ರಾಯಚೂರು: ಮಾವನ ನಿವೃತ್ತಿ ಹಣಕ್ಕೆ ಕಿರುಕುಳ ನೀಡುತ್ತಿದ್ದ ಪತಿ ಪತ್ನಿಯನ್ನೇ ಕೊಂದ | A man murder his wife for retirement money at Raichur


ರಾಯಚೂರು: ಮಾವನ ನಿವೃತ್ತಿ ಹಣಕ್ಕೆ ಕಿರುಕುಳ ನೀಡುತ್ತಿದ್ದ ಪತಿ ಪತ್ನಿಯನ್ನೇ ಕೊಂದ

ಆರೋಪಿ ಫಜಲುದ್ದೀನ್, ಕೊಲೆತಾದ ಮಹಿಳೆ ಆಸ್ಮಾ ಬಾನು

ರಾಯಚೂರು: ಪತ್ನಿ ಕುತ್ತಿಗೆ ಬಿಗಿದು ಪತಿ ಕೊಲೆ ಮಾಡಿರುವ ಘಟನೆ ರಾಯಚೂರು ನಗರದ ಅಂದ್ರೂನ್ ಕಿಲ್ಲಾದಲ್ಲಿ ಸಂಭವಿಸಿದೆ. 34 ವರ್ಷದ ಆಸ್ಮಾ ಬಾನು ಕೊಲೆಯಾದ ಮಹಿಳೆ. ಪತ್ನಿ ಕೊಂದಿದ್ದ ಪತಿ ಮೊಹಮ್ಮದ್ ಫಜಲುದ್ದೀನ್ ಬಂಧನಕ್ಕೊಳಗಾಗಿದ್ದು, ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ. ಕಳೆದ 8 ವರ್ಷದ ಹಿಂದೆ ಮೃತ ಆಸ್ಮಾ ಬಾನು ಮತ್ತು ಫಜಲುದ್ದೀನ್ ಮದುವೆಯಾಗಿದ್ದರು. ಮದುವೆಯಾದಾಗಿನಿಂದ ಹಣಕ್ಕಾಗಿ ಪತಿ ಪತ್ನಿ ಆಸ್ಮಾಗೆ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ.

ಫಜಲುದ್ದೀನ್ ಚಹಾಪುಡಿ ವ್ಯಾಪಾರ ಮಾಡುತ್ತಿದ್ದ. ತನ್ನ ಹೆಂಡತಿಗೆ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದನಂತೆ. ಮೃತ ಆಸ್ಮಾ ತಂದೆ ಹುಚ್ಚಪೀರ್ ಸಾಬ್ ಕೆಎಸ್ಆರ್​ಟಿಸಿ ಕಂಡಕ್ಟರ್ ಆಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ನಿವೃತ್ತಿ ಹಣದಲ್ಲಿ ಪಾಲು ಬೇಕು ಅಂತ ಪೀಡಿಸುತ್ತಿದ್ದ ಪತಿ ಫಜಲುದ್ದೀನ್ ಪೀಡಿಸುತ್ತಿದ್ದನಂತೆ. ಫಜಲುದ್ದೀನ್ ಜೊತೆ ಆತನ ಸಹೋದರಿಯರು ಕಿರುಕುಳ ನೀಡುತ್ತಿದ್ದರೆಂಬ ಆರೋಪ ಕೇಳಿಬಂದಿದೆ. ಸದ್ಯ ಆರೋಪಿ ಪತಿ ಫಜಲುದ್ದೀನ್ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಲಾಕಪ್​ಡೆತ್​ ಪ್ರಕರಣದಲ್ಲಿ ದೂರು ನೀಡಲು ವಿಳಂಬ
ಲಾಕಪ್ಡೆತ್ ಪ್ರಕರಣದಲ್ಲಿ ದೂರು ನೀಡಲು ಸಂಬಂಧಿಕರು ವಿಳಂಬ ಮಾಡಿದ ಹಿನ್ನೆಲೆ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ಸಿಐಡಿಗೆ ಪ್ರಕರಣ ವರ್ಗಾವಣೆ ಮಾಡಲಾಗಿದೆ ಅಂತ ದಾವಣಗೆರೆಯಲ್ಲಿ ಎಸ್ಪಿ ಸಿಬಿ ರಿಷ್ಯಂತ್ ಮಾಹಿತಿ ನೀಡಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಬಳಿಯ ಬಹಾದ್ದೂರ ಘಟ್ಟ ಗ್ರಾಮದ ನಿವಾಸಿ ಭರಮಸಾಗರ ಬಳಿ ಕುಮಾರ್(32) ಮೃತಪಟ್ಟಿದ್ದ. ಲಾಕಪ್ಡೆತ್ ಎಂದು ಕುಟುಂಬಸ್ಥರು ಆರೋಪಿಸಿದ್ದರು.

TV9 Kannada


Leave a Reply

Your email address will not be published. Required fields are marked *