ರಾಯಚೂರು: ಮಳೆಯಿಂದ ಅಪಾರ ಹಾನಿ; 40,534 ಹೆಕ್ಟೇರ್‌ನಷ್ಟು ಬೆಳೆ ನಾಶ | Raichur Rainfall Farmers issue Heavy Rainfall effected negatively on Farm Lands details here

ರಾಯಚೂರು: ಮಳೆಯಿಂದ ಅಪಾರ ಹಾನಿ; 40,534 ಹೆಕ್ಟೇರ್‌ನಷ್ಟು ಬೆಳೆ ನಾಶ

ರಾಯಚೂರು: ಮಳೆಯಿಂದ ಅಪಾರ ಹಾನಿ

ರಾಯಚೂರು: ಕಳೆದ ಕೆಲವು ದಿನಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ವಿವಿಧ ಜಿಲ್ಲೆಗಳಲ್ಲಿ ಅಪಾರ ಪ್ರಮಾಣದ ಆಸ್ತಿ ಪಾಸ್ತಿ, ಬೆಳೆ ಹಾನಿ ಉಂಟಾಗಿದೆ. ಅದರಂತೆ, ರಾಯಚೂರು ಜಿಲ್ಲೆಯಲ್ಲಿ ಕೂಡ ಬಹಳಷ್ಟು ಪ್ರಮಾಣದ ಹಾನಿ ಸಂಭವಿಸಿದೆ. ಜಿಲ್ಲೆಯ ಬೆಳೆ ಹಾನಿ ಅಂಕಿ- ಅಂಶವನ್ನು ಇದೀಗ ಬಿಡುಗಡೆ ಮಾಡಲಾಗಿದೆ. ಅದರಂತೆ, ರಾಯಚೂರು ಜಿಲ್ಲೆಯಲ್ಲಿ 40,534 ಹೆಕ್ಟೇರ್‌ನಷ್ಟು ಬೆಳೆ ನಾಶ ಆಗಿದೆ ಎಂದು ತಿಳಿದುಬಂದಿದೆ.

ಅತಿಹೆಚ್ಚು 34,496 ಹೆಕ್ಟೇರ್‌ನಲ್ಲಿದ್ದ ಭತ್ತದ ಬೆಳೆ ನಾಶವಾಗಿದೆ. ಸಿಂಧನೂರು ತಾಲೂಕಿನಲ್ಲೇ 24,108 ಹೆಕ್ಟೇರ್‌ನಷ್ಟು ಭತ್ತ ನಾಶ ಆಗಿದೆ. 23 ಹೆಕ್ಟೇರ್​ ಜೋಳ, 3,742 ಹೆಕ್ಟೇರ್ ತೊಗರಿ ಬೆಳೆ, 7 ಹೆಕ್ಟೇರ್ ಶೇಂಗಾ, 1,860 ಹೆಕ್ಟೇರ್‌ನಲ್ಲಿದ್ದ ಕಡಲೆ, 15 ಹೆಕ್ಟೇರ್ ಸೂರ್ಯಕಾಂತಿ, 391 ಹೆಕ್ಟೇರ್ ಹತ್ತಿ ಬೆಳೆ ನಾಶ ಆಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಸಾವಿರಾರು ಹೆಕ್ಟೇರ್ ಬೆಳೆ ನಾಶದಿಂದ ನೂರಾರು ಕೋಟಿ ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ.

ರಾಜಕಾಲುವೆ ಒತ್ತುವರಿ ತೆರವಿಗೆ ಬಿಬಿಎಂಪಿ ತೀರ್ಮಾನ; 714 ಕಟ್ಟಡಗಳ ಪಟ್ಟಿ ಸಿದ್ಧ
ರಾಜಕಾಲುವೆ ಒತ್ತುವರಿ ತೆರವಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ತೀರ್ಮಾನ ಮಾಡಿದೆ. ಒತ್ತುವರಿ ಮಾಡಿರುವ ಕಟ್ಟಡಗಳ ಪಟ್ಟಿಯನ್ನು ಬಿಬಿಎಂಪಿ ತಯಾರು ಮಾಡಿದೆ. ಒಟ್ಟು 714 ಕಟ್ಟಡಗಳ ತೆರವು ಮಾಡಲು BBMP ತೀರ್ಮಾನ ಕೈಗೊಂಡಿದೆ. ಪೂರ್ವ ವಲಯದಲ್ಲಿ 110 ಕಟ್ಟಡ, ಪಶ್ಚಿಮ ವಲಯ 59 ಕಟ್ಟಡ, ದಕ್ಷಿಣ ವಲಯ 20, ಕೋರಮಂಗಲ ವ್ಯಾಲಿ ವಲಯ 3 ಕಟ್ಟಡ, ಯಲಹಂಕ ವಲಯ 103, ಮಹದೇವಪುರ ವಲಯ 184 ಕಟ್ಟಡ, ಬೊಮ್ಮನಹಳ್ಳಿ ವಲಯ 92, ಆರ್.ಆರ್. ನಗರ ವಲಯ 9 ಕಟ್ಟಡ ಹಾಗೂ ದಾಸರಹಳ್ಳಿ ವಲಯದ 134 ಕಟ್ಟಡಗಳನ್ನು ತೆರವು ಮಾಡಲು ಪಟ್ಟಿ ತಯಾರಿಸಲಾಗಿದೆ.

ಸಣ್ಣ ಮಳೆಗೂ ಬೆಂಗಳೂರಿನಲ್ಲಿ ಜಲಪ್ರಳಯ ಕಂಡುಬರುತ್ತಿದೆ. ಸಣ್ಣ ಪುಟ್ಟ ಮಳೆಗೂ ಬೆಂಗಳೂರು ಪ್ರವಾಹ ಎದುರಿಸುತ್ತಿದೆ. ರಾಜಕಾಲುವೆ ಒತ್ತುವರಿ ಪ್ರವಾಹಕ್ಕೆ ಒಂದು ಮುಖ್ಯ ಕಾರಣ ಎನ್ನಲಾಗುತ್ತಿದೆ. ಇದೀಗ, ರಾಜಕಾಲುವೆ ಒತ್ತುವರಿಗಳನ್ನು ತೆರವು ಮಾಡಲು ತೀರ್ಮಾನ ಮಾಡಲಾಗಿದೆ. ಇದೀಗ ಶತಾಯಗತಾಯ ಒತ್ತುವರಿ ತೆರವಿಗೆ ತೀರ್ಮಾನ ಮಾಡಲಾಗಿದೆ. ಬಿಬಿಎಂಪಿಯಿಂದ ಒತ್ತುವರಿ ಮಾಡಿರುವ ಕಟ್ಟಡಗಳ ಪಟ್ಟಿ ಸಿದ್ಧವಾಗಿದೆ.

ಇದನ್ನೂ ಓದಿ: ಭಾರೀ ಮಳೆಗೆ ಐದು ಲಕ್ಷ ಹೆಕ್ಟೇರ್ ಬೆಳೆ ನಾಶ; ದುಪ್ಪಟ್ಟಾದ ತರಕಾರಿ ಬೆಲೆ, ಪ್ಯಾಕೆಟ್ ಒಂದರಲ್ಲಿ 2 ಟೊಮೆಟೋ ಮಾರಾಟ!

ಇದನ್ನೂ ಓದಿ: ಮಳೆ ಹಾನಿ ಕುರಿತು ಅಧಿಕಾರಿಗಳ ಜತೆ ಸಿಎಂ ಬಸವರಾಜ ಬೊಮ್ಮಾಯಿ ಸಭೆ; ಮುಖ್ಯಾಂಶಗಳು ಇಲ್ಲಿದೆ

TV9 Kannada

Leave a comment

Your email address will not be published. Required fields are marked *