ರಾಯಚೂರು: ಒಂದೇ ಮರಕ್ಕೆ ಪ್ರೇಮಿಗಳಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ | Raichur: Two lovers commit suicide by hanging on one tree


ರಾಯಚೂರು: ಒಂದೇ ಮರಕ್ಕೆ ಪ್ರೇಮಿಗಳಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ

ಪ್ರೇಮಿಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ

ರಾಯಚೂರು: ಒಂದೇ ಮರಕ್ಕೆ ಇಬ್ಬರು ಪ್ರೇಮಿಗಳು ನೇಣು (Hang) ಬಿಗಿದುಕೊಂಡು ಆತ್ಮಹತ್ಯೆ ಪ್ರಕರಣ ಹಿನ್ನೆಲೆ ಆತ್ಮಹತ್ಯೆಗೂ ಮುನ್ನ ಇಬ್ಬರ ಮೊಬೈಲ್ ಹೊಡೆದು ಹಾಕಿದ್ದು, ಸಂಜೆಯಿಂದ ತಡರಾತ್ರಿವರೆಗೂ ಸ್ನಾಕ್ಸ್‌ ಸವೆಯುತ್ತಾ ಮಾತುಕತೆ ಮಾಡಿದ್ದಾರೆ. ಪ್ರಿಯತಮೆ ಜೊತೆ ಆತ್ಮಹತ್ಯೆ ಮಾಡಿಕೊಳ್ಳಲೆಂದೇ ಪ್ರೇಮಿ ಬಂದಿದ್ದು, ಜಿಲ್ಲೆ ಸಿಂಧನೂರು ತಾಲ್ಲೂಕಿನ ಆರ್ ಎಚ್ ಕ್ಯಾಂಪ್-3 ನಲ್ಲಿ ಘಟನೆ ನಡೆದಿದೆ. ಮೃತ ಲವ್ ಸರ್ಕಾರ್ ಹಾಗೂ ಮೃತ ಕರೀನಾ ಅಕ್ಕ-ಪಕ್ಕದ ಕ್ಯಾಂಪ್ ನಿವಾಸಿಗಳು. ಕಳೆದ ಮೂರ್ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಸರ್ಕಾರ್ & ಕರೀನಾ ಬೆಂಗಳೂರಿನ ಕಂಪೆನಿಯೊಂದರಲ್ಲಿ ಸರ್ಕಾರ್ ಕೆಲಸ ಮಾಡುತ್ತಿದ್ದ. ಕಳೆದ ಮೂರು ತಿಂಗಳ ಹಿಂದೆ ಬೇರೋಬ್ಬ ಯುವತಿ ಜೊತೆ ಸರ್ಕಾರ್ ಮದುವೆಯಾಗಿದ್ದು, ಕಳೆದ ಮೂರು ದಿನಗಳ ಹಿಂದೆ ಸಿಂಧನೂರು ತಾಲೂಕಿನ ಆರ್​ಎಚ್ ಕ್ಯಾಂಪ್-5ಕ್ಕೆ ಬಂದಿದ್ದ. ಈ ವೇಳೆ ಪಕ್ಕದ ಆರ್​ಎಚ್ ಕ್ಯಾಂಪ್-3 ಬಳಿ ಕರೀನಾ ಭೇಟಿಯಾಗಿದ್ದು, ಸಂಜೆ ಹೊಲವೊಂದರಲ್ಲಿ ಸ್ನಾಕ್ಸ್ ತಿಂದು ತಡ ರಾತ್ರಿವರೆಗೂ ಮಾತುಕತೆ ನಡೆಸಿದ್ದಾರೆ. ಆ ಬಳಿಕ ಇಬ್ಬರು ಮೊಬೈಲ್ ಫೋನ್​ಗಳನ್ನ ಅಲ್ಲಿಯೇ ಹೊಡೆದು ಹಾಕಿ, ಬಳಿಕ ಒಂದೇ ಸೀರೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪತ್ನಿಯನ್ನೇ ಅನುಮಾನಿಸಿ ಹತೆಗೈದ ಪತಿರಾಯ;

ಬೆಂಗಳೂರು: ಪತ್ನಿಯ ಶೀಲ‌ ಶಂಕಿಸಿ ತಲೆಗೆ ದೊಣ್ಣೆಯಿಂದ ಹೊಡೆದು ಪತಿ ಕೊಲೆಗೈದಿರುವಂತಹ ಘಟನೆ ತಡರಾತ್ರಿ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯ ನಾಗೇಗೌಡನಪಾಳ್ಯದಲ್ಲಿ ನಡೆದಿದೆ. ಪದ್ಮಾ ಕೊಲೆಯಾದ ದುರ್ದೈವಿ. ಪತಿ ಮಾರಪ್ಪನಿಂದ ಕೃತ್ಯ ಎಸಗಲಾಗಿದೆ. ಶಾಲೆಯೊಂದರಲ್ಲಿ ಆಯಾ ಕೆಲಸ ಮಾಡಿಕೊಂಡಿದ್ದ ಪದ್ಮಾ. ಕೆಲಸವಿಲ್ಲದೇ ಮದ್ಯಪಾನಕ್ಕೆ ಮಾರಪ್ಪ ದಾಸನಾಗಿದ್ದ. ಆರೋಪಿ ಮಾರಪ್ಪನನ್ನ ಪೊಲೀಸರು ಬಂಧಿಸಿದ್ದು, ತಲಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಬಡ್ಡಿ ದಂಧೆಕೋರರ ಮಾರಣಾಂತಿಕ ಹಲ್ಲೆ; ಯುವಕ ಸಾವು:

ಗದಗ: ಬಡ್ಡಿ ದಂಧೆಕೋರರ ಅಟ್ಟಹಾಸದಿಂದ ಮಾರಣಾಂತಿಕ ಹಲ್ಲೆಗೆ ಒಳಗಾಗಿ ಯುವಕ ಬಲಿಯಾಗಿರುವಂತಹ ಘಟನೆ ನಗರದ ಬೆಟಗೇರಿಯಲ್ಲಿ ನಡೆದಿದೆ. ಮೃತ್ಯುಂಜಯ ಭರಮಗೌಡರ್ (26) ಚಿಕಿತ್ಸೆ ಫಲಕಾರಿಯಾಗದೆ ಜಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಮಾರ್ಚ್ 23ರಂದು‌ ಬಡ್ಡಿ ಹಣಕ್ಕಾಗಿ ಯುವಕನನ್ನು ಹಿಗ್ಗಾಮುಗ್ಗಾ ಥಳಿಸಿದ್ದ ರೌಡಿ ಶೀಟರ್ ಗ್ಯಾಂಗ್, ಮೂರು ದಿನ‌ ಕೂಡಿ ಹಾಕಿ ಚಿತ್ರಹಿಂಸೆ ನೀಡಿದ್ದರು. 29 ದಿನಗಳ ಬಳಿಕ ಚಿಕಿತ್ಸೆ ಫಲಿಸದೇ ಯುವಕ ಸಾವನ್ನಪ್ಪಿದ್ದಾನೆ. 2 ಲಕ್ಷ ಸಾಲಕ್ಕೆ ಒಂದು ಲಕ್ಷ ಬಡ್ಡಿ ಹಣಕ್ಕೆ ಒತ್ತಾಯಿಸಿದ್ದ ದಂಧೆಕೋರರು, ಬಡ್ಡಿ ಹಣಕ್ಕಾಗಿ ಜಮೀನಿಗೆ ಕರೆದ್ಯೊಯ್ದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ರೌಡಿ ಶೀಟರ್ ಉಮೇಶ್ ಸುಂಕದ, ಉದಯ ಸುಂಕದ ಅಂಡ್ ಗ್ಯಾಂಗ್ ನಿಂದ ಹಲ್ಲೆ ಮಾಡಲಾಗಿದ್ದು, ಮಾಧ್ಯಮದಲ್ಲಿ ಸುದ್ದಿ ಪ್ರಸಾರ ಬಳಿಕ ಉಮೇಶ್ ಸುಂಕದ ಸೇರಿದಂತೆ ಮೂವರ ಬಂಧನ ಮಾಡಲಾಗಿದೆ. ಬೆಟಗೇರಿ ಭಾಗದಲ್ಲಿರುವ ವ್ಯಾಪಕ ಬಡ್ಡಿ ವ್ಯವಹಾರ ಆರೋಪ ಕೇಳಿಬರುತ್ತಿದೆ. ಬೆಟಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

TV9 Kannada


Leave a Reply

Your email address will not be published.