರ್ವಿನಾ (17), ಸಾದಿಕಾ (22) ಮೃತಪಟ್ಟಿದ್ದಾರೆ. ನೀರಿನ ರಭಸ ಹೆಚ್ಚಾಗಿ ಯುವತಿಯರು ಕೊಚ್ಚಿ ಹೋಗಿದ್ದಾರೆ ಎಂದು ತಿಳಿದುಬಂದಿದೆ. ಅಗ್ನಿ ಶಾಮಕ ದಳ, ಪೊಲೀಸರಿಂದ ಶವಗಳಿಗಾಗಿ ಹುಡುಕಾಟ ನಡೆದಿದೆ. ಅಮೃತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಧಾರವಾಡ: ಟ್ರಕ್​ಗೆ ಸಿಲುಕಿ ಇಬ್ಬರ ಸಾವು
ಓವರ್​ಟೇಕ್ ಮಾಡಲು ಹೋಗಿ ಟ್ರಕ್​ಗೆ ಸಿಲುಕಿ ಇಬ್ಬರು ಸಾವನ್ನಪ್ಪಿದ ದುರ್ಘಟನೆ ಧಾರವಾಡ ತಾಲೂಕಿನ ಇಟ್ಟಿಗಟ್ಟಿ ಗ್ರಾಮದ ಬಳಿ ನಡೆದಿದೆ. ಬೈಕ್​ನಲ್ಲಿ ತೆರಳ್ತಿದ್ದ ಇಬ್ಬರು ಸವಾರರು ಸ್ಥಳದಲ್ಲೇ ದುರ್ಮರಣವನ್ನಪ್ಪಿದ್ದಾರೆ. ಹುಬ್ಬಳ್ಳಿಯಿಂದ ಧಾರವಾಡಕ್ಕೆ ತೆರಳುತ್ತಿದ್ದ ಬೈಕ್ ಸವಾರರು ಸಾವನ್ನಪ್ಪಿದ್ದಾರೆ. ಧಾರವಾಡ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ಚಿತ್ರದುರ್ಗ: ಕಾರು ಡಿಕ್ಕಿಯಾಗಿ ಬೈಕ್​ ಸವಾರ ಸ್ಥಳದಲ್ಲೇ ದುರ್ಮರಣ
ಕಾರು ಡಿಕ್ಕಿಯಾಗಿ ಬೈಕ್​ ಸವಾರ ಸ್ಥಳದಲ್ಲೇ ದುರ್ಮರಣವನ್ನಪ್ಪಿದ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಹೊರವಲಯದಲ್ಲಿ ನಡೆದಿದೆ. ಚೆನ್ನಮ್ಮನಾಗ್ತಿಹಳ್ಳಿಯ ಜಗದೀಶ್ (45) ಎಂಬವರು ಮೃತ ದುರ್ದೈವಿ. ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ದಾವಣಗೆರೆ: ಶ್ರೀಗಂಧ ಸಾಗಿಸುತ್ತಿದ್ದ ಮೂವರು ಆರೋಪಿಗಳ ಬಂಧನ
ಶ್ರೀಗಂಧ ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿದ ಘಟನೆ ದಾವಣಗೆರೆ ಜಿಲ್ಲೆ ಚನ್ನಗಿರಿ ಠಾಣೆಯಲ್ಲಿ ನಡೆದಿದೆ. ಅಸ್ಲಂ ಪಾಷಾ, ಜಬೀವುಲ್ಲಾ, ಮೊಹಮ್ಮದ್ ಷರೀಫ್ ಸೆರೆ ಆಗಿರುವ ವ್ಯಕ್ತಿಗಳು. ಬಂಧಿತರು ವಡ್ನಾಳ್​ ರಾಜಣ್ಣ ಬಡಾವಣೆಯ ನಿವಾಸಿಗಳು ಎಂದು ತಿಳಿದುಬಂದಿದೆ. 3 ಲಕ್ಷ ಮೌಲ್ಯದ 61 ಕೆಜಿ ಗಂಧದ ತುಂಡುಗಳನ್ನು ಬಂಧಿತರಿಂದ ವಶಕ್ಕೆ ಪಡೆಯಲಾಗಿದೆ.

ವಿಜಯಪುರ: ನೀರು ಬಿಡುವ ವಿಚಾರಕ್ಕೆ ಗ್ರಾ.ಪಂ. ಸದಸ್ಯನ ಮೇಲೆ ಹಲ್ಲೆ
ನೀರು ಬಿಡುವ ವಿಚಾರಕ್ಕೆ ಗ್ರಾಮ ಪಂಚಾಯತ್ ಸದಸ್ಯನ ಮೇಲೆ ಹಲ್ಲೆ ನಡೆಸಿದ ಘಟನೆ ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಲೋಹಗಾಂವ್ ಗ್ರಾಮ ಪಂಚಾಯತ್​​ನಲ್ಲಿ ನಡೆದಿದೆ. ಇಲ್ಲಿನ ಸದಸ್ಯನ ಮೇಲೆ ಹಲ್ಲೆ ಮಾಡಲಾಗಿದೆ. ವಾರ್ಡ್ ನಂ.2ರ ಸದಸ್ಯ ಬಸವರಾಜ ಕಂಬಾರ ಮೇಲೆ ಹಲ್ಲೆಯಾಗಿದೆ. ವಾರ್ಡ್ ನಂ.4ರ ಸದಸ್ಯ ರಾಜು ಬಿರಾದಾರ್ ಹಾಗೂ ಸದಸ್ಯೆ ಕಮಲಾಬಾಯಿ ಪತಿ ಪಿಂಟು ಲಮಾಣಿ ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಗಾಯಾಳು ಬಸವರಾಜ ಕಂಬಾರರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ತಿಕೋಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ: ನೆಲಮಂಗಲ: ಪರವಾನಗಿ ಪಡೆಯದೆ ಅಕ್ರಮ ಗ್ಯಾಸ್ ರೀಫಿಲಿಂಗ್ ಮಾಡುತ್ತಿದ್ದ ಮನೆ ಮೇಲೆ ಸಿಸಿಬಿ ದಾಳಿ; ಓರ್ವನ ಬಂಧನ

ಇದನ್ನೂ ಓದಿ: ರೈಲಿಗೆ ಸಿಲುಕಿ ಸಾಗರ ಕೋರ್ಟ್​ ಬೆಂಚ್ ಕ್ಲರ್ಕ್ ಆತ್ಮಹತ್ಯೆ, ಮತ್ತೊಂದೆಡೆ ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆ

TV9 Kannada


Leave a Reply

Your email address will not be published. Required fields are marked *